ಮಡಿಕೇರಿ (web@timesofcoorg) : ನಿರಂತರವಾಗಿ ಧಾರ್ಮಿಕ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿರುವ ಬಿಜೆಪಿ , ಇದೀಗ ಮತ್ತೆ ತಲಕಾವೇರಿ ಕ್ಷೇತ್ರಕ್ಕೆ ನಿರ್ಬಂಧ ಹೇರುವ ಮೂಲಕ ಕುಲದೇವತೆ ಕಾವೇರಿಯ ಆರಾಧಿಸುವವರನ್ನ ಕೆರಳಿಸುವಂತಾಗಿದ್ದು ತಲಕಾವೇರಿ ಕ್ಷೇತ್ರ ಬಿಜೆಪಿಯ ಸ್ವತ್ತಲ್ಲ ಎಂದು ಕೊಡಗು ಕಾಂಗ್ರೆಸ್ ವಕ್ತಾರೆ ಕೇಚಮಾಡ ಸರಿತಾ ಪೂಣಚ್ಚ ಆರೋಪಿಸಿದ್ದಾರೆ.
ಧಾರ್ಮಿಕ ಕ್ಷೇತ್ರಗಳಲ್ಲೂ ತಮ್ಮದೇ ಪಕ್ಷದವರು ಇರಬೇಕೆಂಬ ಕೀಳುಮಟ್ಟದ ರಾಜಕೀಯ ಮಾಡುವ ಮೂಲಕ ಕ್ಷೇತ್ರವನ್ನೇ ತಮ್ಮ ಹಿಡಿತದಲ್ಲಿಟ್ಟುಕೊಂಡು ಜನಾಂಗಗಳ ನಡುವೆ ಒಡಕು ತರುವ ಕೆಲಸ ಮಾಡುತ್ತಿದ್ದಾರೆ.
ತುಲಾ ಸಂಕ್ರಮಣದ ದಿನ ತಲಕಾವೇರಿಯಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಭಂದ ಏರುವ ಮೂಲಕ ಭಕ್ತರನ್ನು ತಡೆಯೊಡ್ಡುವ ಕೆಲಸ ನಡೀತಾ ಇದೆ.ಕೆಲವರ ಹಿತಾಸಕ್ತಿಗಾಗಿ ಧಾರ್ಮಿಕ ಕೇಂದ್ರಗಳಲ್ಲಿ ರಾಜಕೀಯ ಮಾಡುವುದು ಸರಿಯಲ್ಲ.
ಕಳೆದ ಬಾರಿಯು ರಾಜಕೀಯ ಲಾಭಕ್ಕಾಗಿ ಭಕ್ತರಿಗೆ ಕ್ಷೇತ್ರದಲ್ಲಿ ನಿಷೇಧ ಹೇರಲಾಗಿತ್ತು.ಪವಿತ್ರ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ ಭಕ್ತರು ನಿರಾಸೆಯಿಂದ ತೆರಳಬೇಕಾಯಿತ್ತು.ಜಿಲ್ಲೆಯ ಆಚಾರ ವಿಚಾರ ಸಂಸ್ಕೃತಿಯನ್ನು ತಿಳಿಯದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳನ್ನ ಮುಂದಿಟ್ಟು ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡದೆ.ಧಾರ್ಮಿಕ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಸುಸೂತ್ರವಾಗಿ ನಡೆಯಬೇಕು.
ಉಸ್ತುವಾರಿ ಸಚಿವರು ಹಾಗೂ ಸರ್ಕಾರಕ್ಕೆ ತಪ್ಪು ಮಾಹಿತಿಗಳನ್ನು ನೀಡುವ ಬಿಜೆಪಿಯ ಜನಪ್ರತಿನಿಧಿಗಳು, ಇನ್ನಾದರೂ ಧಾರ್ಮಿಕ ಕಾರ್ಯಗಳ ವಿಚಾರದಲ್ಲಿ ಅಡ್ಡಗಾಲಾಗುವದು ಕೈಬಿಟ್ಟು ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತನೆ ಹರಿಸಲಿ, ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ, ಕಾರ್ಮಿಕರ ಸಮಸ್ಯೆ, ಹದಗೆಟ್ಟ ರಸ್ತೆಗಳು,ಬೆಂಬಲ ಬೆಲೆ ಇಲ್ಲದೆ ಸಂಕಷ್ಟದಲ್ಲಿರುವ ರೈತರು,ಸಂತ್ರಸ್ತರಿಗೆ ಸಿಗದ ಶಾಶ್ವತ ಸೂರು,ಕುಡಿಯುವ ನೀರು, ವಿದ್ಯುತ್, ದೂರವಾಣಿ ಸೇರಿದಂತೆ ಹಲವಾರು ಗಂಭೀರ ಸಮಸ್ಯೆಗಳಿದ್ದರೂ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಆಗಲಿ ಬೆಳೆಗಾರರಿಗೆ ಪರಿಹಾರವಾಗಲಿ ಜ್ವಲಂತ ಸಮಸ್ಯೆಗಳಿಗೆ ನಾಂದಿ ಹಾಡಲು ಮುಂದಾಗಿದ ಬಿಜೆಪಿ ಎಲ್ಲಾ ರೀತಿಯಲ್ಲೂ ಜಿಲ್ಲೆಯನ್ನು ಕಡೆಗಣಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದರು
No comments
Post a Comment