ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು : ಮಹಾಮಾರಿ ಕೊರೊನಾದಿಂದ ನಾಪೋಕ್ಲುವಿನ ಜನರು ನಿಟ್ಟುಸಿರುಬಿಡುವಂತಾಗಿದೆ. ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದುವರೆಗೆ ಸುಮಾರು 1,096 ಜನರಿಗೆ ಕೋವಿಡ್ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದ್ದು ಇದರಲ್ಲಿ 1,089 ಜನರು ಗುಣಮುಖರಾಗಿದ್ದು 7 ಜನರು ಮೃತಪಟ್ಟಿದ್ದು ಇಂದು ನಾಪೋಕ್ಲು ಪಂಚಾಯತ್ ಮಹಾಮಾರಿ ಕೊರೊನಾದಿಂದ ಮುಕ್ತವಾಗಿದೆ.
ಕೋವಿಡ್ ನಿಯಂತ್ರಿಸಲು ಪಂಚಾಯ್ತಿಯ ಅಧೀನದಲ್ಲಿ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲಾಗಿತ್ತು ಇದರಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ, ಕಂದಾಯ ಇಲಾಖೆ,ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರ ಪರಿಶ್ರಮ ಹಾಗೂ ಪಂಚಾಯಿತಿಯ ಕೋವಿಡ್ ನಿಯಂತ್ರಣದ ಆದೇಶಕ್ಕೆ ನಾಡಿನ ಜನರು ಸ್ಪಂದಿಸಿರುವುದು ಕೂಡಾ ನಾಪೋಕ್ಲು ಕೊರೋನಾ ದಿಂದ ಮುಕ್ತವಾಗಲು ಕಾರಣವಾಗಿದ್ದು ಆದ್ದರಿಂದ ನಾಪೋಕ್ಲು ಗ್ರಾಮ ಪಂಚಾಯಿತಿಯ ಟಾಸ್ಕ್ ಫೋರ್ಸ್ ಸಮಿತಿಯ ಎಲ್ಲಾ ಸದಸ್ಯರಿಗೆ ನಾಡಿನ ಜನರು ಅಭಿನಂದನೆ ಸಲ್ಲಿಸಿದ್ದಾರೆ.
ಅದರಂತೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಕೋವಿಡ್ ಲಸಿಕಾ ಶಿಬಿರದಲ್ಲಿ ಇದುವರೆಗೆ 6,700 ಜನರು ಕೋವಿಡ್ ಮೊದಲ ಡೋಸ್ ಲಸಿಕೆ ಪಡೆದಿದ್ದು ಅದರಂತೆ 3,154 ಜನರು ಎರಡನೆಯ ಡೋಸ್ ಲಸಿಕೆಯನ್ನು ಪಡೆದಿರುತ್ತಾರೆ.
ಮುಂದಿನ ದಿನಗಳಲ್ಲಿ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳುವವರು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
No comments
Post a Comment