ಅಮ್ಮತ್ತಿ : ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕೊರೋನ ವಾರಿರ್ಯರ್ಸ್‌ಗೆ ಸನ್ಮಾನ
ಅಮ್ಮತ್ತಿ (Times Of Coorg):- ಅಮ್ಮತ್ತಿ ಆಟೋ ಮಾಲಿಕರ ಮತ್ತು ಚಾಲಕರ ಸಂಘದ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ನಾಡಿನ ಕೊರೋನ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರು , ಆರೋಗ್ಯ ಕರ್ತೆಯಾದ ಸಿಸ್ಟರ್ ಸೀತಮ್ಮ , ಅಮ್ಮತ್ತಿ ನಾಡಿನಲ್ಲಿ ಸಾಮಾಜಿಕ ಅಂತರ ಸ್ಥಾಪಿಸಲು ನಿರತರಾಗಿರುವ ಮಾಜಿ ಪಂಚಾಯಿತಿ ಸದಸ್ಯೆ ಜಯಮ್ಮ ಅವರನ್ನು ಸನ್ಮಾನಿಸಲಾಯಿತು. ಕಳೆದ ನಲ್ವತ್ತು ವರ್ಷಗಳಿಂದ ಅಮ್ಮತ್ತಿ ನಾಡಿನಲ್ಲಿ ದಿನ ರಾತ್ರಿ ಲೆಕ್ಕಿಸದೇ ಬಡವರಿಗೆ ಅತೀ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿರುವ ಡಾ. ಬೋಪಣ್ಣ ರವರನ್ನೂ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಅಮ್ಮತ್ತಿ ಪೋಲಿಸ್ ಠಾಣಾಧಿಕಾರಿ ಜೋಯಪ್ಪ ಅವರು ಧ್ವಜಾರೋಹಣ ಮಾಡಿದರು. ಕಾರ್ಯಕ್ರಮವನ್ನು ಅಭಿಜಿತ್ ನಿರೂಪಿಸಿದರು. ಈ ಸಂಧರ್ಭ ಆಟೋ ಮಾಲಿಕರ ಮತ್ತು ಚಾಲಕರ ಸಂಘದ ಪ್ರಮುಖರಾದ ದೊಂಬಯ್ಯ , ಅಗಸ್ಟಿನ್ , ಶ್ರೀಜು , ರಿಚಾರ್ಡ್ , ಮೋಹನ್ ಹಾಗು ಇನ್ನಿತರರು ಉಪಸ್ಥಿತರಿದ್ದರು.


No comments
Post a Comment