ಬೆಂಗಳೂರು ಬನವಾಸಿ ಕನ್ನಡಿಗರ ತಂಡ ಮತ್ತು ನಮ್ಮ ಕೊಡಗು ತಂಡದಿಂದ ಮಾಲ್ದಾರೆ ವ್ಯಾಪ್ತಿಯಲ್ಲಿ ಆದಿವಾಸಿಗಳಿಗೆ ಕಿಟ್ ವಿತರಣೆ.

No comments
ಸಿದ್ದಾಪುರ : ಕೋವಿಡ್ ಲಾಕ್ ಡೌನ್ ನಿಂದ  ಸಂಕಷ್ಟಕ್ಕೊಳಗಾಗಿರುವ ಆದಿವಾಸಿ ಕುಟುಂಬಗಳಿಗೆ  ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದ ಬೆಂಗಳೂರು ಬನವಾಸಿ ಕನ್ನಡಿಗರ ತಂಡ ಹಾಗೂ ನಮ್ಮ ಕೊಡಗು ತಂಡದ ಸೇವಾ ಕಾರ್ಯಕ್ಕೆ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣ್ಣಿನ ತೋಟ ಹಾಡಿ ಹಾಗೂ ತಟ್ಟಳ್ಳಿ ಹಾಡಿಯ ನೂರಾರು ಕುಟುಂಬಗಳಿಗೆ  ಬೇಕಾದ ಆಹಾರ ಪದಾರ್ಥಗಳ ಕಿಟ್ಟುಗಳನ್ನು ವಿಸ್ತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ .ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುತೇಕ ಕಾರ್ಮಿಕ ಕುಟುಂಬಗಳೇ ಅಧಿಕವಾಗಿದ್ದು ಲಾಕ್ ಡೌನ್ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದಾರೆ.ಸಂಕಷ್ಟದಲ್ಲಿರುವವರಿಗೆ ನೆರವಾಗಲು ದಾನಿಗಳು ಮುಂದೆ ಬರಬೇಕೆಂದು ಸಮೀರ್ ಮನವಿ ಮಾಡಿದ್ದಾರೆ. ನಮ್ಮ ಕೊಡಗು ತಂಡದ ಸ್ಥಾಪಕ ಅಧ್ಯಕ್ಷ ನೌಶಾದ್ ಜನ್ನತ್ತ್ ಮಾತನಾಡಿ ಕಳೆದ 3ವರ್ಷಗಳಿಂದಲೂ ಗ್ರಾಮೀಣ ಭಾಗದ ಬಡ ಆದಿವಾಸಿ ಕುಟುಂಬಗಳು ಹಲವು ಮೂಲ ಸೌಕರ್ಯ ವಂಚಿತರಾಗಿ ಸಂಕಷ್ಟದ ಬದುಕು ಎದುರಿಸುತ್ತಿದ್ದಾರೆ.ಲಾಕ್ ಡೌನ್  ಸಂಕಷ್ಟದಿಂದಕೂಲಿ ಕೆಲಸವೂ ಸಿಗದೆ ಕಂಗಾಲಾಗಿದ್ದಾರೆ.ಮಕ್ಕಳು, ವೃದ್ಧರು, ಮಹಿಳೆಯರು ಆಹಾರಕ್ಕೂ ಪರಿತಪಿಸುವಂಥ ಸ್ಥಿತಿ ನಿರ್ಮಾಣವಾಗಿದೆ,ಇತ್ತೀಚೆಗೆ ಹಾಡಿಗಳಿಗೆ ಭೇಟಿ ನೀಡಿದ್ದ ಸಂದರ್ಭ ಆದಿವಾಸಿ ಕುಟುಂಬಗಳು ಸಂಕಷ್ಟದಲ್ಲಿರುವುದನ್ನು ಮನಗಂಡು ಬೆಂಗಳೂರಿನ ಬನವಾಸಿ ಕನ್ನಡಿಗರ ತಂಡಕ್ಕೆ ಮಾಹಿತಿ ನೀಡಿದ ಹಿನ್ನಲೆ ತಕ್ಷಣ ಸ್ಪಂದಿಸಿ ನಮ್ಮ ಕೊಡಗು ತಂಡದ ಸಹಕಾರದೊಂದಿಗೆ  ನೂರಕ್ಕೂ ಹೆಚ್ಚು ಕಿಟ್ಟುಗಳನ್ನು ತಟ್ಟಳ್ಳಿ, ಹಣ್ಣಿನ ತೋಟ ಹಾಡಿ, ವಿರಾಜಪೇಟೆ ಸಮೀಪದ ಬಾಳುಗೋಡು ಸಂತ್ರಸ್ಥರಿಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.ಮತ್ತಷ್ಟು ಕುಟುಂಬಗಳು ಸಂಕಷ್ಟದಲ್ಲಿದ್ದು ದಾನಿಗಳ ಮೂಲಕ ಕಿಟ್ ಗಳನ್ನು ವಿತರಿಸಲಾಗುವುದು  ಎಂದು ಹೇಳಿದರು. ಆದಿವಾಸಿ ಮುಖಂಡ ಜೆ. ಕೆ ಅಪ್ಪಾಜಿ ಮಾತನಾಡಿ ಕೋವಿಡ್   ಸಂದರ್ಭದಲ್ಲಿ ಆದಿವಾಸಿ ಕುಟುಂಬಗಳು ಸಂಕಷ್ಟದಲ್ಲಿರುವುದನ್ನು ಮನಗಂಡು  ಆದಿವಾಸಿ ಕುಟುಂಬಗಳ ಹಾಡಿಗೆ ಕಿಟ್ ಗಳನ್ನು ತಂದು ವಿತರಿಸಿರುವ ಬನವಾಸಿ ಕನ್ನಡಿಗರ ತಂಡ ಹಾಗೂ  ನಮ್ಮ ಕೊಡಗು ತಂಡದ ಮಾನವೀಯತೆ  ಸೇವೆಯ ಬಗ್ಗೆ ಅಭಿನಂದಿಸಿದರು. ಬೆಂಗಳೂರಿನ ಬನವಾಸಿ ಕನ್ನಡಿಗರ ತಂಡದ ಜೈಕಿರಣ್ ಮಾತನಾಡಿ ಪ್ರವಾಹ, ಪ್ರಕೃತಿ ವಿಕೋಪ,ಕೋವಿಡ್  ಸಂಕಷ್ಟದ ಪರಿಸ್ಥಿತಿ ಸಂದರ್ಭಗಳಲ್ಲಿ ಕೊಡಗಿನ ಜನರು  ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ಸಂಘಟನೆ ತೊಡಗಿಸಿಕೊಂಡಿದೆ.ಕೋವಿಡ್  ಸಂಕಷ್ಟದ ಪರಿಸ್ಥಿತಿಯಲ್ಲಿರುವ 100 ಕ್ಕೊ ಹೆಚ್ಚು ಆದಿವಾಸಿ ಕುಟುಂಬಗಳಿಗೆ ನಮ್ಮ ಕೊಡಗು ತಂಡದ ಸಹಕಾರದೊಂದಿಗೆ ಅಗತ್ಯ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಿಸಲಾಗಿದ್ದು ಮುಂದಿನ ದಿನಗಳಲ್ಲಿ ಅಗತ್ಯವಿರುವ ಸಂಕಷ್ಟ ಕುಟುಂಬಗಳಿಗೆ  ಕಿಟ್ ಗಳನ್ನು ನೀಡಲಾಗುವುದು ಎಂದರು. ಈ ಸಂದರ್ಭ ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ, ಮಹಮ್ಮದಾಲಿ, ಮಾಲತಿ,ಸರಸ್ವತಿ ,ಶೋಭಾ , ಚಂದ್ರ ,ಕುಂಞಣ್ಣ,ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜು, ಬನವಾಸಿ ಕನ್ನಡಿಗರ ತಂಡದ  ಕಿರಣ್ ಮಾಯಿ,  ನಮ್ಮ ಕೊಡಗು ತಂಡದ ಲೋಹಿತ್, ಬಶೀರ್, ರೋಷನ್,  ಮೋಹನ್, ಅಜಿತ್ ಕೊಟ್ಟಕೇರಿಯನ,ಕರಡಿಗೋಡು ಕೃಷ್ಣ , ಎಂ. ಜಿ. ಟಿ ಅಸೋಸಿಯೇಷನ್ ಅಧ್ಯಕ್ಷ ಆಶ್ರಪ್ ಗೋಣಿಕೊಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು,

No comments

Post a Comment