ಕಾಫಿ ಮಂಡಳಿಯಿಂದ ಮಣ್ಣು ಪರೀಕ್ಷೆ ಶಿಬಿರ ಗುಣಮಟ್ಟ ಕಾಪಾಡಿ ಅಭಿವೃದ್ಧಿಯೊಂದಿಗೆ ಮುಂದೆ ಬನ್ನಿ

No comments
ಸಿದ್ದಾಪುರ : ತಮ್ಮ ಜಮೀನುಗಳಲ್ಲಿ ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಂಡು ಲಾಭದಾಯಕವಾಗಿ ಕೃಷಿ ಪಸಲು ಬೆಳೆಯುವದರೊಂದಿಗೆ ಕಾಫಿ ಬೋರ್ಡ್ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು  ಅಭಿವೃದ್ಧಿಯೊಂದಿಗೆ ಮುಂದೆ ಬರಬೇಕೆಂದು  ಮಡಿಕೇರಿ ಕಾಫಿ ಮಂಡಳಿಯ ವಿಸ್ತರಣಾ ವಿಭಾಗದ ಅಧಿಕಾರಿ ಪದ್ಮಭೂಷಣ ಹೇಳಿದರು.ಅರೆಕಾಡು ಗ್ರಾಮದಲ್ಲಿ ಕೊಡವ  ವೆಲ್ ಫೇರ್ &ರಿಕ್ರಿಯೆಶನ್ ಅಸೋಸಿಯೇಷನ್  ಸಹಕಾರದೊಂದಿಗೆ ಕಾಫಿ ಮಂಡಳಿ ವತಿಯಿಂದ ಮಣ್ಣು ಪರೀಕ್ಷಾ ಶಿಬಿರ ಹಾಗೂ ಮಣ್ಣಿನ ಗುಣಮಟ್ಟದ ಬಗ್ಗೆ ರೈತರಿಗೆ ಮಾಹಿತಿ ಕಾರ್ಯಾಗಾರ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ರೈತರ ಬೆನ್ನೆಲುಬಾಗಿರುವ ಕೃಷಿ ಭೂಮಿಯನ್ನು ಬೆಳೆಗೆ ಯೋಗ್ಯವಾಗುವ ರೀತಿಯಲ್ಲಿ ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಂಡು ಅಭಿವೃದ್ಧಿಯೊಂದಿಗೆ ಮುನ್ನಡೆಯಬೇಕೆಂದು ಸಲಹೆ ನೀಡಿದ ಅವರು  ಅಪಾಯಕಾರಿ ರಾಸಾಯನಿಕ ಬಳಕೆಯಿಂದ ಮಣ್ಣಿನ ಮೇಲೆ ಪರಿಣಾಮ ಬೀರುತ್ತಿದ್ದು   ಇದರಿಂದ ಕೃಷಿ ಬೆಳೆಗೆ ಹಿನ್ನಡೆಯಾಗಲಿದೆ.ರೈತರು ತಮ್ಮ ಕೃಷಿ ಭೂಮಿಯ ಮಣ್ಣಿನ  ಸುಧಾರಣೆಯ ಬಗ್ಗೆ ತಿಳಿದುಕೊಂಡು ಕಾಫಿ ಮಂಡಳಿಯ ಸಲಹೆಗಳನ್ನು ಪಡೆದುಕೊಳ್ಳಬೇಕು ಕಾಫಿ ಮಂಡಳಿಯಿಂದ ಮಣ್ಣಿನ ಗುಣಮಟ್ಟದ ಬಗ್ಗೆ ಸಂಚಾರಿ ಪರೀಕ್ಷೆ ನಡೆಸಲಾಗುತ್ತಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು .ಕೊಡವ ವೆಲ್ ಫೇರ್&ರಿಕ್ರಿಯೇಷನ್ ಅಸೋಸಿಯೇಷನ್ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಶಿಬಿರ ಉದ್ಘಾಟಿಸಿ ಮಾತನಾಡಿ  ಅರೆಕಾಡು ಹೊಸ್ಕೇರಿ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೊಡವ ವೆಲ್ಫೇರ್ ಅಸೋಸಿಯೇಶನ್ ಸಕ್ರಿಯವಾಗಿ ಸಮಾಜ ಸೇವೆಯಲ್ಲೂ ತೊಡಗಿಸಿ ಕೊಂಡಿದ್ದು ರೈತರು ಬೆಳೆಗಾರರಿಗೂ ಹಲವಾರು ಶಿಬಿರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೃಷಿಯೊಂದಿಗೆ  ಆರ್ಥಿಕವಾಗಿ ಮುನ್ನಡೆಯಲು ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕವಾಗಿದ್ದು  ಇದರ ಪ್ರಯೋಜನ ಪಡೆದುಕೊಳ್ಳವುದರ ಮೂಲಕ ಆರ್ಥಿಕವಾಗಿ ಅಭಿವೃದ್ಧಿಯೊಂದಿಗೆ ಮುಂದೆ ಬರಬೇಕೆಂದರು ಈ ಸಂದರ್ಭ ಕಾಫಿ ಮಂಡಳಿಯ ವಿವಿಧ ವಿಭಾಗದ ಅಧಿಕಾರಿಗಳಾದ ಶಿವಕುಮಾರಸ್ವಾಮಿ, ಅಜಿತ್ ಕುಮಾರ್ ರಾವತ್, ಕಾಫಿ ಸಂಶೋಧನಾ ಕೇಂದ್ರದ ರಜೀಬ್,ಕೊಡವ ವೆಲ್ಫೆರ್ ಅಸೋಸಿಯೇಶನ್ ನ ಉಪಾಧ್ಯಕ್ಷ ಬಲ್ಲಚಂಡ ಕಾವೇರಪ್ಪ,ಕಾರ್ಯದರ್ಶಿ ನೆಲ್ಲಮಕ್ಕಡ ಪಾವನ್,ಖಜಾಂಜಿ ಕಮಾಂಡರ್ ಉತ್ತಪ್ಪ,ಗ್ರಾಮ ಪಂಚಾಯ್ತಿ ಸದಸ್ಯ ಯೂಸುಫ್ ಅಲಿ,ಪ್ರಮುಖರಾದ  ಬಲ್ಲಾರಂಡ ಅಭಿ, ಟಿ.ಎಸ್ ನಾಣಯ್ಯ, ಎಂ.ಕೆ ಸಲೀಂ,ಕುಕ್ಕೇರ ಕುಶ, ಎ.ಬಿ ಸೋಮಯ್ಯ,ಕೆ. ಎ ಮುತ್ತಣ್ಣ,ಕುಕ್ಕೇರ ಅಯ್ಯಪ್ಪ, ಸಿ.ಎಸ್ ಕಾಳಪ್ಪ,ಕೆ.ಎ ಗಣಪತಿ ,ಬಲ್ಲಚಂಡ ಚಂದನ್,ಸುನೀಲ್ ,ಚೇರಂಡ ಸುಭಾಷ್,   ನಾಣಯ್ಯ, ಪ್ರಕಾಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

No comments

Post a Comment