ಸಿದ್ದಾಪುರದಲ್ಲಿ ಆ11-12ರಂದು ಈದ್ ಮಿಲಾದ್ ಆಚರಣೆಗೆ ಸಿದ್ಧತೆ

No comments
ಸಿದ್ದಾಪುರ :- ವಿಶ್ವ ಪ್ರವಾದಿ ಅವರ ಜನ್ಮದಿನಾಚರಣೆಯ ಈದ್ ಮಿಲಾದ್  ಹಬ್ಬವನ್ನು ಆ 11 - 12ರಂದು ಮುನವ್ವಿರುಲ್ ಇಸ್ಲಾಂ ಮದರಸ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು  ಸಿದ್ದಾಪುರ ಮುಸ್ಲಿಂ ಅಸೋಸಿಯೇಷನ್ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಈದ್ ಮಿಲಾದ್ ಆಚರಣೆಯ ಸ್ವಾಗತ ಸಮಿತಿ ಅಧ್ಯಕ್ಷ ವಿ. ಕೆ ಬಶೀರ್ ತಿಳಿಸಿದ್ದಾರೆ.
2ದಿನಗಳ ಕಾರ್ಯಕ್ರಮದಲ್ಲಿ  ಕಲಾ, ಸಾಹಿತ್ಯ, ಧಾರ್ಮಿಕ ಪಠನಾ, ದಫ್,ಬುರ್ದಾ ಮಜ್ಲಿಸ್ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಆ 12 ರಂದು ಸಂಜೆ ಉಸ್ತಾದ್ ಹಾರಿಸ್ ಅಬ್ದುಲ್ಲಾ ಹುದವಿ ತಂಡದವರಿಂದ ಬುರ್ದಾ  ನಡೆಯಲಿದೆ .ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಧಾರ್ಮಿಕ ಪಂಡಿತರು, ಮುಖಂಡರುಗಳು, ಜನಪ್ರತಿನಿಧಿಗಳು, ಭಾಗವಹಿಸಲಿದ್ದಾರೆ.

No comments

Post a Comment