ಅಭಿವೃದ್ಧಿ ಬಗ್ಗೆ ಮಾತೆತ್ತಲು ನೈತಿಕತೆ ಇಲ್ಲದ ಸಂಸದನಿಂದ ಕೋಮು ಭಾವನೆ ಕೆರಳಿಸುವ ಪ್ರಯತ್ನ ಖಂಡನೀಯ - ತಮ್ಲೀಖ್ ದಾರಿಮಿ

No comments
ಮಡಿಕೇರಿ:  ಜಿಲ್ಲೆಯ  ಅಭಿವೃದ್ಧಿ ಬಗ್ಗೆ ಚರ್ಚೆಗಳಾಗಬೇಕಾದ ಅದೆಷ್ಟೋ ಸಮಸ್ಯಗಳಿವೆ. ಇನ್ನೂ  ಮೂಲ ಸೌಕರ್ಯಗಳು ತಲುಪದ ಅದೆಷ್ಟೋ ಕುಟುಂಬಗಳಿವೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತರುತ್ತಾರೆ ಎಂದು ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಲಾಗಿದೆ. ರಸ್ತೆಗಳ ಪರಿಸ್ಥಿತಿ ಹದೆಗೆಟ್ಟಿದೆ. ಇವುಗಳನ್ನೇನು ಬಗೆಹರಿಸಲು ಸಾಧ್ಯವಾಗದ ಸಂಸದ ಕೊಡಗಿಗೆ ಬರುವಾಗಲೆಲ್ಲವೂ ಒಂದೊಂದು ಕೋಮ ಪ್ರಚೋದನಕಾರಿ ಹೇಳಿಕೆ ನೀಡುವುದು ವಾಡಿಕೆಯಾಗಿದೆ. ಅಭಿವೃದ್ಧಿ ಬಗ್ಗೆ ಮಾತನಾಡಲಾಗದ ಪ್ರತಾಪ್ ಸಿಂಹರ ರಾಜಕೀಯ ಅಸ್ತಿತ್ವದ ಉಳಿವು ಕೇವಲ ಕೋಮು  ದ್ವೇಷದಿಂದ ಮಾತ್ರವಾಗಿದೆ ಎಂದು ಎಸ್ ಕೆ ಎಸ್ ಎಸ್ ಎಫ್ ಕೊಡಗು ಜಿಲ್ಲಾ ಅಧ್ಯಕ್ಷ ತಮ್ಲೀಖ್ ದಾರಿಮಿ ಮಡಿಕೇರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಪ್ರವಾಹ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜಿಲ್ಲೆಯ ಜನರು ತೀರಾ ಸಂಕಷ್ಟದಲ್ಲಿದ್ದರು. ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಯಾವುದೇ ವಿಶೇಷ ಯೋಜನೆಗಳನ್ನು ಕೊಡಗಿಗೆ ತರಲು ನಮ್ಮ ಈ ಸಂಸದರಿಂದ ಸಾಧ್ಯವಾಗಲಿಲ್ಲ.ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಬೆಳೆಗಾರರು ಪ್ರಕೃತಿ ವಿಕೋಪ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿಯಿಂದ ನಿರಂತರ ಸಂಕಷ್ಟ ಎದುರಿಸುತ್ತಿದ್ದಾರೆ .ಕಾಡಾನೆ. ಹುಲಿ ಹಾವಳಿಯಿಂದ ಕಾರ್ಮಿಕರು. ಬೆಳೆಗಾರರು ಸಂಕಷ್ಟದ ಜೀವನ ನಡೆಸುವುದರೊಂದಿಗೆ ಪ್ರಾಣಹಾನಿಯೂ ಸಂಭವಿಸುತ್ತಲೇ ಇದೆ. ಕಾಡು ಪ್ರಾಣಿಗಳು ಬಾರದಾಗಿ ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರದಿಂದ ಯಾವುದೇ ಯೋಜನೆಗಳನ್ನು ರೂಪಿಸದೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡದೆ ಕಡೆಗಣಿಸಿದ್ದಾರೆ.ಕಸ್ತೂರಿ ರಂಗನ್ ವರದಿ. ಹೈಟೆನ್ಷನ್ ಪವರ್ ಲೈನ್ ನನ್ನ ಹೆಗಲಿಗೆ ಬಿಡಿ ಎಂದು ಬಹಿರಂಗವಾಗಿ ಹೇಳಿದ ಪ್ರತಾಪ್ ಸಿಂಹ ಗೆದ್ದ ನಂತರ ಎಲ್ಲವೂ ಮೌನವಾಗಿ ಜನರಿಗೆ ದ್ರೋಹ ಮಾಡಿದ್ದಾರೆ.ಜಿಲ್ಲೆಯ ಪ್ರಜ್ಞಾವಂತರು ಪ್ರಶ್ನೆ ಮಾಡುತ್ತಾರೆ ಎಂಬ ಭಯದಿಂದ ಒಂದು ವರ್ಗವನ್ನು ಗುರಿಯಾಗಿಸಿಕೊಂಡು ಹೇಳಿಕೆಗಳನ್ನು ನೀಡುವ ಮೂಲಕ ಅಭಿವೃದ್ಧಿಯನ್ನು ಮರೆಮಾಚಿ ಜನರ ನಡುವೆ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಶಾಂತಿಯುತ ಕೊಡಗಿನಲ್ಲಿ ಇಲ್ಲಿನ ಉತ್ತಮ ವಾತಾವರಣ ನಾಶಪಡಿಸಿ ಜನರ ಮನಸ್ಸಿನಲ್ಲಿ ಕೋಮು ದ್ವೇಷ ಹರಡಿಸುವ ಪ್ರಯತ್ನ ಒಬ್ಬ ಜನಪ್ರತಿನಿಧಿಯಿಂದ ನಡೆಯುತ್ತಿರುವುದು ತುಂಬಾ ಖೇದಕರ ಸಂಗತಿ. ಎರಡು ಜಿಲ್ಲೆಯನ್ನು ಪ್ರತಿನಿಧಿಸುವ ಒಬ್ಬ ಸಂಸದ ತನ್ನ ಸ್ಥಾನವನ್ನು, ಜವಬ್ದಾರಿಯನ್ನು ತಿಳಿಯದ ರೀತಿಯಲ್ಲಿ ದೇಶದ ಸಂವಿಧಾನಕ್ಕೆ ಬೆಲೆ ಕಲ್ಪಿಸದೆ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಭಾರತ ಯಾವುದೇ ಧರ್ಮದ ದೇಶವಲ್ಲ. ಭಾರತದ ಎಲ್ಲಾ ಜಾತಿ ಧರ್ಮಗಳನ್ನೊಳಗೊಂಡು, ಸಂವಿಧಾನ ಎಲ್ಲರಿಗೂ ಸಮಾನ ಹಕ್ಕನ್ನು ನೀಡುತ್ತಿದೆ. ಆದರೆ ಜನರನ್ನು ಸಮಾನವಾಗಿ ಕಂಡು ಎಲ್ಲರ ಏಳಿಗೆಗಾಗಿ ಪ್ರಯತ್ನಿಸಬೇಕಾದ ಒಬ್ಬ ಜನಪ್ರತಿನಿಧಿ ಒಂದು ಮತೀಯ ಸಂಘಟನೆಯ ವಾಕ್ತಾರನಂತೆ ಕೋಮು ದ್ವೇಷಕ್ಕೆ ಪ್ರೇರಣೆ ನೀಡಿ ಒಂದು ಕೋಮನ್ನು ಮಾತ್ರ ಗುರಿಯಾಗಿಸಿಕೊಂಡು ಪ್ರಚೋದನಕಾರಿ ಹೇಳಿಕೆ  ನೀಡುತ್ತಲೇ ಬರುತ್ತಿದೆ. ಇದು ಒಬ್ಬ ಸಂಸದನಿಂದ ಬರಬೇಕಾದ ವರ್ತನೆಯಲ್ಲ.ಇಷ್ಟ ಬಂದಂತೆ ವಸ್ತ್ರ ಧರಿಸಿ ಹೋಗಬೇಕೆಂದರೆ ಮದ್ರಸಾಗಳಿಗೆ ಹೋಗಿ ಎಂದು ಹೆಣ್ಣು ಮಕ್ಕಳ ಹಿಜಾಬಿನ ಕುರಿತಾಗಿ ಸಂಸದರು ತುಚ್ಛವಾದ ಮಾತನಾಡಿದ್ದಾರೆ. ಹಿಂಜಾಬ್ ಇಸ್ಲಾಂ ಮಹಿಳೆಯರಿಗೆ ನೀಡುವ ಒಂದು ರಕ್ಷಣಾ ಕವಚ, ಅದು ಇಸ್ಲಾಮಿನ ಸಂಸ್ಕೃತಿ, ಸಣ್ಣ ಪ್ರಾಯದಿಂದಲೇ ಹೆಣ್ಣು ಮಕ್ಕಳು ಅದನ್ನು ದರಿಸುತ್ತಾ ಬರುತ್ತಾರೆ. ಇತ್ತೀಚಿನ ದಿನಗಳ ವರೆಗೆ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ದರಿಸುವುದರಿಂದ ಯಾವುದೇ ತೊಂದರೆಗಳು ಯಾರಿಂದಲೂ ಕಂಡುಬರಲಿಲ್ಲ. ಆದರೆ ಈಗ ಸಂಘಪರಿವಾರ ಸಂಘಟನೆಗಳ ಷಡ್ಯಂತ್ರಗಳಿಂದಾಗಿ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಹಿಜಾಬ್ ವಿವಾದ ತಲೆ ಹೆತ್ತುತ್ತಿದೆ. ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ದರಿಸುವುದರಿಂದ ಪ್ರತಾಪ್ ಸಿಂಹ ಒಳಗೊಂಡ ಮತೀಯವಾದಿಗಳಿಗೆ ಸಮಸ್ಯೆಯಾದರು ಏನು ? ಮುಸ್ಲಿಂ ಹೆಣ್ಣು ಮಕ್ಕಳು ಅವರ ಇಚ್ಛೆ ಅನುಸಾರ ಹಿಜಾಬ್ ದರಿಸುತ್ತಿದ್ದಾರೆ. ಅದನ್ನು ಇನ್ನೊಬ್ಬರಿಗೆ ಎಲ್ಲೂ ಸಹ ಹೇರುತ್ತಿಲ್ಲ. ಪ್ರತಾಪ್ ಸಿಂಹ  ನಿಮ್ಮ ಸಂಸ್ಕೃತಿಯನ್ನು ನಮ್ಮ ಮೇಲೆ ಹೇರುವ ಪ್ರಯತ್ನ ಮಾಡಬೇಡಿ ಎಂಬ ಬೆದರಿಕೆಯ ಕರೆಯನ್ನು ನೀಡುತ್ತಿದ್ದಾರೆ. ಆದರೆ ಇಲ್ಲಿ ಮುಸ್ಲಿಂ ಸಮುದಾಯ ಯಾವತ್ತೂ ಕೂಡ ತಮ್ಮ ಆಚಾರಗಳನ್ನು ಇನ್ನೊಬ್ಬರ ಮೇಲೆ ಹೇರಿದ ಉದಾಹರಣೆ ಭಾರತ ದೇಶದಲ್ಲಿ ನಡೆದಿರುವುದಾಗಿ ಕಾಣಲು ಸಾಧ್ಯವಿಲ್ಲ. ಆದರೆ ಜೈ ಶ್ರೀರಾಂ ಹೇಳುವಂತೆ ವಯೋವೃದ್ಧರಿಗೂ ಸಹ ಒತ್ತಡ ಹೇರಿ ಆಕ್ರಮಣ ನಡೆಸುತ್ತಿರುವ ಸಂಘಪರಿವಾರದ ಸಲಹೆಗಳು ಪ್ರಬುದ್ಧ ಮುಸ್ಲಿಂ ಸಮುದಾಯಕ್ಕೆ ಅಗತ್ಯವಿಲ್ಲ. ಮದ್ರಸಾಗಳ ವಿರುದ್ಧ ತುಚ್ಚವಾಗಿ ಮಾತನಾಡುವ ಪ್ರತಾಪ್ ಸಿಂಹ ಈ ಮದ್ರಸಾಗಳು ದೇಶಕ್ಕೆ ನೀಡಿದ ಕೊಡುಗೆಗಳನ್ನು ತಿಳಿದುಕೊಳ್ಳಬೇಕಾಗಿದೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದ ಕಿಡಿ ಆರಂಭಿಸಿದ್ದು, ಅಚಂಚಲ ಹೋರಾಟಕ್ಕಿರುವ ಮನೋಸ್ಥೈರ್ಯ ನೀಡಿದ್ದು ಇದೇ ಮದ್ರಸಾಗಳು ಎಂಬುದು ಪ್ರತಾಪ ಸಿಂಹ ತಿಳಿದುಕೊಳ್ಳಬೇಕಾಗಿದೆ.ನಿಮಗೆ ಇಷ್ಟ ಬಂದಂತೆ ಜೀವಿಸಲು ಪಾಕಿಸ್ತಾನಕ್ಕೆ ಹೋಗಿ ಎಂಬ ಹೇಳಿಕೆ ನೀಡಿದ ಸಂಸದ ಪ್ರತಾಪ ಸಿಂಹ ಜಾತಿ ಧರ್ಮ ವ್ಯತ್ಯಾಸ ಇಲ್ಲದೆ ಬುಜಕ್ಕೆ ಬುಜ ಕೊಟ್ಟು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪೂರ್ವಜರ ಇತಿಹಾಸವನ್ನು ನೆನಪಿಸಬೇಕಾಗಿದೆ. ನಾವು ಇಲ್ಲೇ ಹುಟ್ಟಿ, ನಮ್ಮ ಪೂರ್ವಜರು ತಂದು ಕೊಟ್ಟು ಸ್ವಾತಂತ್ರ್ಯದಿಂದ ಇಲ್ಲಿ ಬದುಕುತ್ತಿದ್ದೇವೆ. ನಮ್ಮ ಮರಣವು ಸಹ ಈ ಪವಿತ್ರ ಭಾರತದ ಮಣ್ಣಿನಲ್ಲಾಗಿರುತ್ತದೆ. ಯಾವುದೇ ಸಮುದಾಯ ಇಲ್ಲಿ ಇಷ್ಟ ಬಂದಂತೆ ಬದುಕುತ್ತಿಲ್ಲ. ಎಲ್ಲಾ ಸಮುದಾಯವು ಇಲ್ಲಿನ ಸಂವಿಧಾನಕ್ಕೆ ಬೆಲೆಕೊಟ್ಟು, ಕಾನೂನನ್ನು  ಪಾಲಿಸಿ  ಬದುಕು ಸಾಗಿಸುತ್ತಿದ್ದಾರೆ. ಆದ್ದರಿಂದಲೇ ಭಾರತ ದೇಶವು ಸಧೃಡವಾಗಿದೆ. ಇಲ್ಲಿನ ಸಂವಿಧಾನ ಒಪ್ಪಿಕೊಳ್ಳಲು ಸಾಧ್ಯವಿಲ್ಲದವರು ಈ ದೇಶ ಬಿಟ್ಟು ತೊಲಗಿ ಜಾತ್ಯತೀತ ಜನರಿಗೆ ಸುಗಮ ಬದುಕು ಸಾಗಿಸಲು ಅನುವು ಮಾಡಿಕೊಡಬೇಕಾಗಿದೆ ಎಂದು ತಮ್ಲೀಖ್ ದಾರಿಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments

Post a Comment