SSF ಮಟ್ಟಂ ಯುನಿಟ್ ವತಿಯಿಂದ ಧ್ವಜ ದಿನಾಚರಣೆ

No comments

ಸುದ್ದಿಜಾಲ ಟಿಒಸಿ ; ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಂಸ್ಥಾಪನ ದಿನವಾದ ಸೆಪ್ಟೆಂಬರ್ 19 ನ್ನು ರಾಜ್ಯ ಸಮಿತಿಯು ಯುನಿಟ್‌ ಗಳಲ್ಲಿ ಧ್ವಜ ದಿನ ವಾಗಿ ಆಚರಿಸಲು ನಿರ್ದೇಶಿಸಿದ್ದು ಅದರಂತೆ ಎಸ್ಸೆಸ್ಸೆಫ್ ಮಟ್ಟಂ ಯುನಿಟ್ ವತಿಯಿಂದ ಧ್ವಜಾರೋಹಣ ಮಾಡುವುದರ ಮೂಲಕ ಧ್ವಜ ದಿನ ಆಚರಿಸಲಾಯಿತು.
ಬೆಳಿಗ್ಗೆ 8.30 ಗಂಟೆ ಮದ್ರಸ ಅಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಮಟ್ಟಂ ಬ್ರಾಂಚ್ ಅಧ್ಯಕ್ಷರಾದ ಜಲಾಲುದ್ದೀನ್ ಮುಸ್ಲಿಯಾರ್ ಹಾಗೂ ಮಹಮ್ಮದ್ ಕುಂಙಿ ಸಖಾಫಿ ಸೇರಿ ಧ್ವಜಾರೋಹಣ ನೆರವೇರಿಸಿದರು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಯುನಿಟ್ ಕಾರ್ಯದರ್ಶಿ ನಿಜಾಮುದ್ದೀನ್ ಸ್ವಾಗತ ಕೋರಿದರು.ಸಭೆಯಲ್ಲಿ ಮುಹಮ್ಮದ್ ಯಾಸೀನ್ ಅಲ್ಖಾದಿರಿ. ನೌಫಲ್ ಅನ್ವಾರ್ ಇಸ್ಮಾಯಿಲ್ ಮುಸ್ಲಿಯಾರ್. ಮುಬಶಿರ್. ಹಾಗೂ ಎಸ್ಸೆಸ್ಸೆಫ್ ಎಸ್ ಬಿ ಎಸ್ ನ ಸದಸ್ಯರು ಹಾಜರಿದ್ದರು.

-ಮೀಡಿಯಾ ವಿಂಗ್
ಎಸ್ಸೆಸ್ಸೆಫ್ ಮಟ್ಟಂ ಯುನಿಟ್

No comments

Post a Comment