ಜಲಜೀವನ್ ಯೋಜನೆ ಅಡಿಯಲ್ಲಿ 2024ಕ್ಕೆ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೂ ಕುಡಿಯುವ ನೀರಿನ ವ್ಯವಸ್ಥೆ -ಕೆ ಜಿ ಬೋಪಯ್ಯ

No comments

 


ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು : ಪ್ರಧಾನಮಂತ್ರಿಗಳ ಜಲಜೀವನ್ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಕೇಂದ್ರ ಸರ್ಕಾರದಿಂದ 1.30ಕೋಟಿ ಹಣ ಬಿಡುಗಡೆಯಾಗಿದ್ದು 2024 ಕ್ಕೆ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆಜಿ ಬೋಪಯ್ಯನವರು ಹೇಳಿದರು.


 ನಾಪೋಕ್ಲು ಸಮೀಪದ ಕಕ್ಕಬ್ಬೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹೋಗುವ ರಸ್ತೆ ನಿರ್ಮಿಸಲು ಮತ್ತು ಇಂಟರ್ ಲಾಕ್ ಅಳವಡಿಸಲು ಸುಮಾರು 17 ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.


 ಈ ಕಾಮಗಾರಿಗೆ ಸಂಸದರಿಂದ 3ಲಕ್ಷ ವಿಧಾನಪರಿಷತ್ ಅನುದಾನದಿಂದ 5ಲಕ್ಷ, ವಿಧಾನಸಭಾ ಅನುದಾನದಿಂದ 5ಲಕ್ಷ ಮತ್ತು ರಸ್ತೆಕಾಮಗಾರಿಗೆ 4ಲಕ್ಷಗಳ ಅನುದಾನ ಇದೆ ಎಂದರು.


 ಪ್ರಧಾನ ಮಂತ್ರಿಗಳ ಜಲಜೀವನ್ ಮಿಷನ್ ಯೋಜನೆ ಅನ್ವಯ ಕೇಂದ್ರ ಸರ್ಕಾರವು ಶೇ 60%ರಷ್ಟು ಹಣವನ್ನು ಮತ್ತು ರಾಜ್ಯ ಸರ್ಕಾರವು ಶೇ 40% ಹಾಗೂ ಗ್ರಾಮ ಪಂಚಾಯಿತಿ ಶೇ 15%ರಷ್ಟು ಹಣವನ್ನು ವಹಿ ಸಬೇಕಿದ್ದು ಈ ಯೋಜನೆಯ ಫಲಾನುಭಾವಿಗಳು ಉಪಯೋಗಿಸುವ ನೀರಿಗೆ ವಾರ್ಷಿಕವಾಗಿ ಸ್ವಲ್ಪ ರೀತಿಯಲ್ಲಿ ಹಣವನ್ನು ಪಾವತಿ ಮಾಡಬೇಕಿದೆ ಎಂದರು.


ಅದರಂತೆ ಈಗಾಗಲೇ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ದುರಸ್ತಿಗೆ ಹಣ ಬಿಡುಗಡೆ ಮಾಡಿದೆ ಎಂದ ಅವರು ನಿರಂತರ ಮಳೆಯಿಂದಾಗಿ ಕಾಮಗಾರಿಯನ್ನು ಪ್ರಾರಂಭಿಸಲು ಸಾಧ್ಯವಾಗದೆ ರಸ್ತೆಗಳು ತೀರಾ ಹದಗೆಟ್ಟಿದ್ದು ತಿಳಿದುಬಂದಿದೆ ಮಳೆ ನಿಂತ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು ಇದಕ್ಕೆ ಜನರ ಸಹಕಾರ ಮುಖ್ಯವಾಗಿ ಬೇಕು ಎಂದರು. ಈಗಾಗಲೇ ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಹಿಂಬದಿಯಲ್ಲಿ ತಡೆಗೋಡೆಯನ್ನು 50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದ ಅವರು ಅದರಂತೆ ಇಗ್ಗುತ್ತಪ್ಪ ದೇವಾಲಯದ ರಸ್ತೆಯನ್ನು ಮುಂದಿನ ದಿನಗಳಲ್ಲಿ ಅಗಲೀಕರಣ ಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.


 ಈ ಸಂದರ್ಭ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲಿಯಾಟಂಡ ರಘು ತಮ್ಮಯ್ಯ ಮಾತನಾಡಿ ಮಾನ್ಯ ಶಾಸಕರು ನಮ್ಮ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಹಿಂಬದಿಯಲ ತಡೆಗೋಡೆ ನಿರ್ಮಿಸಲು 50 ಲಕ್ಷ ಅನುದಾನವನ್ನು ನೀಡಿದ್ದಾರೆ. ಅದರಂತೆ ಈಗಲು 17ಲಕ್ಷ  ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ಯನ್ನು ನಿರ್ಮಿಸಲು ಹಣವನ್ನು ಮಂಜೂರು ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸಿ ಮುಂದೆ ಈ ಕಾಮಗಾರಿ ಪೂರ್ಣಗೊಂಡ ಕೂಡಲೇ ಇದರ ಉದ್ಘಾಟನೆಯನ್ನುಮಾಡಲಾಗುವುದು ಎಂದು ತಿಳಿಸಿದರು.


 ಕಾರ್ಯಕ್ರಮದಲ್ಲಿ ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಉಪಾಧ್ಯಕ್ಷೆ ರಸೀನಾ,ಸದಸ್ಯರಾದ ಶೈಲಾ ಕುಟ್ಟಪ್ಪ, ಇಂದಿರಾ,ಹರೀಶ್, ಶಫಿಯಾ,ಪಿ ಡಿ ಓ ಅಶೋಕ, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಡಕಡ ಬೆಳ್ಯಪ್ಪ, ನಿರ್ದೇಶಕರಾದ ಅಲ್ಲಾರಂಡ ಸನ್ನು ಅಯ್ಯಪ್ಪ, ನೀಡುಮಂಡ ಹರೀಶ್ ಪೂವಯ್ಯ, ಕಲಿಯಂಡ ಬೋಪಣ್ಣ,ಎ.ಎನ್ ಲಕ್ಷ್ಮಣ, ಪರದಂಡ ಪ್ರಮೀಳಾ, ನಂಬಡಮಂಡ ಸುನಿತಾ,ಪಾಲೆ ಕಾರ್ಯಪ್ಪ, ಕೋಲೆಯಂಡ ಅಶೋಕ, ಕುಡಿಯರ ಗಿರೀಶ್,ಬಡಕಡ ದೀನಾ ಪೂವಯ್ಯ, ಚಂಡೀರ ಜಗದೀಶ್, ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಮಂಜುಳಾ,ಹಾಗೂ ಸಿಬ್ಬಂದಿ ವರ್ಗದವರು ಮತ್ತು ಪಾಂಡಂಡ ನರೇಶ್, ಕಲಿಯಂಡ ಸುನಂದ ಮತ್ತು ಅರ್ಚಕರಾದ ಶ್ರೀಕಾಂತ್, ಶ್ರೀನಿವಾಸ್, ಮತ್ತಿತರರು ಇದ್ದರು.

No comments

Post a Comment