ನರೇಂದ್ರ ಮೋದಿ ಹುಟ್ಟುಹಬ್ಬ ಪ್ರಯುಕ್ತ ಸ್ವಚ್ಛತಾ ಸಿಬ್ಬಂದಿಗಳಿಗೆ ಸನ್ಮಾನ

No comments

ಸಿದ್ದಾಪುರ : ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ, ಬಿಜೆಪಿ ಪಕ್ಷ ಕರೆ ಕೊಟ್ಟ ಸೇವಾ ಸಪ್ತಾಹದ ಅಂಗವಾಗಿ ನೆಲ್ಯಹುದಿಕೇರಿಯ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಗ್ರಾಮ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ಸಭಾಂಗಣದಲ್ಲಿ ಶಕ್ತಿ ಕೇಂದ್ರದ ಪ್ರಮುಖ್ ಕಡೀರ ಬೆಳ್ಳಿಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆಲ್ಯಹುದಿಕೇರಿ ಗ್ರಾ.ಪಂ ಪೌರ ಕಾರ್ಮಿಕರಾದ ವೆಂಕಟೇಶ್ ಮತ್ತು ಪಳನಿಯವರ ಸೇವೆಯನ್ನು ಗುರುತಿಸಿ ಫಲ ಪುಷ್ಪ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರದ ಪ್ರಮುಖ್ ಬೆಳ್ಳಿಯಪ್ಪ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿಯು ತಳಮಟ್ಟದ ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ.ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿಯವರ ವರ್ಚಸ್ಸಿನಿಂದ ಯುವಕರ ದಂಡು ಬಿಜೆಪಿ ಪಕ್ಷವನ್ನು ನೆಚ್ಚಿಕೊಂಡು, ಪಕ್ಷ ಸಂಘಟನೆಯಲ್ಲಿ ತೊಡಗಿರುವುದು ಕಂಡುಬರುತ್ತಿದೆ.ಪಕ್ಷದ ಸಿದ್ದಾಂತದೊಂದಿಗೆ ಗ್ರಾಮದಲ್ಲಿ ಬಿಜೆಪಿ ಪಕ್ಷ ಬಲಗೊಂಡಿದ್ದು, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯಲ್ಲಿ  ನಮ್ಮ ಪಕ್ಷ  ಅಧಿಕಾರಕ್ಕೆ ಬರಲಿದೆ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಟಿ.ಸಿ ಅಶೋಕ್,ತಾಲ್ಲೂಕು ಸಮಿತಿ ಸದಸ್ಯ ವಸಂತಕುಮಾರ್ ಹೊಸಮನೆ,. ಬಿಜೆಪಿ ಶಕ್ತಿ ಕೇಂದ್ರದ ಸಹ ಪ್ರಮುಖ್ ಪ್ರಮೋದ್ , ಶರಣ್, ಪಕ್ಷದ ಪದಾಧಿಕಾರಿಗಳಾದ ಸಚಿನ್, ಮಹೇಂದ್ರ, ಚಂದ್ರಶೇಖರ್, ಯೋಗೇಶ್ ಹಾಗೂ ಹಿಂದು ಸಂಘಟನೆಯ ಪ್ರಮುಖರಾದ ಪ್ರಕಾಶ್, ಪದ್ಮನಾಭ್, ಅನೀಶ್, ಜಯ,ಇನ್ನಿತರರು ಹಾಜರಿದ್ದರು.

No comments

Post a Comment