ಮಕ್ಕಳಿಗೆ ಚೆಂಡೆ ಕಲಿಕೆ . ಜಾಗೃತಿ ಮೂಡಿಸಿದ ಕಲಾವಿದ ಶಾಜಿ.

No comments
ಸಿದ್ದಾಪುರ :ಕೋವಿಡ್ ಲಾಕ್ ಡೌನ್ ನಿಂದ  ಶಾಲಾ ಕಾಲೇಜುಗಳಿಗೆ ರಜೆ ಹಿನ್ನಲೆ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ ವಿದ್ಯಾರ್ಥಿಗಳಿಗೆ  ಚೆಂಡೆ ಕಲಿಕೆಯ ಬಗ್ಗೆ ಜಾಗೃತಿ  ಮೂಡಿಸುವುದರೊಂದಿಗೆ  ಮನೆಯಲ್ಲಿ ಕೋವಿಡ್  ನಿಯಮ ಪಾಲಿಸುವದರೊಂದಿಗೆ ಚೆಂಡೆ ಕಲಿಕೆಯ ಬಗ್ಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ ಮಾಲ್ದಾರೆಯ ಚೆಂಡೆ ಕಲಾವಿದ ಶಾಜಿ
ಸಂಪ್ರದಾಯ ಆಚರಣೆಗಳಿಗೆ ಹೆಸರುವಾಸಿಯಾಗಿರುವ ಕೇರಳದ ಚೆಂಡೆ ವಾದ್ಯಮೇಳವನ್ನು ಕೊಡಗು ಜಿಲ್ಲೆಗೆ ಪರಿಚಯಿಸುವ ಮೂಲಕ ಯುವಕರು, ಮಹಿಳೆಯರು, ಮಕ್ಕಳಿಗೆ ಚೆಂಡೆ ಕಲೆಯ ಜಾಗೃತಿ ಮೂಡಿಸುತ್ತಿರುವ ಮಾಲ್ದಾರೆಯ ಕಲಾವಿದ ಶಾಜಿ ಅವರ  ಸೇವಾ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ಶ್ರೀ ಮುತ್ತಪ್ಪ ಚೆಂಡೆ ಕಲಾ ತಂಡವನ್ನ ಕಟ್ಟಿಕೊಂಡಿರುವ ಶಾಜಿ  ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಧಾರ್ಮಿಕ ಆಚರಣೆ ಸೇರಿದಂತೆ ಇತರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರದರ್ಶನ ತೋರುವ ಮೂಲಕ  ಹಲವಾರು ಪ್ರಶಸ್ತಿ ಪತ್ರಗಳನ್ನು ಸ್ವೀಕರಿಸಿದ್ದಾರೆ.ಕೇರಳದ ಹೆಸರಾಂತ ಕಲಾವಿದ ಶಂಕರಕುಟ್ಟಿ ಮಾರರ್ ಅವರ ಶಿಷ್ಯ  ಎಡಕಾಡು ಉಣ್ಣಿಕೃಷ್ಣ  ಅವರ ಮೂಲಕ ತರಬೇತಿ ಪಡೆದು ಹನ್ನೆರಡು ವರ್ಷಗಳ ಹಿಂದೆ ಮಾಲ್ದಾರೆ ಸಮೀಪದ ಕಲ್ಲಳ್ಳ ಎಂಬ ಗ್ರಾಮದಲ್ಲಿ  ಜಿಲ್ಲೆಗೆ ಚಂಡೆ ಕಲೆಯನ್ನು ಪರಿಚಯಿಸುವ ಮೂಲಕ ಚಾಲನೆ ನೀಡಲಾಗಿತ್ತು. ಸುತ್ತಮುತ್ತಲ ಗ್ರಾಮೀಣ ಭಾಗದ ಯುವ ಪ್ರತಿಭೆಗಳಿಗೆ ಚೆಂಡೆ  ಕಲೆಯ ಬಗ್ಗೆ ಜಾಗೃತಿ ಮೂಡಿಸಿ ನೂರಾರು ಯುವಕರು ಕಲಾ ತಂಡದಲ್ಲಿ ಸಕ್ರಿಯರಾಗಿದ್ದಾರೆ.ಇದರೊಂದಿಗೆ  ಐವತ್ತು ಕ್ಕೂ ಹೆಚ್ಚು ಮಹಿಳೆಯರನ್ನು ಒಗ್ಗೂಡಿಸಿ  ಚೆಂಡೆ ಕಲೆಯ ತರಬೇತಿ ಪಡೆದು ರಾಜ್ಯದಲ್ಲಿಯೇ ಪ್ರಥಮ ಮಹಿಳಾ ತಂಡವನ್ನ ಕಟ್ಟಿದ್ದಾರೆ.ತರಬೇತಿ ಪಡೆದ ಮಹಿಳೆಯರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮದೇ ಆದ ಪ್ರದರ್ಶನ ನೀಡಿ ಜನ ಮೆಚ್ಚುಗೆ ಗಳಿಸಿದ್ದಾರೆ.ಈ ಹಿಂದೆ ಕೊಡಗು ಜಿಲ್ಲೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಕೇರಳ ರಾಜ್ಯ ದಿಂದ ಚೆಂಡೆ ಕಲಾತಂಡವನ್ನು ಕರೆಸಲಾಗುತ್ತಿತ್ತು.ಇದೀಗ ಜಿಲ್ಲೆಯಲ್ಲಿ ಹೆಸರುವಾಸಿಯಾಗಿರುವ ಮುತ್ತಪ್ಪ ಕಲಾ ತಂಡ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.ಸಿದ್ದಾಪುರ ಸೇರಿದಂತೆ ಜಿಲ್ಲೆಯ ಹಲವೆಡೆ ಶಾಲೆಗಳಿಗೂ ತೆರಳಿ ವಿದ್ಯಾರ್ಥಿಗಳಿಗೆ  ಚೆಂಡೆ ಕಲಿಕೆಯ ಜಾಗೃತಿ ಮೂಡಿಸುತ್ತಿದ್ದಾರೆ.ಯಾವುದೇ ಕಾರ್ಯಕ್ರಮಗಳಲ್ಲಿ ಚೆಂಡೆ ಬಾರಿಸುವ ಶಬ್ದಕ್ಕೆ  ಯುವ ಸಮೂಹ ಕುಣಿದು ಕುಪ್ಪಳಿಸುವುದು ಸಾಮಾನ್ಯವಾಗಿದೆ.ಕೋವಿಡ್ ಲಾಕ್ ಡೌನ್  ಸಂದರ್ಭದಲ್ಲಿ ಮೊಬೈಲ್ ಹಿಡಿದು ದಿನ ಕಳೆಯುತ್ತಿದ್ದ ಮಕ್ಕಳಿಗೆ ಕಲೆಯ ಅನುಭವ ನೀಡಿ ಪ್ರತಿಭಾವಂತರಾಗಲು ಪ್ರೇರಣೆ ನೀಡುತ್ತಿರುವ ಶಾಜಿ ಅವರ ಸೇವಾಕಾರ್ಯಕ್ಕೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಚೆಂಡೆ ಕಲಿಯಬೇಕೆಂಬ ಆಸೆ ಇತ್ತು  ಕೇರಳದ ಹೆಸರಾಂತ ಕಲಾವಿದರಿಂದ ತರಬೇತಿ ಪಡೆದು ಜಿಲ್ಲೆಯಲ್ಲಿ ಯುವಕರು ಮಹಿಳೆಯರು ಮಕ್ಕಳಿಗೆ ಕಲೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.ಕಲೆಗೆ ಜಾತಿ ಮತ ಭೇದವಿಲ್ಲದೆ ಎಲ್ಲರೂ ಸಹಕರಿಸುತ್ತಿದ್ದು ಯಾರೇ ಬಂದರೂ ಅವರಿಗೆ ಚೆಂಡೆ ತರಬೇತಿ ನೀಡಲಾಗುವದು.ಯುವ ಸಮೂಹ ದುಶ್ಚಟಗಳಿಂದ ದೂರವಾಗಿ ಇಂತಹ ಕಲೆಗಳನ್ನು ಮೈಗೂಡಿಸಿಕೊಂಡಲ್ಲಿ ಕಲೆಯೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎನ್ನುತ್ತಾರೆ ಚೆಂಡೆ ಕಲಾವಿದ ಶಾಜಿ..
.ಚೆಂಡೆ ಕಲೆಯನ್ನು ಜಿಲ್ಲೆಗೆ ಪರಿಚಯಿಸುವ ಮೂಲಕ ಮಹಿಳೆಯರು ಮಕ್ಕಳು ಯುವ ಸಮೂಹಕ್ಕೆ ಆದರ್ಶವಾಗಿ ಕಲೆಯ ಜಾಗೃತಿ ಮೂಡಿಸುತ್ತಿದ್ದಾರೆ.ಗ್ರಾಮೀಣ ಭಾಗದ ಮಕ್ಕಳನ್ನು ಒಗ್ಗೂಡಿಸಿ ಕಲೆಯೊಂದಿಗೆ ಪ್ರತಿಭಾನ್ವಿತರಾಗಿಸಲು ಮುಂದಾಗಿರುವುದು ಶ್ಲಾಘನೆಯ ಎನ್ನುತ್ತಾರೆ   ಮಾಲ್ದಾರೆ ಜನಪರ ಸಂಘದ ಅಧ್ಯಕ್ಷ  ಆಂಟೋನಿ.

 ...........ಲಾಕ್ ಡೌನ್ ನಡುವೆ ಚೆಂಡೆ ಕಲೆ ಪಾಠ ಹೇಳಿಕೊಡುತ್ತಿರುವ ಕಲಾವಿದ ಶಾಜಿ. ಜಿಲ್ಲೆಗೆ ಮಾದರಿಯಾಗಿದ್ದಾರೆ   ಮೊಬೈಲ್ ಹಾಗೂ ದುಶ್ಚಟಗಳಿಂದ ದೂರವಿರಲು ಯುವ ಸಮೂಹಕ್ಕೆ ಕಲೆ ಅತ್ಯಗತ್ಯವಾಗಿದೆ.ಯಾವುದೇ ಕಲೆಯನ್ನಾದರೂ ಜೀವನದಲ್ಲಿ ಅಳವಡಿಸಿಕೊಳ್ಳಿ.ಚಿತ್ರಕಲಾವಿದ ಬಾವಾ ಮಾಲ್ದಾರೆ.

No comments

Post a Comment