ಕೊಡಗು ಜಿಲ್ಲೆಯಲ್ಲಿ ಭಾನುವಾರ 107 ಮಂದಿಗೆ ಕೋರೋನಾ ಪಾಸಿಟಿವ್..!

No comments

 


ಮಡಿಕೇರಿ (Times Of Coorg) : ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು ಭಾನುವಾರ 1/8/2021ರಂದು 107 ಪ್ರಕರಣಗಳು ಧೃಡಪಟ್ಟಿವೆ. 84 ಪ್ರಕರಣಗಳು RTPCR ಮೂಲಕ, 23 ಪ್ರಕರಣಗಳು ಆಂಟಿಜೆನ್ ಟೆಸ್ಟ್ ಮೂಲಕ ಧೃಡಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ 23, ಸೋಮವಾರಪೇಟೆ ತಾಲೂಕಿನಲ್ಲಿ 42, ವಿರಾಜಪೇಟೆ ತಾಲೂಕಿನಲ್ಲಿ 42 ಕೋವಿಡ್-19 ಪ್ರಕರಣಗಳು ವರದಿಯಾಗಿದೆ. 12 ಕಂಟೈನ್ಮೆಂಟ್ ವಲಯಗಳು - ಸುಲುಗಳಲೆ ಕಾಲೋನಿ ಶನಿವಾರಸಂತೆ, ಹೈಸೊಡ್ಲುರು ವಿರಾಜಪೇಟೆ, ಆಶ್ರಯ ಕಾಲೋನಿ ಮಾದಾಪುರ, ಹನ್ಸೆ ಎಸ್ಟೇಟ್ ಸೋಮವಾರಪೇಟೆ, ಚಾಮುಂಡಿ ಎಸ್ಟೇಟ್ ಮೂವತೊಕ್ಲು, ಮೈತಾಡಿ ಚಾಮಿಯಾಲ ವಿರಾಜಪೇಟೆ, ಈರಣ್ಣ ಕಾಲೋನಿ ಗೋಣಿಕೊಪ್ಪ, 4ತ್ ಬ್ಲಾಕ್ ನ್ಯು ಎಕ್ಸ್ಟೆಂಶನ್ ಮಡಿಕೇರಿ, ಬೃಂದಾವನ ಎಸ್ಟೇಟ್ ಅಮ್ಮತ್ತಿ, ಮಾರ್ಗೊಲ್ಲು ಎಸ್ಟೇಟ್ ಬಾಡಗ ಬಾಣಂಗಾಲ, ಕಾರ್ಯಪ್ಪ ಎಕ್ಸ್ಟೆಂಷನ್ ಕುಶಾಲನಗರ, ಕೋಟೆಬೆಟ್ಟ ಎಸ್ಟೇಟ್ ತಿತಿಮತಿ. ಇದುವರೆಗೆ ಒಟ್ಟು 31818 ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದ್ದು, 30901 ಪ್ರಕರಣಗಳು ಗುಣಮುಖವಾಗಿದೆ. 520 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಗಳಲ್ಲಿ 42 ಪ್ರಕರಣಗಳು ಡಿಸ್ಚಾರ್ಜ್ ಆಗಿವೆ. ಇದುವರೆಗೆ ಕೋವಿಡ್-19ನಿಂದಾಗಿ 397 ಪ್ರಕರಣಗಳು ಮರಣಹೊಂದಿದ್ದಾರೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಮರಣ ಧೃಡಪಟ್ಟಿರುವುದಿಲ್ಲ. 


ಮೂಲ : ಜಿಲ್ಲಾಡಳಿತದ ಪ್ರಕಟಣೆ.

No comments

Post a Comment