ಮಾಲ್ದಾರೆಯಲ್ಲಿ ಈದ್ ಮಿಲಾದ್ ಸಂಭ್ರಮ

No comments
ವರದಿ : *ಮಾಲ್ದಾರೆ ಅಂತೋಣಿ* 
ಸಿದ್ದಾಪುರ :- ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಜನ್ಮ ದಿನಾಚರಣೆಯ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಪ್ರವಾದಿ ಸಂದೇಶ ದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮದರಸಾ  ವಿದ್ಯಾರ್ಥಿಗಳ ದಫ್ ಪ್ರದರ್ಶನ ಗಮನ ಸೆಳೆಯಿತು.ಬಾಡಗ ಮಸೀದಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾ, ಸಾಹಿತ್ಯ, ಬುರ್ದಾ ಮಜ್ಲಿಸ್, ದಫ್  ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.  ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.  ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಮೊಯಿದ್ದೀನ್,        ಕಾರ್ಯದರ್ಶಿ ಇಸ್ಮಾಯಿಲ್, ಪ್ರಮುಖರಾದ ಅಬ್ದುಲ್ ಖಾದರ್ ಸಖಾಫಿ, ನೌಶಾದ್, ಅಶ್ರಫ್,ಕಮರು ಉಸ್ತಾದ್,  ನಾಸರ್ ಉಸ್ತಾದ್,  ಆಬುಟ್ಟಿ, ಹನೀಫ್, ಶೌಕತ್ಅಲಿ, ಗಫೂರ್,ಸೇರಿದಂತೆ ಮತ್ತಿತರರು ಹಾಜರಿದ್ದರು

No comments

Post a Comment