ಸಿದ್ದಾಪುರದಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ. ಗಮನ ಸೆಳೆದ ವಿದ್ಯಾರ್ಥಿಗಳ ದಫ್ ಕಾರ್ಯಕ್ರಮ

No comments
ಸಿದ್ದಾಪುರ :- ವಿಶ್ವ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಸಿದರು.ಸಿದ್ದಾಪುರ ಮುಸ್ಲಿಂ ಅಸೋಸಿಯೇಷನ್ ನೇತೃತ್ವದಲ್ಲಿ ಈದ್ ಮಿಲಾದ್ ಸ್ವಾಗತ ಸಮಿತಿಯಿಂದ ನಡೆದ ಆಚರಣೆಗೆ ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಯು. ಎಂ ಮುಸ್ತಫಾ ಹಾಜಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಮುನವ್ವಿರುಲ್ ಇಸ್ಲಾಂ ಮದರಸ ಆವರಣದಲ್ಲಿ ನಡೆದ ಮದರಸಾ ವಿದ್ಯಾರ್ಥಿಗಳ ದಫ್,ಬುರ್ದಾ ಮಜ್ಲಿಸ್,  ಕಲಾ, ಸಾಹಿತ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.ಎಸ್ ಎಂ ಒ ವಿದ್ಯಾರ್ಥಿಗಳ ದಫ್ ಪ್ರದರ್ಶನ ನೆರೆದಿದ್ದವರ ಗಮನ ಸೆಳೆಯಿತು.ಮದರಸಾ ಶಿಕ್ಷಣದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು .ಈದ್ ಮಿಲಾದ್ ಕಾರ್ಯಕ್ರಮದ ಸ್ವರ್ಧೆಯಲ್ಲಿ ಭಾಗವಹಿಸಿದ ಹಳೆ ವಿದ್ಯಾರ್ಥಿಗಳು ಹಿರಿಯರು ಮದರಸ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಈ ಸಂದರ್ಭ  ಜುಮಾ ಮಸೀದಿಯ ಖತೀಬ್ ನೌಫಲ್ ಹುದವಿಮುಸ್ಲಿಂ ಜಮಾಅತ್ ಉಪಾಧ್ಯಕ್ಷ  ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿ ರವೂಫ್ ಹಾಜಿ, ಕಾರ್ಯದರ್ಶಿಗಳಾದ ಸಿ.ಎಂ ಅಬ್ದುಲ್ ಕರೀಂ, ಆಸ್ಕರ್ ಖಚಾಂಜಿ ಕೆ. ಯು ಅಬ್ದುಲ್ ಮಜೀದ್,ಸದಸ್ಯರುಗಳಾದ ಸಮೀರ್, ನವಾಬ್, ವಾಜಿದ್, ಅಲಿ, ಮಜೀದ್  ಮುಖ್ಯಶಿಕ್ಷಕ  ಆರಿಫ್ ಪೈಝಿ,  ಈದ್ ಮಿಲಾದ್ ಸ್ವಾಗತ ಸಮಿತಿ ಅಧ್ಯಕ್ಷ ವಿ. ಕೆ ಬಶೀರ್ ಪ್ರಮುಖರಾದ ಮಜೀದ್ ಹಾಜಿ, ಉಮರ್ ಫೈಝಿ, ಅಧ್ಯಾಪಕರುಗಳಾದ  ಅಬ್ದುಲ್ ಕರೀಮ್ ಮುಸ್ಲಿಯಾರ್, ಅಬೂಬಕರ್ ವಾಫಿ, ಹನೀಫ್ ಮುಸ್ಲಿಯಾರ್, ಯೂಸುಫ್ ಮುಸ್ಲಿಯಾರ್, ಮೊಯಿದ್ದೀನ್  ಮುಸ್ಲಿಯಾರ್, ಹಮೀನ್ ಸೇರಿದಂತೆ ಮತ್ತಿತರರು ಇದ್ದರು .

No comments

Post a Comment