ಅಮ್ಮತ್ತಿ (Times Of Coorg) : ಉಡುಪಿಯ ಮಲ್ಪೆ ಬೀಚ್ ನಲ್ಲಿ ನಾಲ್ವರು ವಿದ್ಯಾರ್ಥಿಗಳು ಆಟವಾಡುತ್ತಿದ್ದ ಸಂದರ್ಭ ಮುಳುಗಿದ್ದು, ಮೂವರನ್ನು ರಕ್ಷಿಸಲಾಗಿದೆ. ಒರ್ವ ಯುವತಿ ನೀರುಪಾಲಾಗಿದ್ದು, ಕೊಡಗಿನ ಅಮ್ಮತ್ತಿಯ ದೇಚಮ್ಮ ಎಂಬ ಯುವತಿ ಎಂದು ತಿಳಿದು ಬಂದಿದೆ. ಮೈಸೂರಿನಲ್ಲಿ ಬಿಎಸ್ಸಿ ಕಲಿಯುತ್ತಿದ್ದ ವಿದ್ಯಾರ್ಥಿಗಳು ಬೀಚ್ ಗೆ ಆಗಮಿಸಿ ಸಮುದ್ರದ ಅಲೆಗಳ ನಡುವೆ ಆಟವಾಡುತ್ತಿದ್ದ ಸಂದರ್ಭ ಸ್ಥಳಿಯರು ಎಚ್ಚರಿಸಿದ್ದಾರೆ. ಇದನ್ನು ಲೆಕ್ಕಿಸದೇ ವಿದ್ಯಾರ್ಥಿಗಳು ಆಟವಾಡುತ್ತಿದ್ದರು ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ಕಾರ್ಯಕರ್ತ ರಾಗಿದ್ದ ದಿವಂಗತ ಉದ್ದಪಂಡ ಜಗತ್ ರವರ ಮಗಳು ಉದ್ದಪಂಡ ದೇಚಮ್ಮ (20) ಉಡುಪಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇಂದು ಭಾನುವಾರ ಉಡುಪಿ ಜಿಲ್ಲೆಯ ಮಲ್ಪೆ ಬೀಚಿಗೆ ಸ್ನೇಹಿತರೊಂದಿಗೆ ತೆರಳಿದ್ದು ಬೀಚಿನಲ್ಲಿ ಮುಳುಗಿ ಮೃತಪಟ್ಟಿರುವದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.


No comments
Post a Comment