SSLC ಪರೀಕ್ಷೆ ಬೇಡವೇ ಬೇಡ :ಸರಿತಾ ಪೂಣಚ್ಚ :

No comments
ಮಡಿಕೇರಿ: ಕರೋನ ಸಂಕಷ್ಟ ಸಮಯ ಇಲ್ಲದಿದ್ದಲ್ಲಿ ಜೂನ್ 1ರಿಂದ ಹೊಸ ಶೈಕ್ಷಣಿಕ ವರ್ಷವು ಆರಂಭವಾಗುತ್ತಿತ್ತು .ಆದರೆ ಕರೋನ ಮಹಾಮಾರಿಯಿಂದ ಇಡೀ ದೇಶದಲ್ಲಿ ಅನೇಕ ರೀತಿಯ ಜಟಿಲ ಸಮಸ್ಸೆಗಳು ಎದುರಾಗಿದ್ದು ಎಸ್ ಎಸ್ ಲ್ ಸಿ ಪರೀಕ್ಷೆ ಜರುಗಿಸಿ ದಾರಿಹೋಗುವ ದೆವ್ವವನ್ನು ಮೈ ಮೇಲೆ ಎಳೆದುಕೊಳ್ಳುವ ದುಸ್ಸಾಹಸಕ್ಕೆ ಸರಕಾರ ಕೈ ಹಾಕಬಾರದು ಎಂದು ಕಾಂಗ್ರೆಸ್ ವಕ್ತಾರೆ ಸರಿತಾ ಪೂಣಚ್ಚ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಶಿಕ್ಷಣ ಕ್ಷೇತ್ರವಂತೂ ತುಂಬಾ ಎಲ್ಲಾ ಕ್ಷೇತ್ರಗಳಿಗಿಂತ ಭಿನ್ನವಾಗಿದೆ ಪ್ರಧಾನಿಯವರು ಕೇಂದ್ರಸರಕಾರದ ವ್ಯಾಪ್ತಿಯ ಸಿ ಬಿ ಎಸ್ ಇ; ಐ ಸಿ ಎಸ್ ಇ : ಎಸ್ ಏಲ್  ಸಿ ಮತ್ತು 2ನೇ ವರ್ಷದ ಪಿ ಯು ಸಿ ಪರೀಕ್ಷೆಯನ್ನು ರದ್ದುಗೊಳಿಸಿದ್ದು , ರಾಜ್ಯಸರಕಾರ 2ನೇ ಪಿ ಯು ಸಿ ರದ್ದುಗೊಳಿಸಿ ಎಸ್ ಎಲ್ ಸಿ ಪರೀಕ್ಷೆ ನಡೆಸಲು ಹೊರಟಿದ್ದು ಹಾಸ್ಯಾಸ್ಪದ.ಕನ್ನಡ ನಾಡಿನ ಶಾಲಾ ಮಕ್ಕಳ ಬಗ್ಗೆ ನಿಮಗೆ ನಿಜವಾದ ಕಾಳಜಿ ಇದ್ದರೆ ನಿಮ್ಮ ನಿಲವು ಬದಲಾಯಿಸಿಕೊಳ್ಳಿರಿ  ಎಂದು ಸರಿತಾ ಪೂಣಚ್ಚ  ಸರಕಾರದ ಕ್ರಮವನ್ನು ಖಂಡಿಸಿದ್ದಾರೆ.ಪಿ ಯು ಸಿ ಗೆ 18 ವರ್ಷ ಎಸ್ ಎಲ್ ಸಿ ಗೆ 15 ವರ್ಷ್ ಮಕ್ಕಳ ವಯಸ್ಸಾಗಿರುತ್ತದೆ ಹೀಗಿದ್ದಾಗ ಪಿ ಯು ಸಿ ರದ್ದು ಮಾಡಿ ಎಸ್ ಏಲ್ ಸಿ ಪರೀಕ್ಷೆ ಜರುಗಿಸುವುದು ನಗೆಪಾಟಿಲುವಾಗಿದೆ .ರಾಜ್ಯ ಸರಕಾರ ತಕ್ಷಣವೇ ಶಾಲಾ ಮಕ್ಕಳ ಆತಂಕ ನಿವಾರಿಸಬೇಕು .ಈಗಾಗಲೇ ಪಿ ಯು ಸಿ ವರ್ಗಗಳು ಆರಂಭವಾಗಿ ಒಂದು ತಿಂಗಳು ಮೇಲಾಗಿದೆ .ಮೊದಲು ಎಸ್ ಎಲ್ ಸಿ ಮಕ್ಕಳ ಭವಿಷ್ಯಕ್ಕೆ ಮಾರ್ಗ ತೋರಿಸಿ ಎಂದು ಸರಿತಾ ಪೂಣಚ್ಚ ಆಗ್ರಹಿಸಿದ್ದಾರೆ

No comments

Post a Comment