ಸೋಮವಾರಪೇಟೆ (Times Of Coorg) : ಸೋಮವಾರಪೇಟೆ ಸಮೀಪ ಕಲ್ಕಂದೂರು ಗ್ರಾಮದಲ್ಲಿ ಹುಚ್ಚು ನಾಯಿಯೊಂದರ ಕಡಿತದಿಂದಾಗಿ ಮೂವರು ಗಾಯಗೊಂಡಿದ್ದಾರೆ. ಜನರಿಗಲ್ಲದೇ ನಾಯಿ, ಕೋಳಿಗಳಿಗೂ ಕಚ್ಚಿದೆ.
ಬೆಳಿಗ್ಗಿನಿಂದ ಗ್ರಾಮದಾದ್ಯಂತ ನಾಯಿ ಭೀತಿ ಸೃಷ್ಟಿಸಿದ್ದು, ಗ್ರಾಮಸ್ಥರು ನಾಯಿಯನ್ನು ಹಿಡಿಯಲು ಯತ್ನಿಸುತಿದ್ದರು, ನಾಯಿ ಸಿಗದೇ ತಪ್ಪಿಸಿಕೊಂಡು ಹೋಗಿದೆ. ನಾಯಿ ಪತ್ತೆಯಾಗದ ಕಾರಣ ಸದ್ಯ ಕಲ್ಕಂದೂರು ಗ್ರಾಮದಾಂದ್ಯತ ಭೀತಿಯ ವಾತಾವರಣ ಆವರಿಸಿದೆ.

No comments
Post a Comment