ವಿರಾಜಪೇಟೆಯಲ್ಲಿ ಮಾಧ್ಯಮ ಕಾರ್ಯಾಗಾರ

No comments
Newsline media 
ವಿರಾಜಪೇಟೆ: ಮಾಧ್ಯಮ ರಂಗದಲ್ಲಿರುವ ಉದ್ಯೋಗಾವಕಾಶಗಳನ್ನು ಯುವಜನರು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಕೆ.ಸಿ. ದಯಾನಂದ್ ಕರೆ ನೀಡಿದರು.ಕೊಡಗು ಪ್ರೆಸ್ ಕ್ಲಬ್, ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಅರ್ಥಶಾಸ್ತ್ರ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಯುಕ್ತಾಶ್ರಯದಲ್ಲಿ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಾಧ್ಯಮ ದೇಶದ ಬೆನ್ನೆಲುಬು. ಸಂವಿಧಾನ ಬದ್ಧ ಮೂರು ಅಂಗಗಳಿಗಿಂತ ಮಾಧ್ಯಮ ರಂಗ ಶ್ರೇಷ್ಠ ಅಂಗ ಎಂದು ಬಣ್ಣಿಸಿದರು.ವರದಿಗಳು ವಸ್ತುನಿಷ್ಠವಾಗಿರ ಬೇಕು. ಮಾಧ್ಯಮಗಳು ರಾಜಕೀಯ ಸುದ್ದಿ ವೈಭವೀಕರಿಸುತ್ತಿರುವುದು ಸರಿಯಲ್ಲ ಎಂದರು.ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳಲು ವೃತ್ತಿಪರ ವಿಷಯದ ಅರಿವು ಮಾಡಿಸಲು ಮಾಧ್ಯಮ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.ವೈಯುಕ್ತಿಕ ಆಸಕ್ತಿಯಿಂದ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಹೇಳಿದರು.ವಿದ್ಯಾರ್ಥಿಗಳಿಗೆ ಮಾಧ್ಯಮದ ಬಗ್ಗೆ ಅರಿವು ಮೂಡಿಸಲು ಮಾಧ್ಯಮ ಕಾರ್ಯಾಗಾರ ಆಯೋಜಿಸಿರುವುದು ಶ್ಲಾಘನೀಯ ಎಂದರು.ಪದವಿ ಮುಗಿದ ಬಳಿಕ ಮುಂದೇನು ಮಾಡುವುದು ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿ ಇರುತ್ತದೆ. ದೃಶ್ಯ ಮಾಧ್ಯಮದಲ್ಲಿ ಒಳ್ಳೆಯ ಉದ್ಯೋಗಾವಕಾಶ ಇದೆ ಎಂದು ಸಂಪನ್ಮೂಲ ವ್ಯಕ್ತಿ ಪತ್ರಕರ್ತ ಐಮಂಡ ಗೋಪಾಲ್ ಸೋಮಯ್ಯ ಹೇಳಿದರು.ಪದವಿಯೊಂದಿಗೆ ವೃತ್ತಿಪರ ಶಿಕ್ಷಣದಿಂದ ಉದ್ಯೋಗಾವಕಾಶ ಸಿಗಲಿದೆ. ಮಾಧ್ಯಮ ರಂಗ ವ್ಯಾಪ್ತಿ ವಿಸ್ತಾರವಾಗಿದೆ ಎಂದು ಸಂಪನ್ಮೂಲ ವ್ಯಕ್ತಿ, ಪತ್ರಿಕೋದ್ಯಮ ಉಪನ್ಯಾಸಕ ಐನಂಡ ಸೋಮಣ್ಣ ಹೇಳಿದರು.ಪಿಆರ್ ಒ, ಜಾಹೀರಾತು, ತಾಂತ್ರಿಕ ಬರವಣಿಗೆ ಸೇರಿದಂತೆ ಹಲವಾರು ಉದ್ಯೋಗಾವಕಾಶ ಇದೆ ಎಂದರು.ಮಾಧ್ಯಮ ರಂಗದಲ್ಲಿ ತಾಂತ್ರಿಕ ಉದ್ಯೋಗಾವಕಾಶ ಹೆಚ್ಚಿದೆ. ವಿಡಿಯೋ ಜರ್ನಲಿಸ್ಟ್, ಫೋಟೋಗ್ರಾಫರ್ ಗಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕೆಂದು ಸಂಪನ್ಮೂಲ ವ್ಯಕ್ತಿ, ಪತ್ರಕರ್ತ ಮಂದನೆರವಂಡ ಯುಗ ದೇವಯ್ಯ ಹೇಳಿದರು.ಮಾಧ್ಯಮ ಕ್ಷೇತ್ರ ಪ್ರಜಾಪ್ರಭುತ್ವದ 4ನೇ ಅಂಗ ಎಂದು ಗುರುತಿಸಲ್ಪಟ್ಟಿದೆ. ಮುದ್ರಣ ಮಾಧ್ಯಮ ಇಂದಿಗೂ ಜನರ ವಿಶ್ವಾಸ ಉಳಿಸಿಕೊಂಡಿದೆ ಎಂದು ಸಂಪನ್ಮೂಲ ವ್ಯಕ್ತಿ, ಪತ್ರಕರ್ತ ಕೆ.ಕೆ. ರೆಜಿತ್ ಕುಮಾರ್ ಹೇಳಿದರು.ಮಾಧ್ಯಮ ರಂಗದ ಮೂಲಕ ಸಾರ್ಥಕ ಜೀವನ ಸಾಗಿಸಲು ಅವಕಾಶವಿದೆ ಎಂದು ಸಮಾರೋಪ ಭಾಷಣ ಮಾಡಿದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹೇಳಿದರು.ವೇದಿಕೆಯಲ್ಲಿ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅರ್ಥಶಾಸ್ತ್ರ ಉಪನ್ಯಾಸಕಿ ಸುನೀತಾ ಇದ್ದರು. ವಿದ್ಯಾರ್ಥಿ ಕಿಶೋರ್ ನಿರೂಪಿಸಿದರು.

No comments

Post a Comment