ನೆಲ್ಯಹುದಿಕೇರಿ ಸಹಾಯ ಟ್ರಸ್ಟ್ ನಿಂದ ಸಂತ್ರಸ್ಥರಿಗೆ 15 ಮನೆ ನಿರ್ಮಾಣ : ಅ.7ರಂದು ಹಸ್ತಾಂತರ

No comments


ಸಿದ್ದಾಪುರ:  ಸಂಕಷ್ಟದಲ್ಲಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ನೆಲ್ಯಹುದಿಕೇರಿಯ ಸಹಾಯ ಚಾರಿಟ್ರಬಲ್ ಟ್ರಸ್ಟ್  ದಾನಿಗಳ ಸಹಕಾರದಿಂದ ನೆಲ್ಯಹುದಿಕೇರಿ ಭಾಗದ ಮಳೆಹಾನಿ ಸಂತ್ರಸ್ತರು ಹಾಗೂ ನಿರ್ಗತಿಕರಿಗೆ ಮೊದಲನೇ ಹಂತದ 15 ಮನೆಗಳನ್ನು ನಿರ್ಮಿಸಿಜಾತಿ ಮತ ಭೇದವಿಲ್ಲದೆ ನೀಡಲು ಮುಂದಾಗಿರುವ ಸಹಾಯ ಟ್ರಸ್ಟ್ ನ ಸೇವಾ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು ಆ 7ರಂದು  ಮನೆ ಹಸ್ತಾಂತರ ನೆಲ್ಲಿಹುದಿಕೇರಿ ಸಮೀಪದ ಬೆಟ್ಟದಕಾಡು ಗ್ರಾಮದಲ್ಲಿ  ನಡೆಯಲಿದೆ ಎಂದು ಸಹಾಯ ಟ್ರಸ್ಟ್ ನ ಅಧ್ಯಕ್ಷ ಎ.ಕೆ  ಅಬ್ದುಲ್ಲಾ ತಿಳಿಸಿದ್ದಾರೆ
.
ನೆಲ್ಯಹುದಿಕೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಗ್ರಾಮದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿರುವುದನ್ನು ಅರಿತು ದಾನಿಗಳ ಸಹಕಾರದಿಂದ ಮೊದಲನೇ ಹಂತದ 15 ಮನೆಗಳನ್ನು ನಿರ್ಮಾಣ ಮಾಡಲಾಗಿದೆ.  ಮನೆಗಳ ಹಸ್ತಾಂತರ ಕಾರ್ಯ ಆ 7 ರಂದು ಬೆಳಿಗ್ಗೆ 10 ಗಂಟೆಗೆ   ನಡೆಯಲಿದ್ದುಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳು, ಧಾರ್ಮಿಕ ಪಂಡಿತರು, ಮುಖಂಡರುಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರ ಕಾರ್ಯ ನಡೆಯಲಿದೆ.ಪ್ರತಿ ಮನೆಗೆ ಅಂದಾಜು 6.5 ಲಕ್ಷ ರೂ ವೆಚ್ಚದಲ್ಲಿ ಎಲ್ಲ ಮೂಲ ಸೌಕರ್ಯ ದೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಯೋಗ್ಯವಾಗಿರುವ ಮನೆಗಳನ್ನ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ.ಕೇರಳದ ಕಾಸರಗೋಡು ಜಿಲ್ಲೆಯ  ಪಡನ್ನ ವಿಪತ್ತು ಸಹಾಯ ಸಂಘಟನೆಯಿಂದ 9 ಮನೆ, ಕಾಸರಗೋಡು ಜಿಲ್ಲೆಯ ತ್ರಿಕರಿಪುರದ ಉದಿನೂರ್ ಖಿದ್ಮತುಲ್ ಇಸ್ಲಾಂ ಜಮಾಅತ್ 1 ಮನೆ, ಕಾಯಂಕೂಳಂ ಲಾಜ್ನತ್ತುಲ್ ಅಸಹನೀಯ ವಿದ್ಯಾರ್ಥಿ ಸಂಘಟನೆಯಿಂದ 2 ಮನೆ,ಎಂ ಕೆ ಇಬ್ರಾಹಿಂ&ಸನ್ಸ್ ಅವರಿಂದ1ಮನೆ ಬೆಂಗಳೂರಿನ ಲುಲೂ ಸ್ಯಾರಿಸ್ ಮನೆ1 ಗುತ್ತಿಗೆದಾರ ಟಿ ಪಿ ಕನ್ಟ್ರಕ್ಷನ್ ನ ಮಾಲಿಕ ಆಂಥೋನಿ ಜೋಸೆಫ್ ಅವರಿಂದ 1 ಮನೆ ಉದ್ಘಾಟನೆಗೆ ಸಜ್ಜಾಗಿದೆ.ಮುಂದಿನ ದಿನಗಳಲ್ಲಿ ಇನ್ನೂ ಎರಡನೇ ಹಂತದ 10 ಮನೆಗಳ ನಿರ್ಮಾಣ ಕಾರ್ಯ ನಡೆಯಲಿದ್ದುನದಿ ದಡದಲ್ಲಿ ಸಂಕಷ್ಟದಲ್ಲಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ  39 ಕುಟುಂಬಕ್ಕೆ ನಿವೇಶನ ನೀಡಲು ಸಹಾಯ ಟ್ರಸ್ಟ್ ಮುಂದಾಗಿದ್ದು ಈಗಾಗಲೇ ತಣಲ್ ಸಂಸ್ಥೆ ಯಿಂದ 1ಎಕ್ರೆ, ಸಹಾಯ ಟ್ರಸ್ಟ್ ನಿಂದ 1ಎಕರೆ ಹಾಗೂ ಸಮಾಜ ಸೇವಕ ಕೆ.ಎಂ ಹಂಸ   ಅವರಿಂದ ಅರ್ಧ ಎಕರೆ ಜಾಗ ನೀಡಲು ಮುಂದಾಗಿದ್ದು  ಒಟ್ಟು ಎರಡೂವರೆ ಎಕರೆ ಜಾಗದಲ್ಲಿ  39 ಕುಟುಂಬಗಳಿಗೆ ನಿವೇಶನ ನೀಡಲು ಸಹಾಯ ಟ್ರಸ್ಟ್ ಮುಂದಾಗಿದೆ ಎಂದರು.ಸಹಾಯ ಟ್ರಸ್ಟ್ ನ ನಿರ್ಮಾಣ ಸಮಿತಿ ಸದಸ್ಯ  ಎ. ಕೆ ಹಕೀಂ ಮಾತನಾಡಿ ನೆಲ್ಯಹುದಿಕೇರಿಯ ಸಂತ್ರಸ್ತರ ಮನೆ ಹಾಗೂ ನಿವೇಶನ ಕಾರ್ಯಕ್ಕೆ ಹಲವಾರು ದಾನಿಗಳು ಕೈಜೋಡಿಸಿದ್ದು ಮುಂದಿನ ಹಂತದ ಮನೆ ನಿರ್ಮಾಣಕ್ಕೆ ದಾನಿಗಳ ಸಹಕಾರ ಅಗತ್ಯವಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಉಪ ಖಾಝಿ ಎಂ. ಎಂ ಅಬ್ದುಲ್ಲ ಪೈಝಿ ಪ್ರಾರ್ಥನೆ ನೆರವೇರಿಸಲಿದ್ದು ಸಹಾಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ  ಎ.ಕೆ ಅಬ್ದುಲ್ಲಾ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರ್ಮಿಕ ಪಂಡಿತ ಪಾಣಕ್ಕಾಡ್ ಸಯ್ಯದ್ ಮುನವ್ವರ್ ಅಲಿ ಶಿಹಾಬ್ ತಂಙಲ್ ಉದ್ಘಾಟನೆ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ ಮೌಲಾನ ಅಬ್ದುಲ್ ಶುಕೂರ್ ಹಸನಿ ಅಲ್-ಖಾಸಿಮಿ,ಕೇರಳದ ಲೋಕಸಭಾ ಸದಸ್ಯರು,ಇ.ಟಿ. ಮುಹಮ್ಮದ್ ಬಶೀರ್,ಮಡಿಕೇರಿ ವಿಧಾನಸಭಾ ಕ್ಷೇತದ ಶಾಸಕ ಅಪ್ಪಚ್ಚು ರಂಜನ್,ಮಾಜಿ ಸಚಿವ ಯು. ಟಿ ಖಾದರ್, ಮಾಜಿ ಶಾಸಕ  ಕೆ. ಎಂ. ಇಬ್ರಾಹಿಂ ಮಾಸ್ಟರ್,ದಯಾಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ ಇದೀಸ್ ತಣಲ್,ಕೊಡ್ಲಿಪೇಟೆ ಕಿರಿಕೊಡಿ ಮಠದ ಶ್ರೀ ಸದಾಶಿವ ಸ್ವಾಮಿಜಿ, ಸಿದ್ದಾಪುರ ಸೇಂಟ್ ಮೇರಿಸ್ ಚರ್ಚ್ ನಫಾ. ಸಭಾಸ್ಪಿನ್ ಚಾಲಕಪಳ್ಳಿ, ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಾಬು ವರ್ಗಿಸ್, ಪ್ರಮುಖರಾದ ಪಿ. ವಿ. ಮುಹಮ್ಮದ್ ಅಸ್ಲಂ, ಉಸ್ತಾದ್ ಹಫೀಲ್ ಸುಫಿಯಾನ್,ಉಸ್ತಾದ್ ಕೈಸೆ ಹಸನಿ ಅಲ್ ಖಸಾಮಿ ಮುದರೀಸ್,ಅಥಾವುಲ್ಲಾ ಮಾಸ್ಟರ್, ಅಶ್ರಫ್ ಆಹಾಸಿನಿ,ವಿ. ಕೆ. ಪಿ. ಇಸ್ಮಾಯಿಲ್ ಹಾಜಿ, ಕೆ. ಎಂ. ರಹ್ಮಾನ್, ಕುಂಜೆ ಮಹಮ್ಮದ್ , ಎಂ. ಕೆ ನೌಶದ್, ಅಶ್ರಫ್ ಅಪ್ಪನಿ, ಸಿ,ಪಿ ಎಂ ಬಸೀರ್ ಹಾಜಿ,ಪಿ. ಕೆ. ಅಬ್ದುಲ್ ರಹ್ಮಾನ್, ಟಿ, ಸಿ, ಸಿರಾಜ್ ಲತೀಫ್‌ಹಾಜಿ, ಚಂದ್ರಮೌಳಿ ವಕೀಲರು, ನಾಪಂಡ ಮುತ್ತಪ್ಪ,ಕೆ. ಎ. ಯಾಕೂಬ್,ಓ. ಎಂ. ಅಬ್ದುಲ್ಲಾ ಹಾಜಿ,ಅಶ್ರಫ್ ಹಾಜಿ,ಹ್ಯಾರೀಸ್ ರಹ್ಮಾನಿ,ನೌಫಲ್ ಹುದವಿ,ಕೆ. ಎಂ. ಹಂಸ,ಆಂಟೋನಿ ಜೋಸಫ್, ಉಮ್ಮರ್, ವಿ. ಕೆ, ಲೋಕೇಶ್ ,ವಿ. ಪಿ. ಶಶಿಧರ್,ಪಿ. ಆರ್. ಭರತ್ ಕುಮಾರ್,  ಹೆಚ್. ಎನ್. ಮಾದಪ್ಪ, ಅನಿಲ್ ಕುಮಾರ್ ಪಿ.ಡಿ.ಓ. ನೆಲ್ಯಹುದಿಕೇರಿ ಗ್ರಾಮ ಪಂಚಾಯತ್, ಅಬ್ದುಲ್ಲ ಎ. ಎ. ಪಿ.ಡಿ.ಓ. ಹೊದ್ದೂರು ಗ್ರಾಮ ಪಂಚಾಯತ್, ಉಬೈದ್ ಕಾರಾಲತ್, ಭಶೀರ್ ಹಾಜಿ ಸಿ, ಕೆ, ಸುನಿತಾ ಮಂಜುನಾಥ್ , ಸುಹದಾ ಅಶ್ರಫ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು ಪತ್ರಿಕಾಗೋಷ್ಠಿಯಲ್ಲಿ ಸಹಾಯ ಚಾರಿಟಬಲ್ ಟ್ರಸ್ಟ್  ಗೌರವಾಧ್ಯಕ್ಷ  ಅಬ್ದುಲ್ ನಸೀರ್ ಹಾಜಿ, ಪ್ರಮುಖರಾದ ಕೆ. ಎಂ ಬಶೀರ್, ಕೊಯಾ,ಸಲಾಂ,ಕೆ. ಎಂ ಮೊಹಮ್ಮದಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದರು

No comments

Post a Comment