ಗೋಣಿಕೊಪ್ಪ :ಸಮಾಜ ಸೇವಾ ಸಂಘಟನೆಗಳು ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮೂಲಕ ನೆರವಾಗಬೇಕೆಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ. ಜಿ ಬೋಪಯ್ಯ ಹೇಳಿದರು .ಬೆಂಗಳೂರಿನ ಸಮಾಜಸೇವಾ ಸಂಘಟನೆಗಳ ಸಹಕಾರ ದಿಂದ ನಮ್ಮ ಕೊಡಗು ತಂಡದ ನೇತ್ರತ್ವದಲ್ಲಿ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕಿನ 100ಕ್ಕೊ ಹೆಚ್ಚು ಆದಿವಾಸಿ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ಕೆ ಗೋಣಿಕೊಪ್ಪದಲ್ಲಿ ಶಾಸಕ ಕೆ.ಜಿ ಬೋಪಯ್ಯ ಚಾಲನೆ ನೀಡಿ ಮಾತನಾಡಿದ ಅವರು ಕೋವಿಡ್ ಸಂಕಷ್ಟದಿಂದ ಸಾಮಾನ್ಯ ಜನರೂ ಸಂಕಷ್ಟದಲ್ಲಿದ್ದಾರೆ.ಸರಕಾರಗಳು ಸಾಧ್ಯವಾದಷ್ಟು ಪರಿಹಾರ ಕಾರ್ಯಗಳನ್ನು ಮಾಡುತ್ತಿದೆ.ಕೊಡುಗು ಜಿಲ್ಲೆಯ ಆದಿವಾಸಿ ಫಲಾನುಭವಿಗಳಿಗೆ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಮೂಲಕ ಕಿಟ್ ಗಳನ್ನು ವಿತರಿಸಲಾಗುತ್ತಿದ್ದು.ಹಾಡಿಗಳಲ್ಲಿ ಇನ್ನೂ ಬಹುತೇಕ ಮಂದಿ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿದ್ದುಸಮಾಜ ಸೇವಾ ಸಂಘಟನೆಗಳು ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಮಾನವೀಯತೆ ತೋರಬೇಕು ಎಂದು ಹೇಳಿದ ಅವರು ಬೆಂಗಳೂರಿನ ಸೇವಾ ಸಂಘಟನೆಗಳು ನಮ್ಮ ಕೊಡಗು ತಂಡದ ಮೂಲಕ ಜಿಲ್ಲೆಗೆ ಹೆಚ್ಚು ಸಹಕಾರ ನೀಡುತ್ತಿರುವದರ ಬಗ್ಗೆ ಶ್ಲಾಘಿಸಿದರು.ನಮ್ಮ ಕೊಡಗು ತಂಡದ ಅಧ್ಯಕ್ಷ ನೌಶಾದ್ ಜನ್ನತ್ತ್ ಮಾತನಾಡಿ ಕಳೆದ ಹಲವು ವರ್ಷಗಳಿಂದ ಸಂಘಟನೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು.ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದೆ.ಕಳೆದ ಬಾರಿ ಪ್ರವಾಹ ಹಾಗೂ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜನರಿಗೆ ಬೇಕಾದ ಅಗತ್ಯ ವಸ್ತುಗಳನ್ನು ದಾನಿಗಳ ಸಹಕಾರದಿಂದ ವಿತರಿಸಲಾಗಿದ್ದು ಇದೀಗ ಕೋವಿಡ್ ಲಾಕ್ ಡೌನ್ ಸಂಕಷ್ಟದಲ್ಲಿರುವ ಆದಿವಾಸಿ ಕುಟುಂಬಗಳಿಗೆ ಬೆಂಗಳೂರಿನ ಸೇವಾ ಸಂಘಟನೆಗಳ ಸಹಕಾರದಿಂದ ಹಾಡಿಗಳಲ್ಲಿರುವ ಮುನ್ನೂರಕ್ಕೂ ಹೆಚ್ಚು ಕುಟುಂಬಗಳ ಮನೆ ಬಾಗಿಲಿಗೆ ಕಿಟ್ ಗಳನ್ನು ತಲುಪಿಸಲಾಗುತ್ತಿದೆ ಎಂದರು.ಈ ಸಂದರ್ಭ ಕನ್ನಡ ಮನಸ್ಸುಗಳ ಸಂಘಟನೆಯ ಪ್ರಮುಖ ಪವನ್ ,ಅಮೃತಬಿಂದು ಸಂಘಟನೆಯ ಪ್ರಶಾಂತ್ ,ಮಾತೃಭೂಮಿ ಫೌಂಡೇಶನ್ ನ ಮಹೇಶ್,ನಮ್ಮ ಕೊಡಗು ತಂಡದ ಸದಸ್ಯರಾದ ರೋಷನ್, ಬಶೀರ್, ಮೋಹನ್ ಸೇರಿದಂತೆ ಮತ್ತಿತರರು ಇದ್ದರು
No comments
Post a Comment