Showing posts with label ಕ್ರೀಡಾ ಸುದ್ದಿ. Show all posts
Showing posts with label ಕ್ರೀಡಾ ಸುದ್ದಿ. Show all posts

RCB v/s SRH : ಆರ್ಸಿಬಿ ವಿರುದ್ಧ 4ರನ್ ಗಳಲ್ಲಿ ಸನ್ ರೈಸರ್ಸ್ ಹೈದರಬಾದ್ ಗೆಲುವು

ಕ್ರೀಡಾ ಟೈಮ್ಸ್ : ಐಪಿಎಲ್ ನ ರೋಚಕ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್,  ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 4 ರನ್ ಗಳಿಂದ ವಿಜಯ ಸಾಧಿಸಿದೆ.

ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಟೈನಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ 4 ರನ್ ಗಳಿಂದ ರೋಚಕ ಗೆಲುವು ಸಾಧಿಸಿದೆ. 142 ರನ್ ಗಳ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ಮೂರು ಆರಂಭಿಕ ವಿಕೆಟ್ ಕಳೆದುಕೊಂಡಿತು ಆದರೆ ನಂತರ ಗ್ಲೆನ್ ಮ್ಯಾಕ್ಸ್ ವೆಲ್ (40) ಮತ್ತು ದೇವದತ್ ಪಡಿಕ್ಕಲ್ (41) ಮೂರನೇ ವಿಕೆಟ್ ಗೆ 54 ರನ್ ಸೇರಿಸಿದರು. ಪಡಿಕ್ಕಲ್ ಮಧ್ಯದಲ್ಲಿ ಹೋರಾಡಿದರು ಮತ್ತು 80 ಕ್ಕಿಂತ ಕಡಿಮೆ ಸ್ಟ್ರೈಕ್‌ನೊಂದಿಗೆ ಆಡಿದರು. SRH ನಿಂದ ಎಲ್ಲಾ ಬೌಲರ್‌ಗಳು ಒಂದು ವಿಕೆಟ್ ಪಡೆದರು. ಬೌಲಿಂಗ್ ಅಂಕಿಅಂಶಗಳಿಗೆ ಸಂಬಂಧಿಸಿದಂತೆ ಉಮ್ರಾನ್ ಮಲಿಕ್ ಎಸ್‌ಆರ್‌ಹೆಚ್‌ನ ಅತ್ಯುತ್ತಮ ಬೌಲರ್ ಆಗಿದ್ದರು.

 ಜಮ್ಮು ಮತ್ತು ಕಾಶ್ಮೀರದ 21 ವರ್ಷದ ಪೇಸರ್ ತನ್ನ ಎರಡನೇ ಓವರ್‌ನಲ್ಲಿ ದೇವದತ್ ಪಡಿಕ್ಕಲ್‌ಗೆ ತನ್ನ 152.95 ಕಿಮೀ/ಎಸೆತವನ್ನು ನೀಡುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಭಾರತೀಯರ ವೇಗದ ಚೆಂಡನ್ನು ಬೌಲ್ ಮಾಡಿದರು. ಈ ನಷ್ಟದೊಂದಿಗೆ, ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಭರವಸೆಯು ವಿರಾಟ್ ಕೊಹ್ಲಿ ನೇತೃತ್ವದ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಿವ್ವಳ ರನ್ ರೇಟ್‌ನಲ್ಲಿ ಮುಂದಿದೆ. 

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 8ವಿಕೆಟ್ ಗಳ ಜಯ

 

ಕ್ರೀಡೆ (web@timesofcoorg) : ಐಪಿಎಲ್ ಕ್ರಿಕೆಟ್ ಟೂರ್ನಿಯ 33ನೇ ಪಂದ್ಯದಲ್ಲಿ ಸನರೈಸರ್ಸ್ ಹೈದಾರಾಬಾದ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ಗಳ ವಿಜಯ ಸಾಧಿಸಿದೆ.

ಸನ್ ರೈಸರ್ಸ್ ನೀಡಿದ ಗುರಿಯನ್ನು 17.5  ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 139ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದೆ. 


ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡವು, ಡೆಲ್ಲಿ ತಂಡದ ಬೌಲಿಂಗ್ ಗೆ 20ಓವರ್ ಗಳಲ್ಲಿ  9 ವಿಕೆಟ್ ನಷ್ಟಕ್ಕೆ 134 ರನ್ ಗಳ ಗುರಿ ನೀಡಿತ್ತು. ಅಬ್ದುಲ್ ಸಮದ್ (28) ರಶೀದ್ ಖಾನ್ (22) ಸಹಾ(18) ಇವರನ್ನು ಬಿಟ್ಟರೆ ಹೈದಾರಬಾದ್ ತಂಡದ ಇತರೆ ಆಟಗಾರರು ಸಣ್ಣ ಮೊತ್ತದ ರನ್ ನೀಡುವಲ್ಲಿ ಮಾತ್ರವಾದರು.


ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ - 42 ಶ್ರೇಯಸ್ ಅಯ್ಯರ್ - 47 ರಿಷಬ್ ಪಂತ್  - 35 ರನ್ ಗಳಿಸಿ ತಂಡದ ಮೊತ್ತವನ್ನು ಏರಿಸಿದರು.

ಕೂರ್ಗ್ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ಟೇಬಲ್ ಟೆನ್ನಿಸ್ ಪಂದ್ಯಾವಳಿ 

ಮಡಿಕೇರಿ (TOC ನ್ಯೂಸ್):-ಕೂರ್ಗ್ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಗರದಲ್ಲಿ ನಡೆಯಿತು. ಕೂರ್ಗ್ ಟೇಬಲ್ ಟೆನ್ನಿಸ್ ಅಸೋಸಿಯೇಶನ್ ಅಧ್ಯಕ್ಷರಾದ ಮೊಹಮ್ಮದ್ ಆಸೀಫ್ ಹಾಗೂ ಪ್ರಧಾನ ಕಾರ್ಯದರ್ಶಿ ಮಲ್ಲೇಂಗಡ ರಚನ್ ಪೊನ್ನಪ್ಪ, ಎನ್‍ಎಲ್‍ಎನ್ ಗ್ರೂಪ್ ಕಂಪೆನಿಯ ಚೇರ್‍ಮೇನ್ ಸಾತಪ್ಪನ್, ರೋಟರಿ ಅದ್ಯಕ್ಷರಾದ ರತನ್ ತಮ್ಮಯ್ಯ, ಕಾರ್ಯದರ್ಶಿ ಕೆ.ಸಿ. ಕಾರ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು. ಏ ಟೂ ಜೇಡ್ ಸೂಪರ್ ಮಾರ್ಕೇಟ್‍ನ ಮಾಲೀಕರಾದ ಮೊಹಮ್ಮದ್ ನಾಸೀರ್, ಮುಳಿಯ ಜ್ಯುವೆಲ್ಲರ್ಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಕ್ರೀಡೆಯ ಮಹತ್ವವನ್ನು ತಿಳಿಸಿದರು. ಮೈಸೂರಿನ ಡಾ.ಎಂ.ಜಿ.ಪಾಲ್ಕಾರ್, ರೋಟರಿ ಕಾರ್ಯದರ್ಶಿ ಕೆ.ಸಿ. ಕಾರ್ಯಪ್ಪ, ಕೂರ್ಗ್ ಟೇಬಲ್ ಟೆನ್ನಿಸ್ ಅಸೋಸಿಯೇಶನ್ ಅಧ್ಯಕ್ಷರಾದ ಮೊಹಮ್ಮದ್ ಆಸೀಫ್ ಇತರರು ಇದ್ದರು.
ಸ್ಪರ್ಧೆಯಲ್ಲಿ ವಿಜೇತರಾದ ವಿವರ:-ಜೂನಿಯರ್ ವಿಭಾಗದಲ್ಲಿ 14 ವರ್ಷದೊಳಗಿನ ಹುಡುಗರು ಸಹದ್(ಪ್ರಥಮ), ಪ್ರಥ್ವಿನ್(ದ್ವಿತೀಯ), ಜೂನಿಯರ್ ವಿಭಾಗದಲ್ಲಿಎ 14 ವರ್ಷದೊಳಗಿನ ಹುಡುಗರಿಯರಿಗೆ ತನ್ವಿಕ(ಪ್ರಥಮ), ಲಕ್ಷ್ಮಿ(ದ್ವಿತೀಯ). ಜೂನಿಯರ್ ಡಬಲ್ಸ್ ವಿಭಾಗದಲ್ಲಿ 21 ವರ್ಷದೊಳಗಿನ ಹುಡುಗಿಯರಿಗೆ ಅನುಷ(ಪ್ರಥಮ), ಪೂವಮ್ಮ(ಪ್ರಥಮ) ಪೂರ್ವಿ(ದ್ವಿತೀಯ) ತನ್ವಿಕ(ದ್ವಿತೀಯ). ಜೂನಿಯರ್ ಹುಡುಗರ ಡಬಲ್ಸ್ ವಿಭಾಗದಲ್ಲಿ ಬಿದಪ್ಪ(ಪ್ರಥಮ), ಚೇತನ್(ಪ್ರಥಮ), ಪ್ರಥ್ವೇನ್(ದ್ವಿತೀಯ), ಜಶ್ವಂತ್(ದ್ವಿತೀಯ). ಜೂನಿಯರ್ ಹುಡುಗಿಯರ ವಿಭಾಗದಲ್ಲಿ ಪೂವಮ್ಮ(ಪ್ರಥಮ), ಅನುಷ(ದ್ವಿತೀಯ), ಜೂನಿಯರ್ ಹುಡುಗರ ವಿಭಾಗದಲ್ಲಿ ಪ್ರಜ್ವಲ್(ಪ್ರಥಮ) ಹಾಗೂ ಚೇತನ್(ದ್ವಿತೀಯ) ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ರೀನಾ(ಪ್ರಥಮ) ಹಾಗೂ ರೋನಿಶ ಜಾನ್(ದ್ವಿತೀಯ), ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ರೋನಿಶ ಜಾನ್ ಹಾಗೂ ರೀನಾ(ಪ್ರಥಮ), ಕವಿತ ಸತ್ಯದೇವ, ಶಾಂತಿ ದೇವದಾಸ್(ದ್ವಿತೀಯ). ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಂಜುನಾಥ್ ಪಿ.ಎಲ್.(ಪ್ರಥಮ), ಆಕಾಶ್(ದ್ವಿತೀಯ). ಪುರುಷರ ಡಬಲ್ಸ್ ವಿಭಾಗದಲ್ಲಿ ಮಂಜುನಾಥ್ ಪಿ.ಎಲ್ ಹಾಗೂ ರಾಮ್‍ದೇವ್(ಪ್ರಥಮ). ಮಲ್ಲೇಂಗಡ ರಚನ್ ಪೊನ್ನಪ್ಪ ಹಾಗೂ ರಶೀದ್(ದ್ವಿತೀಯ). ಹುಡುಗರು ಹಾಗೂ ಹುಡುಗಿಯರ ವಿಭಾಗದಲ್ಲಿ ಮಂಜುನಾಥ್ ಪಿ.ಎಲ್ ಹಾಗೂ ರೀನಾ(ಪ್ರಥಮ), ದ್ವಿತೀಯ ನಮಿತ ಹಾಗೂ ಮಲ್ಲೇಂಗಡ ರಚನ್ ಪೊನ್ನಪ್ಪ (ದ್ವಿತೀಯ). ಮತ್ತು ರಾಮದೇವ(ಪ್ರಥಮ) ಹಾಗೂ ಅನೀಸ್ ಮೊಹಮ್ಮದ್(ದ್ವಿತೀಯ) ಈ ಸಂದರ್ಭದಲ್ಲಿ ನಿವೃತ ಶಿಕ್ಷಕಿ ಕಸ್ತೂರಿ ಗೋವಿಂದಮ್ಮಯ್ಯ, ನಿವೃತ ದೈಹಿಕ ಶಿಕ್ಷಕರಾದ ಲಕ್ಷ್ಮಣ್ ಸಿಂಗ್ ಹಾಗೂ ತೀಪ್ರ್ರಗಾರರಾದ ಆಕಾಶ್ ಮತ್ತು ವಿಲ್ಸರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರ್ವಹಣೆಯನ್ನು ಗೀತಾ ಗಿರೀಶ್ ಮತ್ತು ಕೆ.ಸಿ.ಕಾರ್ಯಪ್ಪ ಅವರು ನಡೆಸಿಕೊಟ್ಟರು. ಆಯಿಷಾ ಆಸೀಪ್ ಸರ್ವರನ್ನು ವಂದಿಸಿದರು.

ರಾಷ್ಟ್ರಮಟ್ಟದ ಫುಟ್ಬಾಲ್ ಗೆ ಕೊಡಗಿನ ತಂಡ

ಮಡಿಕೇರಿ (TOC ನ್ಯೂಸ್): ರಾಜಸ್ಥಾನದ ಅಜ್ಮೀರ್ ನಲ್ಲಿ‌ ನಡೆಯುತ್ತಿರುವ ರಾಷ್ಟ್ರಮಟ್ಟದ 17 ವರ್ಷದೊಳಗಿನ ಬಾಲಕಿಯರ ಫುಟ್ಬಾಲ್ ಪಂದ್ಯಾವಳಿಗೆ ಕೊಡಗು ಜಿಲ್ಲೆಯ ಒಂಭತ್ತು ಮಂದಿ ಆಟಗಾರರು ಆಯ್ಕೆಯಾಗಿದ್ದಾರೆ. ಗೋಣಿಕೊಪ್ಪಲು ಲಯನ್ಸ್ ಶಾಲೆಯ ವಿದ್ಯಾರ್ಥಿನಿಯಾರಾಗಿರುವ ಇವರು ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಪ್ರಥಮ‌ ಸ್ಥಾನ ಪಡೆದಿದ್ದರು. ಲಯನ್ಸ್ ಶಾಲೆಯ ತಂಡ ಅತ್ಯುತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ರಾಜ್ಯ ತಂಡಕ್ಕೆ ಒಂಭತ್ತು ಆಟಗಾರರನ್ನು ಇದೇ ಶಾಲೆಯಿಂದ‌ ಆಯ್ಕೆ ಮಾಡಲಾಗಿದೆ. ಜಿಲ್ಲಾ‌ತಂಡ, ಮೈಸೂರು ವಿಭಾಗೀಯ ತಂಡಕ್ಕೆ ತರಬೇತುದಾರರಾಗಿದ್ದ ಲಯನ್ಸ್ ಶಾಲೆಯ ದೈಹಿಕ‌ ಶಿಕ್ಷಕ ಈಶ್ವರ್ ರಾಜ್ಯ ತಂಡಕ್ಕೂ ತರಬೇತುದಾರರಾಗಿದ್ದಾರೆ.ಸ್ಕೂಲ್ ಫೆಡರೇಷನ್ ಆಫ್ ಇಂಡಿಯಾ ಈ ಪಂದ್ಯಾವಳಿ ಆಯೋಜಿಸಿದೆ.

ವಿಶಿಷ್ಟ ದಾಖಲೆ ಬರೆದು ಕಪಿಲ್, ಶ್ರೀನಾಥ್, ಬುಮ್ರಾ ಸಾಲಿಗೆ ಸೇರಿದ ಮೊಹಮದ್ ಶಮಿ


ವಿಶಾಖಪಟ್ಟಣ (TOC SPORTS ): ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 203 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಕೊನೆಯ ದಿನದಾಟದಲ್ಲಿ 395 ರನ್‌ಗಳ ಬೃಹತ್ ಗೆಲುವಿನ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಬಲಗೈ ವೇಗಿ ಮೊಹಮ್ಮದ್ ಶಮಿ ಮಾರಕ ದಾಳಿಗೆ ತತ್ತರಿಸಿದ ಕೇವಲ 191 ರನ್‌ಗಳಿಗೆ ಸರ್ವಪತನವನ್ನು ಕಂಡಿತು. ಈ ಮೂಲಕ ಭಾರತ ಸ್ಮರಣೀಯ ಗೆಲುವನ್ನು ದಾಖಲಿಸಿತು.
ಪಿಚ್‌ನಿಂದ ಸಂಪೂರ್ಣ ಪ್ರಯೋಜನ ಪಡೆದಿದ್ದ ದಿನದ ಆರಂಭದಿಂದಲೇ ರಿವರ್ಸ್ ಹಾಗೂ ಇನ್ ಸ್ವಿಂಗ್ ದಾಳಿಯ ಮೂಲಕ ಎದುರಾಳಿಗಳನ್ನು ಕಾಡಿದರು. ತೆಂಬ ಬಾವುಮ (0), ನಾಯಕ ಫಾಫ್ ಡು ಪ್ಲೆಸಿಸ್ (13), ಕ್ವಿಂಟನ್ ಡಿ ಕಾಕ್ (0), ಡೇನ್ ಪೀಡಿಟ್ (56) ಹಾಗೂ ಕಗಿಸೋ ರಬಡರನ್ನು (18) ಶಮಿ ಹೊರದಬ್ಬಿದರು.


ಮೆಸ್ಸಿಗೆ ‘ಪುರುಷರ ಫಿಫಾ ಆಟಗಾರ’ ಪ್ರಶಸ್ತಿ, 


ರೋಮ್ ( TOC SPORTS ): ಈ ವರ್ಷದ ಫಿಫಾ ಆಟಗಾರ ಪ್ರಶಸ್ತಿಯನ್ನು ಪುರುಷರ ವಿಭಾಗದಲ್ಲಿ ಖ್ಯಾತ ಪುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಮತ್ತು ಮಹಿಳೆಯರ ವಿಭಾಗದಲ್ಲಿ ಅಮೆರಿಕದ ಮೆಗನ್ ರಾಪಿನೋಯಿ ಪಡೆದುಕೊಂಡಿದ್ದಾರೆ.

ಚಾಂಪಿಯನ್ಸ್ ಲೀಗ್ ಚಾಂಪಿಯನ್ ಲಿವರ್ಪೂಲ್ ತಂಡದ ವರ್ಗಿಲ್ ವಾನ್ ಡಿಜ್ಕ್ ಮತ್ತು ಜುವೆಂಟಾಸ್ ಮುಂಚೂಣಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಹಿಂದಿಕ್ಕಿ ಮೆಸ್ಸಿ ಫಿಫಾ ಆಟಗಾರ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ರೊನಾಲ್ಡೊ ಇಂದಿನ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಫಿಫಾದ ಪ್ರತಿಷ್ಠಿತ ಬ್ಯಾಲನ್ ಡಿ ಓರ್ ಪ್ರಶಸ್ತಿ ರೇಸ್ ನಲ್ಲೂ ಮೆಸ್ಸಿ ಮತ್ತು ವರ್ಗಿಲ್ ವಾನ್ ಡಿಜ್ಕ್ ಇದ್ದು, ಡಿ. 2ಕ್ಕೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.

ಕಾಲ್ಚೆಂಡು ಪಂದ್ಯಾಟ: ಬ್ಲೂ ಟೈಗರ್ಸ್ ಚೆಟ್ಟಳ್ಳಿ ಚಾಂಪಿಯನ್ 


ಚೆಟ್ಟಳ್ಳಿ; ಗೌರಿ ಗಣೇಶ ಪ್ರಯುಕ್ತ ಚೆಟ್ಟಳ್ಳಿ ಸಮೀಪದ ಕಾಫಿಸಿಟಿ ಕಾಫಿಬೋರ್ಡ್ ಫುಟ್ಬಾಲ್ ಕ್ಲಬ್ ವತಿಯಿಂದ ಏಕದಿನ ಚೆಟ್ಟಳ್ಳಿ ಗ್ರಾಮ‌ ಪಂಚಾಯತಿ ಮಟ್ಟದ "ಸೂಪರ್ ಫೈವ್" ಕಾಲ್ಚೆಂಡು ಪಂದ್ಯಾಟವು ಚೆಟ್ಟಳ್ಳಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಫೈನಲ್ ಪಂದ್ಯಾಟದಲ್ಲಿ ಬ್ಲೂ ಟೈಗರ್ಸ್ ತಂಡವು ೨-೧ ಗೋಲುಗಳ ಅಂತರದಿಂದ ಕಾಫಿ ಲವ್ವರ್ಸ್ ತಂಡವು ಮಣಿಸಿ ಪ್ರಥಮ ಸ್ಥಾನ ಪಡೆಯಿತು. ಕಾಫಿ ಲವ್ವರ್ಸ್ ತಂಡವು‌ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದಕ್ಕೂ ಮುನ್ನ ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು‌ ಆತಿಥೇಯ ಕಾಫಿ ಸಿಟಿ ಹಾಗೂ ಕಾಫಿ ಲವ್ವರ್ಸ್ ತಂಡಗಳ ನಡುವೆ ನಡೆಯಿತು. ಕಾಫಿ ಲವ್ವರ್ಸ್ ತಂಡವು ರಾಜೇಶ್ ಅವರ ಅಮೋಘ ಒಂದು ಗೋಲಿನ‌ ನೆರವಿನಿಂದ ೧-೦ ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯವು ಬ್ಲೂ ಟೈಗರ್ಸ್ ಹಾಗೂ ಎಫ್.ಸಿ‌ ಕಂಡಕರೆ ತಂಡಗಳ ನಡುವೆ ನಡೆಯಿತು. ಬ್ಲೂ ಟೈಗರ್ಸ್ ತಂಡವು ಮಿಥುನ್ ಹಾಗೂ ಅಜಿತ್ ಅವರ ತಲಾ ಒಂದು ಗೋಲಿನ ಮೂಲಕ ೨-೦ ಗೋಲುಗಳ ಅಂತರದಿಂದ ಗೆದ್ದಿತು. ಪಂದ್ಯಾಟ ಅತ್ಯುತ್ತಮ ಆಟಗಾರ ಬ್ಲೂ ಟೈಗರ್ಸ್ ತಂಡದ ಅಜಿತ್, ಬೆಸ್ಟ್ ಗೋಲ್ ಕೀಪರ್ ಕಾಫಿ ಲವ್ವರ್ಸ್ ತಂಡದ ಭುವನ್ ಪಡೆದುಕೊಂಡರು. ಜಂಶಾದ್, ಆಲಿ, ಮಿಥುನ್, ಲತೀಫ್, ವಿರೂಪಾಕ್ಷ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಯೂತ್ ಫಾರ್ ಜಸ್ಟೀಸ್ ಮಡಿಲಿಗೆ ಪ್ರತಿಷ್ಠ ದುಬೈ ಕೆಪಿಎಲ್ ಟ್ರೋಫಿ


ಟೈಮ್ಸ್ ಆಫ್ ಕೂರ್ಗ್/ ಗಲ್ಫ್ ನ್ಯೂಸ್ 
ದುಬೈ:ಕೂರ್ಗ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ದುಬೈ ,ಹಾಗೂ ರಾಪ್ಟರ್ಸ್ ಕ್ಲಬ್ ಕುಂಜಿಲ ಇವರ ಸಂಯುಕ್ತ ಆಶ್ರಯದಲ್ಲಿ ಬಕ್ರೀದ್ ಪ್ರಯುಕ್ತ ದುಬೈ ಅಲ್ ಕ್ವಾಸಿಸ್ ನಲ್ಲಿರುವ ಶಬಾಬ್ ಅಲ್ಅಹ್ಲಿ ಸ್ಪೋರ್ಟ್ಸ್ ಕ್ಲಬ್ ಫುಟ್ಬಾಲ್ ಮೈದಾನದಲ್ಲಿ ನಡೆದ ದುಬೈ ಕೊಡಗು ಪ್ರೀಮಿಯರ್ ಲೀಗ್ -2019 ಕಾಲ್ಚೆಂಡು ಪಂದ್ಯಾವಳಿಯಲ್ಲಿ ಅದ್ದು ನಾಯಕತ್ವದ ಸುಂಟಿಕೊಪ್ಪದ ಯೂಥ್ ಫಾರ್ ಜಸ್ಟಿಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು, ರೋಚಕ ಫೈನಲ್ ಪಂದ್ಯದಲ್ಲಿ ಚಾಮಿಯಲ ತಂಡವನ್ನು ಮಣಿಸಿ ಪ್ರಶಸ್ತಿ ಪಡೆದರು. ಭಾರತ ರಾಷ್ಟ್ರ ಗೀತೆ ಮತ್ತು ಕರ್ನಾಟಕ ರಾಜ್ಯ ಗೀತೆಯೊಂದಿಗೆ ಪಂದ್ಯಾವಳಿಯು ಪ್ರಾಂಭಗೊಂಡಿತ್ತುಈ ಒಂದು ಪಂದ್ಯಾವಳಿಯೂ ಅನಿವಾಸಿ ಕೊಡಗಿನವರಿಗೆ ಮಾತ್ರ ಸೀಮಿತವಾಗಿದ್ದು 13 ತಂಡಗಳು ಭಾಗವಹಿಸಿದ್ದವು. ಅತ್ಯುತ್ತಮ ಆಟಗಾರನಾಗಿ ಸುಂಟಿಕೊಪ್ಪ ತಂಡದ ರಿಯಾನ್ ಟ್ರೋಫಿ ತಮ್ಮದಾಗಿಸಿದರೆ, ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಚಾಮಿಯಾಲ ತಂಡದ ಶಂಶಿ ಅವರು ಪಡೆದರು. ಕೊಟ್ಟಮುಡಿ ತಂಡವನ್ನು ಮಣಿಸಿ ಸುಂಟಿಕೊಪ್ಪ ತಂಡ ಫೈನಲ್ ಪ್ರವೇಶಿಸದರೆ ಲಕ್ಕಿ ರಾಪ್ಟರ್ಸ್ ಕುಂಜಿಲ ತಂಡವನ್ನು ಮಣಿಸಿ ಚಾಮಿಯಲ ತಂಡ ಫೈನಲ್ ಪ್ರವೇಶಿಸಿತ್ತು.  ವಿಜೇತ ತಂಡಗಳಿಗೆ ಟ್ರೋಫಿ ಮತ್ತು ನಗದು ಹಣವನ್ನು ಬಹುಮಾನವಾಗಿ ನೀಡಲಾಯಿತ್ತು, ಆಯೋಜಕರಾದ ರಫೀಕಲಿ ಕುಂಡಂಡ ಕುಂಜಿಲ ಭಾಗವಹಿಸಿದ ಎಲ್ಲಾ ಆಟಗಾರರಿಗೂ ಮತ್ತು ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು. 

ಕೂರ್ಗ್ ಪ್ರೀಮಿಯರ್ ಲೀಗ್ ಸೀಜನ್ 2 ವಾಲಿಬಾಲ್ ಪಂದ್ಯಾಟ: ಸ್ಟಾರ್ ಬಾಯ್ಸ್ ಗುಂಡಿಕೆರೆ ಚಾಂಪಿಯನ್ 


ಚೆಟ್ಟಳ್ಳಿ:ದುಬೈ ಮರಳುಗಾಡಿನಲ್ಲಿ ಬಕ್ರೀದ್ ಪ್ರಯುಕ್ತ ಎನ್.ಸಿ.ಟಿ ಟೂರ್ಸ್ ಮತ್ತು ಟ್ರಾವೆಲ್ಸ್ ಇವರ ಆಶ್ರಯದಲ್ಲಿ ನಡುದ ಕೂರ್ಗ್ ಪ್ರೀಮಿಯರ್ ಲೀಗ್ ಸೀಜನ್ ೨ ವಾಲಿಬಾಲ್ ಪಂದ್ಯಾಟದಲ್ಲಿ ಸ್ಟಾರ್ ಬಾಯ್ಸ್ ಗುಂಡಿಕೆರೆ ತಂಡವು ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಜಿದ್ದಾಜಿದ್ದಿನ ಫೈನಲ್ ಹೋರಾಟದಲ್ಲಿ ಸುಹೈಲ್ ಗುಂಡಿಕೆರೆ ನಾಯಕತ್ವದ ಸ್ಟಾರ್ ಬಾಯ್ಸ್ ಗುಂಡಿಕೆರೆ ತಂಡವು ೨-೧ ಸೆಟ್ ಗಳಿಂದ ಹಾಲಿ ಚಾಂಪಿಯನ್ ಅಯಾನ್ ಫ್ರೆಂಡ್ಸ್ ತಂಡವನ್ನು ಮಣಿಸಿ ಪ್ರಶಸ್ತಿ ಪಡೆದುಕೊಂಡರು. ಜಮಾಲ್ ನಾಯಕತ್ವದ ಅಯಾಮ್ ವಾರಿಯರ್ಸ್‌ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ನೀಡಲಾಯಿತು ‌. ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಸ್ಟಾರ್ ಬಾಯ್ಸ್ ಗುಂಡಿಕೆರೆ ಹಾಗೂ ಟಿಪ್ಪು ‌ವಾರಿಯರ್ಸ್ ತಂಡಗಳ ನಡುವೆ ನಡೆಯಿತು. ಸ್ಟಾರ್ ಬಾಯ್ಸ್ ತಂಡವು ೨-೦ ನೇರ ಸೆಟ್ ಗಳಿಂದ ಗೆದ್ದಿತು. ಎರಡನೇ ಸೆಮಿಫೈನಲ್ ಪಂದ್ಯವು ಅಯಾನ್ ವಾರಿಯರ್ಸ್‌ ಹಾಗೂ ರಾಫೆಲ್ಸ್ ಪಿ.ಯು ಕಾಲೇಜಿನ ತಂಡಗಳ ನಡುವೆ ನಡೆಯಿತು. ಅಯಾನ್ ವಾರಿಯರ್ಸ್‌ ತಂಡವು ೨- ೦ ನೇರ ಸೆಟ್ ಗಳಿಂದ ಗೆದ್ದರು. ಪಂದ್ಯಾಟ ಬೆಸ್ ಆಟಗಾರ ಸುಹೈಲ್ ಗುಂಡಿಕೆರೆ, ಬೆಸ್ಟ್ ಲಿಬ್ರೋ ಜಮಾಲ್ ಕೊಂಡಂಗೇರಿ, ಬೆಸ್ಟ್ ಬ್ಲಾಕರ್ ಹಕೀಂ, ಕೂಲ್ ಕ್ಯಾಪ್ಟನ್ ಮಂಚಿ ಎಮ್ಮೆಮಾಡು, ಪ್ರಶಸ್ತಿ ಪಡೆದರು . ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಎರಡು ತಂಡಗಳ ನಗದು ಬಹುಮಾನದ ಮೊತ್ತವನ್ನು ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಮೂಲಕ ನೀಡಲಾಯಿತು ‌.