ಮಾಲ್ದಾರೆಯಲ್ಲಿ ವಿಶ್ವ ಪರಿಸರ ದಿನಾಚರಣೆ

No comments
ಸಿದ್ದಾಪುರ : ಮಾಲ್ದಾರೆ ಜನಪರ ಸಂಘ ಹಾಗೂ ಅರಣ್ಯ ಇಲಾಖೆ ವತಿಯಿಂದ ಮಾಲ್ದಾರೆ ಸಮೀಪದ ಕನ್ನಾಳ ಆಸ್ಪತ್ರೆಯಲ್ಲಿ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಆಸ್ಪತ್ರೆ ಆವರಣದಲ್ಲಿ ಸಂಪಿಗೆ,ಮೈಸೂರು ನೇಲ್ಲಿ, ದಾಳಿಂಬೆ,ಬೇವು,ಸೀಬೆ, ನೇರಳೆ, ಬಿದಿರು, ಹಲಸು, ಬಟರ್ ಫ್ರೂಟ್ ಸೇರಿದಂತೆ ಹೂ ಗಿಡಗಳನ್ನು ನೆಡಲಾಯಿತು.ವಲಯ ಅರಣ್ಯಾಧಿಕಾರಿ ಅಶೋಕ. ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪ್ರತಿಯೊಬ್ಬರು ಗಿಡಮರಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ರಕ್ಷಣೆ ಮಾಡುವುದರೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಬೇಕೆಂದು ಹೇಳಿದ ಅವರು ಮಾಲ್ದಾರೆ ಜನಪರ ಸಂಘ ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಪರಿಸರ ಜಾಗೃತಿ ಮೂಡಿಸುವ ಮೂಲಕ ಮಾದರಿಯಾಗಿದೆ ಎಂದರು.ಈ ಸಂದರ್ಭ ವೈದ್ಯಾಧಿಕಾರಿ ಶೃಂಗಶ್ರೀ,ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ನಿರೀಕ್ಷಕ ಸುದರ್ಶನ್ , ವಲ್ಸ,ಅಂಗನವಾಡಿ ಕಾರ್ಯಕರ್ತೆ ವಿದ್ಯಾ ,ಗ್ರಾಮ ಪಂಚಾಯಿತಿ ಸದಸ್ಯ ಕಿರಣ್,ಕಲಾವಿದ ಶಾಜಿ, ಸತೀಶ್ , ಗಣೇಶ್,ಗಗನ್, ಎಸ್. ಎಂ ರಾಜು,ಅರಣ್ಯ ಇಲಾಖೆಯ ಚೇತನ್, ಶ್ರೀನಿವಾಸ್,  ಜನಪರ ಸಂಘದ ಅದ್ಯಕ್ಷ ಅಂತೋಣಿ,ಪ್ರಮುಖರಾದ  ವಿನೀಲ್,ಹರಿಪ್ರಸಾದ್, ಪ್ರವೀಣ್,ಸುರೇಶ್,ಕಲಾವಿದ ಬಾವಾ ಮಾಲ್ದಾರೆ ಸೇರಿದಂತೆ ಮತ್ತಿತರರು ಇದ್ದರು. ಹಾಜರಿದ್ದರು. 

No comments

Post a Comment