ಮಡಿಕೇರಿ ಸಮೀಪ ಬೋಯಿಕೇರಿಯ ಬಳಿ ನಿಯಂತ್ರಣ ತಪ್ಪಿ ಚರಂಡಿಗೆ ವಾಲಿದ KSRTC ಬಸ್...!

No comments

 


ಮಡಿಕೇರಿ (Times Of Coorg) : ಮಡಿಕೇರಿಯ ಸಮೀಪ ಬೋಯಿಕೇರಿಯಲ್ಲಿ ನಿಯಂತ್ರಣ ತಪ್ಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ  KA 09 F 5037 (ಸುಬ್ರಹ್ಮಣ್ಯ-ಮೈಸೂರು) ಬಸ್ ಚರಂಡಿಗೆ ನುಗ್ಗಿದ ಘಟನೆ ನಡೆದಿದೆ. ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ಬಸ್ ನಲ್ಲಿ 30ಕ್ಕೂ ಅಧಿಕ ಪ್ರಯಾಣಿಕರಿದ್ದರು, ಬಸ್ ವಾಲಿದ ಪರಿಣಾಮ ತುರ್ತು ನಿರ್ಗಮನ ಬಾಗಿಲಿನಿಂದ ಇಳಿದು ಅಪಾಯದಿಂದ ಪಾರಾಗಿದ್ದಾರೆ.

No comments

Post a Comment