ಟೈಮ್ಸ್ ಆಫ್ ಕೂರ್ಗ್/ ಗಲ್ಫ್ ನ್ಯೂಸ್
ದುಬೈ:ಕೂರ್ಗ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ದುಬೈ ,ಹಾಗೂ ರಾಪ್ಟರ್ಸ್ ಕ್ಲಬ್ ಕುಂಜಿಲ ಇವರ ಸಂಯುಕ್ತ ಆಶ್ರಯದಲ್ಲಿ ಬಕ್ರೀದ್ ಪ್ರಯುಕ್ತ ದುಬೈ ಅಲ್ ಕ್ವಾಸಿಸ್ ನಲ್ಲಿರುವ ಶಬಾಬ್ ಅಲ್ಅಹ್ಲಿ ಸ್ಪೋರ್ಟ್ಸ್ ಕ್ಲಬ್ ಫುಟ್ಬಾಲ್ ಮೈದಾನದಲ್ಲಿ ನಡೆದ ದುಬೈ ಕೊಡಗು ಪ್ರೀಮಿಯರ್ ಲೀಗ್ -2019 ಕಾಲ್ಚೆಂಡು ಪಂದ್ಯಾವಳಿಯಲ್ಲಿ ಅದ್ದು ನಾಯಕತ್ವದ ಸುಂಟಿಕೊಪ್ಪದ ಯೂಥ್ ಫಾರ್ ಜಸ್ಟಿಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು, ರೋಚಕ ಫೈನಲ್ ಪಂದ್ಯದಲ್ಲಿ ಚಾಮಿಯಲ ತಂಡವನ್ನು ಮಣಿಸಿ ಪ್ರಶಸ್ತಿ ಪಡೆದರು. ಭಾರತ ರಾಷ್ಟ್ರ ಗೀತೆ ಮತ್ತು ಕರ್ನಾಟಕ ರಾಜ್ಯ ಗೀತೆಯೊಂದಿಗೆ ಪಂದ್ಯಾವಳಿಯು ಪ್ರಾಂಭಗೊಂಡಿತ್ತುಈ ಒಂದು ಪಂದ್ಯಾವಳಿಯೂ ಅನಿವಾಸಿ ಕೊಡಗಿನವರಿಗೆ ಮಾತ್ರ ಸೀಮಿತವಾಗಿದ್ದು 13 ತಂಡಗಳು ಭಾಗವಹಿಸಿದ್ದವು. ಅತ್ಯುತ್ತಮ ಆಟಗಾರನಾಗಿ ಸುಂಟಿಕೊಪ್ಪ ತಂಡದ ರಿಯಾನ್ ಟ್ರೋಫಿ ತಮ್ಮದಾಗಿಸಿದರೆ, ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಚಾಮಿಯಾಲ ತಂಡದ ಶಂಶಿ ಅವರು ಪಡೆದರು. ಕೊಟ್ಟಮುಡಿ ತಂಡವನ್ನು ಮಣಿಸಿ ಸುಂಟಿಕೊಪ್ಪ ತಂಡ ಫೈನಲ್ ಪ್ರವೇಶಿಸದರೆ ಲಕ್ಕಿ ರಾಪ್ಟರ್ಸ್ ಕುಂಜಿಲ ತಂಡವನ್ನು ಮಣಿಸಿ ಚಾಮಿಯಲ ತಂಡ ಫೈನಲ್ ಪ್ರವೇಶಿಸಿತ್ತು. ವಿಜೇತ ತಂಡಗಳಿಗೆ ಟ್ರೋಫಿ ಮತ್ತು ನಗದು ಹಣವನ್ನು ಬಹುಮಾನವಾಗಿ ನೀಡಲಾಯಿತ್ತು, ಆಯೋಜಕರಾದ ರಫೀಕಲಿ ಕುಂಡಂಡ ಕುಂಜಿಲ ಭಾಗವಹಿಸಿದ ಎಲ್ಲಾ ಆಟಗಾರರಿಗೂ ಮತ್ತು ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು.



No comments
Post a Comment