ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ದನಕರುಗಳನ್ನು ಬಿಡದಂತೆ ಪಟ್ಟಣ ಪಂಚಾಯತಿ ಎಚ್ಚರಿಕೆ
ಸೋಮವಾರಪೇಟೆ (Times Of Coorg):-ಸೋಮವಾರಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿರುವುದರಿಂದ ಸಾರ್ವಜನಿಕರಿಗೆ, ಪಾದಾಚಾರಿಗಳಿಗೆ ರಸ್ತೆಯಲ್ಲಿ ಸಂಚರಿಸಲು ಅನಾನುಕೂಲ ಉಂಟಾಗುತ್ತಿದ್ದು, ಈ ಬಗ್ಗೆ ಕಚೇರಿಗೆ ದೂರುಗಳು ಬರುತ್ತಿರುವುದರಿಂದ ಸಂಬಂಧಿಸಿದ ಮಾಲಿಕರು ಈ ಕೂಡಲೇ ತಮ್ಮ ಹದ್ದು ಬಸ್ತಿನಲ್ಲಿ ದನಕರುಗಳನ್ನು, ಆಡು ಕುರಿಗಳನ್ನು ಸಾಕತಕ್ಕದ್ದು. ತಪ್ಪಿದಲ್ಲಿ ಈ ಬಿಡಾಡಿ ದನಕರುಗಳನ್ನು ಹಿಡಿದು ಗೋಶಾಲೆಗೆ ಬಿಡಲಾಗುವುದು. ಮುಂದಿನ ಕಷ್ಟನಷ್ಟಕ್ಕೆ ಪಟ್ಟಣ ಪಂಚಾಯಿತಿ ಜವಾಬ್ದಾರರಾಗುವುದಿಲ್ಲ ಎಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ ಅವರು ತಿಳಿಸಿದ್ದಾರೆ.

No comments
Post a Comment