ಸೌಹಾರ್ದತೆಯ ದೇಶ ಕಟ್ಟಲು ಮುಂದಾಗಿ:ಮಾಜಿ ಶಾಸಕ ಕೆ.ವೆಂಕಟೇಶ್. ಪಿರಿಯಾಪಟ್ಟಣದಲ್ಲಿ ಈದ್ ಮಿಲಾದ್ ಸಮಾರೋಪ

No comments
ವರದಿ:newsline media 
ಸಿದ್ದಾಪುರ :-ದೇಶದಲ್ಲಿ ಆಳುತ್ತಿರುವ ಬಿಜೆಪಿಯಿಂದ ಸಾಮಾನ್ಯ ಜನರು ಆತಂಕದ ಜೀವನ ನಡೆಸುವಂತಾಗಿದ್ದು ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರರನ್ನ ಸಾಮಾಜಿಕವಾಗಿ ತುಳಿಯುವ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಸಚಿವ ಕೆ ವೆಂಕಟೇಶ್   ವಿಷಾದ ವ್ಯಕ್ತಪಡಿಸಿದರು .ಪಿರಿಯಾಪಟ್ಟಣ ಮಲಬಾರ್ ಜುಮಾ ಮಸೀದಿ ಸಮಿತಿಯಿಂದ ನಡೆದ ಈದ್ ಮಿಲಾದ್ ಸಮಾರೋಪ ಸಮಾರಂಭದ   ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿಭವ್ಯ ಭಾರತ ದೇಶದಲ್ಲಿ ಎಲ್ಲಾ ಧರ್ಮಿಯರು ಆಚಾರ ವಿಚಾರ ಸಂಸ್ಕೃತಿ ಪರಂಪರೆ ಯೊಂದಿಗೆ ಸಂವಿಧಾನದ ಆಶಯದಂತೆ  ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸೌಹಾರ್ದತಾ ದೇಶದಲ್ಲಿ ಒಡಕುಂಟು ಮಾಡಲು  ಬಿಜೆಪಿ ತನ್ನ ಅಂಗ ಸಂಸ್ಥೆ ಮೂಲಕ ಅಶಾಂತಿ ಸೃಷ್ಟಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದ ಅವರು ದೇಶದ ಐಕ್ಯತೆಯ ಒಡೆದು ಆಳುವವರನ್ನ ದೂರ ಇಡಬೇಕಾಗಿದೆ. ಎಲ್ಲಾ ಧರ್ಮದ ಆಚಾರ ವಿಚಾರ ಸಂಸ್ಕೃತಿ ಪರಂಪರೆಯನ್ನು ಗೌರವಿಸುವ ಮೂಲಕ ನಾವೆಲ್ಲರೂ ಒಗ್ಗಟ್ಟಿನೊಂದಿಗೆ ಮತ್ತೆ ದೇಶ ಕಟ್ಟುವ ಕೆಲಸ ಮಾಡಬೇಕೆಂದು ಹೇಳಿದ ಅವರು ಸರ್ವಧರ್ಮಿಯರನ್ನು ಒಗ್ಗೂಡಿಸಿ ಈದ್ ಮಿಲಾದ್ ಆಚರಣೆ ಮಾಡುತ್ತಿರುವದು ಶ್ಲಾಘನೀಯ ಎಂದರು.ಮಾಜಿ ಶಾಸಕ ಕೆ.ಎಂ ಇಬ್ರಾಹಿಂ ಮಾಸ್ಟರ್ ಮಾತನಾಡಿ  ಸಾಮರಸ್ಯದಿಂದ ಜೀವನ ನಡೆಸುವ ಜನರ ಮಧ್ಯೆ ಅಶಾಂತಿ ಸೃಷ್ಟಿ ಮಾಡಲು ಮುಂದಾಗಿರುವುದು ವಿಷಾದನೀಯ ಒಂದು ವರ್ಗವನ್ನು ಗುರಿಯಾಗಿಸಿ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿರುವದು ಸರಿಯಲ್ಲ ಅಶಾಂತಿ ಸೃಷ್ಟಿ ಮಾಡುವವರನ್ನ ದೂರವಿಟ್ಟು ಸಮಾಜ ಕಟ್ಟುವ ಕೆಲಸ ನಾವೆಲ್ಲರೂ ಮಾಡುವ ಎಂದು ಹೇಳಿದರು.ಧಾರ್ಮಿಕ ಪಂಡಿತ ಮುಸ್ತಫಾ ಹುದವಿ ಅಕೋಡ್ ಮಿಲಾದ್ ಸಂದೇಶ ಭಾಷಣ ಮಾಡಿದರು .ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು .ಮಕ್ಕಳ ಕಲಾ, ಸಾಹಿತ್ಯ, ದಫ್ ಸ್ಪರ್ಧೆ ಗಮನ ಸೆಳೆಯಿತು.ಮಲಬಾರ್ ಜುಮಾ ಮಸೀದಿ ಸಮಿತಿ ಅಧ್ಯಕ್ಷ ಮುಹಮ್ಮದ್ ರಾಫಿ,ಪುರಸಭಾ ಸದಸ್ಯರಾದ ಮುಷೀರ್, ರವಿ,ಕಾಂಗ್ರೆಸ್ ಮುಖಂಡ ಎಸ್. ಜಿ ವೆಂಕಟೇಶ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಸಫೀರ್ ಅಹ್ಮದ್, ಪ್ರಮುಖರಾದ ಮಹದೇಶ,ಸಿಪಿಎಂ ಬಶೀರ್ ಹಾಜಿ,ತಮ್ಲಿಕ್ ದಾರಿಮಿ, ಹಮೀದ್ ಮೌಲವಿ,ರವೂಫ್ ಹಾಜಿ,ಕೆ. ಎಂ ಬಶೀರ್ ಸೇರಿದಂತೆ ಮಲಬಾರ್ ಮುಸ್ಲಿಂ ಸಮಿತಿ ಪದಾಧಿಕಾರಿಗಳು ಹಾಜರಿದ್ದರು .      

No comments

Post a Comment