ಅರಣ್ಯ ಇಲಾಖೆ ವಶದಲ್ಲಿದ್ದ ಕರಿಯಪ್ಪ ಸಾವು ಪ್ರಕರಣ ಉನ್ನತಮಟ್ಟದ ತನಿಖೆಗೆ ಒತ್ತಾಯ.ಅಧಿಕಾರಿಗಳನ್ನ ಸೇವೆಯಿಂದ ವಜಾಗೊಳಿಸಲು ಆಗ್ರಹ : ಜೆ.ಕೆ ತಿಮ್ಮ

No comments
ಸಿದ್ದಾಪುರ :- ಎಚ್ ಡಿ ಕೋಟೆ ತಾಲ್ಲೂಕಿನ ಗುಂಡ್ರೆ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಅಮಾನುಷವಾಗಿ ಹತ್ಯೆಯಾದ ಜೇನು ಕುರುಬ ಸಮುದಾಯದ ಕರಿಯಪ್ಪ  ಸಾವು ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ಮಾಡಿ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವುದರೊಂದಿಗೆ ಕುಟುಂಬಕ್ಕೆ 1ಕೋಟಿ ಪರಿಹಾರ ನೀಡಬೇಕೆಂದು    ಕರ್ನಾಟಕ ರಾಜ್ಯ ಮೂಲ ಆದಿವಾಸಿ ವೇದಿಕೆಯ ಉಪಾಧ್ಯಕ್ಷ ನಾಗರಹೊಳೆಯ ಜೆ.ಕೆ.ತಿಮ್ಮ  ಸರಕಾರವನ್ನು ಒತ್ತಾಯಿಸಿದ್ದಾರೆ. ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿ ಮೈಸೂರು ಜಿಲ್ಲೆ ಹೆಗ್ಗಡೆದೇವನ ಕೋಟೆ ತಾಲೂಕಿನ ಜೇನುಕುರುಬ ಸಮುದಾಯದ ಕರಿಯಪ್ಪ ನನ್ನು ಜಿಂಕೆ ಮಾಂಸದ ಪ್ರಕರಣದಲ್ಲಿ  ವಿಚಾರಣೆ ನಡೆಸುವ ನೆಪದಲ್ಲಿ ಅಮಾನುಷವಾಗಿ ಹೊಡೆದು ಕೊಂದು ಹಾಕಿದ ಪ್ರಕರಣವನ್ನು  ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದ ಅವರು ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ರಾಜ್ಯದ ನಾನಾ  ಭಾಗಗಳಲ್ಲಿ ಬಹಳ  ಹಿಂದಿನಿಂದಲು  ನಿರಂತರವಾಗಿ ಅರಣ್ಯಾಧಿಕಾರಿಗಳು ಆದಿವಾಸಿಗಳನ್ನು ಅಮಾನವೀಯವಾಗಿ ನಡೆಸಿ ಕೊಳ್ಳುತಿದ್ದು ಉದ್ದೇಶಪೂರ್ವಕವಾಗಿ ಸುಳ್ಳು  ಕೇಸುಗಳನ್ನು ಹಾಕಿ ಬಂದಿಸಿ ಹಲ್ಲೆ ನಡೆಸಿ ಕೊಂದು ಹಾಕುವ ಅತಿರೇಕದ ನಡುವಳಿಕೆ ಯನ್ನ ಪ್ರದರ್ಶಿಸುತ್ತಿರುವ ಅಧಿಕಾರಿಗಳ ಮನ ಸ್ಥಿತಿಯನ್ನು ತೀವ್ರವಾಗಿ ಖಂಡಿಸುತ್ತೇವೆ.
ರಾಜ್ಯದ ಅರಣ್ಯ ಪ್ರದೇಶದ ಒಳಗೆ ಮತ್ತು ಕಾಡಂಚಿನಲ್ಲಿ ಶತಮಾನಗಳಿಂದ ಪಾರಂಪರಿಕವಾಗಿ ಅರಣ್ಯದ ಅವಿಭಾಜ್ಯ ಅಂಗವಾಗಿ ಬದುಕುತ್ತಿರುವ ಆದಿವಾಸಿಗಳ ಮೇಲೆ ದಿನ ನಿತ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ಷುಲ್ಲಕ ಕಾರಣಕ್ಕೆ ಹೊಡೆಯುವುದು, ಬಡಿಯುವುದು  ಯಾರೋ ಮಾಡಿದ ತಪ್ಪನ್ನು ಆದಿವಾಸಿಗಳ ಮೇಲೆ ಹಾಕಿ ಸುಳ್ಳು ಪ್ರಕರಣವನ್ನು ಧಾಖಲಿಸಿ ಚಿತ್ರಹಿಂಸೆ ಕೊಡುವುದು ಈ ರೀತಿ ಅನೇಕ ದೌರ್ಜನ್ಯ  ಘಟನೆಗಳು ನಡೆಯುತ್ತಿದೆ .ಆದಿವಾಸಿಗಳನ್ನು ಅಭಿವೃದ್ಧಿಯೊಂದಿಗೆ ಮುಂದು ತರುವ ಪ್ರಯತ್ನವಾಗಲಿ ರಕ್ಷಣೆಯಾಗಲಿ ಸರ್ಕಾರ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕುಟುಂಬಕ್ಕೆ  1ಕೋಟಿ ರೂ ಪರಿಹಾರ ನೀಡುವ ಮೂಲಕ ನ್ಯಾಯ ದೊರಕಿಸಿಕೊಡಬೇಕೆಂದು ಹೇಳಿದ ಅವರು ತಪ್ಪಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು .

No comments

Post a Comment