ಕೊಡಗು ಜಿಲ್ಲೆಯಲ್ಲಿ ಇಂದು ಶುಕ್ರವಾರ 46 ಮಂದಿಗೆ ಕೊರೋನಾ ಪಾಸಿಟಿವ್

No comments

        ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆ ವೇಳೆಗೆ 17 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 29  ಸೇರಿದಂತೆ ಒಟ್ಟು 46 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

      ಮಡಿಕೇರಿ ತಾಳತ್ತಮನೆಯ 28 ವರ್ಷದ ಪುರುಷ ಮತ್ತು 19 ವರ್ಷದ ಮಹಿಳೆ. ದಕ್ಷಿಣ ಕನ್ನಡದ ಕಲ್ಲುಗುಂಡಿಯ 60 ವರ್ಷದ ಮಹಿಳೆ. ವಿರಾಜಪೇಟೆ ಕುಂದ ಅಂಚೆಯ ಈಚೂರಿನ 62 ವರ್ಷದ ಮಹಿಳೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೋಲೀಸ್ ವಸತಿಗೃಹದ 36 ವರ್ಷದ ಮಹಿಳೆ ಮತ್ತು 7 ವರ್ಷದ ಬಾಲಕಿ. ಪಾಲಿಬೆಟ್ಟದ ಮಸೀದಿ ಮುಖ್ಯ ರಸ್ತೆ ಬಳಿಯ 75 ವರ್ಷದ ಪುರುಷ.   ವಿರಾಜಪೇಟೆ ಅರ್ಜಿ ಅಂಚೆಯ 24 ವರ್ಷದ ಮಹಿಳೆ. ವಿರಾಜಪೇಟೆ ಗಾಂಧಿನಗರ ಬಿ.ಎಸ್.ಎನ್.ಎಲ್ ಕಚೇರಿ ಬಳಿಯ 34 ವರ್ಷದ ಪುರುಷ.  ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೋಲೀಸ್ ವಸತಿಗೃಹದ 31 ವರ್ಷದ ಪುರುಷ. ಹಾಸನದ ಅರಕಲಗೂಡಿನ 40 ವರ್ಷದ ಪುರುಷ. ಮಡಿಕೇರಿ ಪೆನ್ ಷನ್ ಲೇಔಟಿನ 59 ವರ್ಷದ ಪುರುಷ.

      ಕುಶಾಲನಗರ ಬೈಚನಹಳ್ಳಿಯ 49 ವರ್ಷದ ಪುರುಷ. ಸಿದ್ದಾಪುರ ಪೋಲೀಸ್ ವಸತಿಗೃಹದ 47 ವರ್ಷದ ಪುರುಷ.     ಹಾಸನದ ಅರಕಲಗೂಡುವಿನ 33 ವರ್ಷದ ಪುರುಷ. ವಿರಾಜಪೇಟೆ ಅರಪಟ್ಟು ಗ್ರಾಮ ಮತ್ತು ಅಂಚೆಯ 60 ವರ್ಷದ ಪುರುಷ.       ಕುಶಾಲನಗರ ಬಸವೇಶ್ವರ ಲೇಔಟಿನ 67 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.     
      ವಿರಾಜಪೇಟೆ ಮಾಯಮುಡಿಯ ಎಲ್ಲೋ ಬ್ಯಾಂಬು ರೆಸಾರ್ಟ್ ಎದುರಿನ 70 ವರ್ಷದ ಮಹಿಳೆ. ಕುಶಾಲನಗರ ಮಾದಾಪಟ್ಟಣದ ಅರಬ್ಬಿ ಶಾಲೆ ಬಳಿಯ 61 ವರ್ಷದ ಪುರುಷ.  ಕುಶಾಲನಗರದ ಆದಿ ಶಂಕರಾಚಾರ್ಯ ಲೇಔಟಿನ 40 ವರ್ಷದ ಮಹಿಳೆ.ಸೋಮವಾರಪೇಟೆ ತ್ಯಾಗತ್ತೂರಿನ ಭಗವತಿ ದೇವಾಲಯ ಬಳಿಯ 49, 45 ವರ್ಷದ ಪುರುಷರು ಮತ್ತು 20 ವರ್ಷದ ಮಹಿಳೆ. ಕುಶಾಲನಗರ ಶಿರಂಗಾಲದ ನಲ್ಲೂರುಕೊಪ್ಪಲಿನ 26 ವರ್ಷದ ಮಹಿಳೆ. ಕುಶಾಲನಗರ ಹೆಬ್ಬಾಲೆಯ ಬಸವೇಶ್ವರ ದೇವಾಲಯ ಬಳಿಯ 46 ವರ್ಷದ ಮಹಿಳೆ. ಕೊಡ್ಲಿಪೇಟೆ ಹೊನ್ನೆಕೋಡಿಯ 45 ಮತ್ತು 24 ವರ್ಷದ ಮಹಿಳೆಯರು.

      ವಿರಾಜಪೇಟೆ ಮಾಲ್ದಾರೆ ಗ್ರಾಮದ 53 ಮತ್ತು 47 ವರ್ಷದ ಪುರುಷರು. ವಿರಾಜಪೇತೆ ಸಿದ್ದಾಪುರದ ಮಡಿಕೇರಿ ರಸ್ತೆಯ 19 ವರ್ಷದ ಪುರುಷ. ವಿರಾಜಪೇಟೆ ಕುಟ್ಟದ ಆಸ್ಪತ್ರೆ ವಸತಿಗೃಹದ 48 ವರ್ಷದ ಮಹಿಳೆ. ವಿರಾಜಪೇಟೆ ಕುಟ್ಟದ ಪೆÇಲೀಸ್ ವಸತಿಗೃಹದ 56 ವರ್ಷದ ಪುರುಷ. ವಿರಾಜಪೇಟೆ ಗೋಣಿಕೊಪ್ಪದ ಅರವತ್ತೊಕ್ಲುವಿನ 47 ವರ್ಷದ ಪುರುಷ. ವಿರಾಜಪೇಟೆ ಗೋಣಿಕೊಪ್ಪದ ಕಾರ್ ನಿಲ್ದಾಣದ ಹಿಂಭಾಗದ 38 ವರ್ಷದ ಮಹಿಳೆ. ವಿರಾಜಪೇಟೆ ಬೆಳ್ಳೂರು ಗ್ರಾಮದ ನೂರೆರದಾಳುವಿನ 71 ವರ್ಷದ ಪುರುಷ.  ವಿರಾಜಪೇಟೆ ಶ್ರೀಮಂಗಲದ 26 ವರ್ಷದ ಮಹಿಳೆ. ವಿರಾಜಪೇಟೆ ವಿಜಯನಗರ 1ನೇ ಹಂತದ 62 ವರ್ಷದ ಮಹಿಳೆ.  ವಿರಾಜಪೇಟೆ ಮೊಗರ್ ಗಲ್ಲಿಯ 5 ವರ್ಷದ ಬಾಲಕಿ ಮತ್ತು 45 ವರ್ಷದ ಮಹಿಳೆ. ವಿರಾಜಪೇಟೆ ಶ್ರೀಮಂಗಲ ಗ್ರಾಮದ ಶ್ರೀ ಕೃಷ್ಣ ದೇವಾಲಯ ಬಳಿಯ 77 ವರ್ಷದ ಮಹಿಳೆ. ಭಾಗಮಂಡಲ ಕೆವಿಜಿ ಕಾಲೇಜು ಬಳಿಯ 27 ವರ್ಷದ ಪುರುಷ. ಚೆಟ್ಟಳ್ಳಿ ಕಂಡಕೇರಿಯ 20 ವರ್ಷದ ಮಹಿಳೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಪಿರಿಯಾಪಟ್ಟಣ ಬೈಲುಕುಪ್ಪೆಯ 37 ವರ್ಷದ ಪುರುಷ.      ಸಿದ್ದಾಪುರ ಜಿಎಂಪಿ ಶಾಲೆ ಬಳಿಯ 60 ವರ್ಷದ ಪುರುಷ. ವಿರಾಜಪೇಟೆ ಕುಟ್ಟದ ಆಸ್ಪತ್ರೆ ವಸತಿಗೃಹದ 24 ವರ್ಷದ ಮಹಿಳೆ.  ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೋಲೀಸ್ ವಸತಿಗೃಹದ 26 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

        ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1650 ಆಗಿದ್ದು, 1244 ಮಂದಿ ಗುಣಮುಖರಾಗಿದ್ದಾರೆ. 385 ಸಕ್ರಿಯ ಪ್ರಕರಣಗಳಿದ್ದು, 21 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 247 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments

Post a Comment