ಎಸ್ ಡಿಪಿಐ ಪಕ್ಷದ ನೂತನ ಕಚೇರಿಯನ್ನು ಬೆಳೆಗಾರ ಸಿ.ಕೆ ಮೊಯ್ದು ಉದ್ಘಾಟಿಸಿ ಶುಭ ಹಾರೈಸಿದರು.
ಜಿಲ್ಲೆಯ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ: ಹನೀಫ್ ಪಾಲಿಬೆಟ್ಟದಲ್ಲಿ ಎಸ್ ಡಿ ಪಿ ಐ ಕಚೇರಿ ಉದ್ಘಾಟನೆ
ಸಿದ್ದಾಪುರ, : ಪ್ರವಾಹ, ಪ್ರಕೃತಿ ವಿಕೋಪ, ಬೆಳೆಹಾನಿ,ಕಾಡು ಪ್ರಾಣಿಗಳ ಹಾವಳಿ,ರಸ್ತೆ ಅವ್ಯವಸ್ಥೆ,ಶಾಶ್ವತ ಸೂರು, ಸಂತ್ರಸ್ತರ ಗೋಳು ಸೇರಿದಂತೆ ಹಲವಾರು ಸಮಸ್ಯೆಗಳು ಕೊಡಗು ಜಿಲ್ಲೆಯಲ್ಲಿ ಇದ್ದರು ಜಿಲ್ಲೆಯ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದೆ ಅಸಹಾಯಕತೆ ತೋರುತ್ತಿರುವುದು ಸರಿಯಲ್ಲ ಜಿಲ್ಲೆಯ ಜನಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನಹರಿಸುವ ಮೂಲಕ ಕೇಂದ್ರ ರಾಜ್ಯ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಜಿಲ್ಲೆಗೆ ತರಲು ಮುಂದಾಗಬೇಕೆಂದು ಎಸ್ ಡಿ ಪಿ ಐ ಪಕ್ಷದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹನೀಫ್ ಕೊಂಡಂಗೇರಿ ಒತ್ತಾಯಿಸಿದ್ದಾರೆ.ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ಪಾಲಿಬೆಟ್ಟ ವಲಯದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ಬೆಳೆಗಾರರು ಕೂಲಿಯನ್ನೇ ನಂಬಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಸೇರಿದಂತೆ ಜಿಲ್ಲೆಯ ಜನ ಸಾಮಾನ್ಯರು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದು ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಬಿಜೆಪಿಯ ಜನಪ್ರತಿನಿಧಿಗಳು ಮಲತಾಯಿ ಧೋರಣೆ ಮಾಡುತ್ತಿರುವುದು ಸರಿಯಲ್ಲ ಕಳೆದ 4ವರ್ಷಗಳಿಂದಲೂ ಅತಿ ಹೆಚ್ಚು ಸಮಸ್ಯೆಗಳಲ್ಲಿ ಕೊಡಗು ಜಿಲ್ಲೆ ರೈತರು, ಕಾರ್ಮಿಕರು, ಸಂತ್ರಸ್ತರು ಸಂಕಷ್ಟದ ಜೀವನ ನಡೆಸುವಂತಾಗಿದೆ.ವರ್ಷವಿಡಿ ಕಷ್ಟಪಟ್ಟು ಬೆಳೆದ ಫಸಲುಗಳು ಕೈಗೆ ಸಿಗದೆ ಕಾಡು ಪ್ರಾಣಿಗಳ ಪಾಲಾಗುತ್ತಿದ್ದು ಪ್ರಾಣಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮುಂದಾಗಿಲ್ಲ.ಪ್ರವಾಹ ಸಂದರ್ಭದಲ್ಲಿ ಮನೆ ಆಸ್ತಿಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿರುವವರಿಗೆ ಇಂದಿಗೂ ಶಾಶ್ವತ ಸೂರು ಪರಿಹಾರ ಸಿಕ್ಕಿಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರಗಳು ರಾಜಕೀಯ ಕಾಲಹರಣ ಮಾಡುತ್ತಿದೆ ಹೊರತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತಿಸುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಜಿಲ್ಲೆಯಿಂದ ಗೆದ್ದ ಜನಪ್ರತಿನಿಧಿಗಳು ಕೇಂದ್ರ ಹಾಗೂ ರಾಜ್ಯ ಸರಕಾರದ ಗಮನ ಸೆಳೆದು ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದರು.
No comments
Post a Comment