ಮರ್ಹೂಂ ಖಲಂದರ್ ರಿಯಾಝ್ ವೇದಿಕೆ, ನೂರ್ ಮಹಲ್ ನಲ್ಲಿ ನಡೆದ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿದ್ದಂತಹ ಸ್ಥಳಿಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮಿಜಿಗಳು ಮುಖ್ಯ ಭಾಷಣ ಮಾಡುತ್ತಾ ಶಿಕ್ಷಕ . ಚಿಕಿತ್ಸಕ. ಕೃಷಿಕ , ಸೈನಿಕ , ಈ ನಾಲ್ಕು ವಿಭಾಗದಲ್ಲಿ ಜನರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವವರು ನಿಸ್ವಾರ್ಥ ಸೇವೆಯುಳ್ಳ ಚಿಕಿತ್ಸಕ
ರಕ್ತ ದಾನಿಗಳಿಂದ ರಕ್ತವನ್ನು ಸ್ವೀಕರಿಸಿ ಜೀವ ಉಳಿಸುವ ಕಾರ್ಯವನ್ನು ವ್ಯೆದ್ಯರು ಮಾಡುತ್ತಾರೆ.
ಬೇರೆ ಎಲ್ಲಾ ವಸ್ತುಗಳನ್ನು ಉತ್ಪಾದನೆ ಮಾಡಿದಂತೆ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲವಾದ್ದರಿಂದ
ಮನುಷ್ಯನಿಂದ ಮನುಷ್ಯನಿಗೆ ರಕ್ತವನ್ನು ನೀಡುವುದು ಅನಿವಾರ್ಯ ಇದರಿಂದ ಇನ್ನೊಬ್ಬರ ಜೀವ ಉಳಿಸುವುದಕ್ಕೆ ಸಾದ್ಯವಾಗುತ್ತದೆ ಎಂದರು.
ಮಡಿಕೇರಿ ಮೆಡಿಕಲ್ ಕಾಲೇಜು ಇದರ ವೈದ್ಯಾಧಿಕಾರಿಗಳಾದ ಡಾ.ಕರುಂಬಯ್ಯನವರು ಮಾತನಾಡಿ ಜಿಲ್ಲೆಯಲ್ಲಿ ಹಲವಾರು ಸಂಘಸಂಸ್ಥೆಗಳು ರಕ್ತದಾನ ಶಿಬಿರವನ್ನು ಮಾಡುತಿದ್ದರು ಕೂಡ ಎಸ್ ಎಸ್ ಎಫ್ ನ ರಕ್ತದಾನ ಶಿಬಿರ ಬಹಳ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ನಡೆಸುತಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿಯೂ ಕೂಡ ಆಗಾಗ ರಕ್ತದಾನ ಶಿಬಿರಗಳನ್ನು ಮಾಡಿ ಹಲವಾರು ರೋಗಿಗಳಿಗೆ ರಕ್ತ ದಾನ ಮಾಡಿ ಎಸ್ ಎಸ್ ಎಫ್ ನ ಕಾರ್ಯಕರ್ತರು ಮಾದರಿಯಾಗಿದ್ದಾರೆ. ಅದು ಶ್ಲಾಘನೀಯ ವಿಚಾರವು ಕೂಡ ಹೌದು ಎಂದರು. ಅದೇ ರೀತಿ ಸಾಮಾಜಿಕ ಸೇವೆಗಳ ಕುರಿತು ಶ್ಲಾಘಿಸಿದರು.
ಸ್ಥಳೀಯ ಪ್ರಖ್ಯಾತ ವ್ಯೆದ್ಯರು ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಕೋಶಾಧಿಕಾರಿ ಡಾ.ಉದಯ್ ಕುಮಾರ್ ,
ಲೆಡಿಗೋಷನ್ ಅಸ್ಪತ್ರೆಯ ಡಾ.ಜೆ.ಜೆ.ಭಟ್ ರವರು ರಕ್ತದಾನ ಮಹತ್ವವನ್ನು ವಿವರಿಸಿದರು.
ಎಸ್ ವೈ ಎಸ್ ರಾಜ್ಯ ಸಮಿತಿ ಸದಸ್ಯ ಹಸೈನಾರ್ ಆನೆಮಹಲ್ ಕಾರ್ಯಕ್ರಮ ಉದ್ಘಾಟಿಸಿದರು.
ಎಸ್.ಎಸ್.ಎಫ್ ಕೊಡಗು ಜಿಲ್ಲಾ ಉಪಾಧ್ಯಕ್ಷರಾದ ಶಾಫಿ ಸಅದಿ ಪ್ರಸ್ತಾವಿಕ ಭಾಷಣ ಮಾಡುತ್ತಾ ಎಸ್ ಎಸ್ ಎಫ್ ಈವರೆಗೆ ಮಾಡಿದಂತಹ ಶ್ಲಾಘನೀಯ ಸೇವೆಗಳನ್ನು ಸ್ಮರಿಸಿದರು. ಸಮಾಜದಲ್ಲಿ ಉಂಟಾದ ಪರಿವರ್ತನೆಗಳ ಕುರಿತು ಹಲವು ವಿಚಾರಗಳನ್ನು ನುಡಿದರು.
ಎಸ್.ವೈ.ಎಸ್ ರಾಜ್ಯ ಮೀಡಿಯಾ ವಿಂಗ್ ಕಾರ್ಯದರ್ಶಿ ಹಫೀಳ್ ಸಅದಿ ,ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅದ್ಯಕ್ಷ ಎಂ.ಎಸ್. ಅಬ್ದುಲ್ ರಬ್ಬ್ ,ಮಸ್ಜಿದುನ್ನೂರ್ ಖತೀಬ್ ಹಾರಿಸ್ ಬಾಖವಿ ಕಂಡಕ್ಕರೆ, ಮಸ್ಜಿದುನ್ನೂರ್ ಕಾರ್ಯದರ್ಶಿ ಮಹಮ್ಮದ್ ಹನೀಫ್, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾದ್ಯಕ್ಷ ಇಸಾಕ್ ಖಾನ್ ಕಾರ್ಯಕ್ರಮದ ಕುರಿತು
ಶುಭ ನುಡಿಗಳನ್ನಾಡಿದರು.ಎಸ್.ಎಸ್.ಎಫ್ ಕೊಡಗು ಜಿಲ್ಲಾಧ್ಯಕ್ಷ ಆಝೀಝ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.
ಮಸ್ಜಿದುನ್ನೂರ್ ಅಧ್ಯಕ್ಷ ಸುಲೈಮಾನ್ ಡಿ.ಎ,
ಖಜಾಂಜಿ ಇಬ್ರಾಹಿಂ ಮಲ್ಲಳ್ಳಿ , ಸದಸ್ಯರಾದ ರಝಾಕ್ ನರ್ಸರಿ, ಸುಲ್ಯೆಮಾನ್ ಕಿರಿಕೊಡ್ಲಿ,
ಬಾಸಿತ್, ಎಸ್ ವೈ ಎಸ್ ರಾಜ್ಯ ಸಮಿತಿಯ ಹಕೀಂ ಸಕಲೇಶಪುರ, ಎಸ್.ವೈ.ಎಸ್.ಹಾಸನ ಜಿಲ್ಲಾ ಕಾರ್ಯದರ್ಶಿ ರಶೀದ್ ಮುಸ್ಲಿಯಾರ್ ,ತ ಮದ್ರಸದ ಮುಖ್ಯ ಅಧ್ಯಾಪಕರಾದ ರಝಾಕ್ ಫೈಝಿ ಶನಿವಾರಸಂತೆ,
ಎಸ್ ಕೆ ಎಸ್. ಎಸ್ ಎಫ್ ಜಿಲ್ಲಾ ಖಜಾಂಜಿ ಹಾಜಿ ಅಬೂಬಕ್ಕರ್ ಸಿದ್ದೀಕ್ , ಸ್ಥಳೀಯ ಉಪ ಠಾಣೆಯ ಎ ಎಸ್ ಐ ಕೃಷ್ಣೆಗೌಡ ,ಹೆಡ್ ಕಾನ್ಸೆಟಬಲ್ ಡಿಂಪಲ್ ,
ನೂರ್ ಯೂತ್ ಆಸೋಸಿಯೇಷನ್ ಅದ್ಯಕ್ಷ ಬಾಸಿತ್ ಹಾಜಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಭೂಪಾಲ್ ,
ಜಯ ಕರ್ನಾಟಕ ಅದ್ಯಕ್ಷ ಶೋಭಿತ್ ,
ಇಬ್ರಾಹಿಂ ಖತರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಾತಿ ಮತ ಬೇಧ ವಿಲ್ಲದೆ 120ಕ್ಕೂ ಹೆಚ್ಚು ಜನ ರಕ್ತದಾನಿಗಳು ಹಾಜರಿದ್ದರು.
ಕೋವಿಡ್-19 ನಿಯಮಗಳನ್ನು ಪಾಲಿಸಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಮುನ್ನುಡಿಯಾಗಿ ಬೆಳಿಗ್ಗೆ ಬ್ಯಾಡಗೊಟ್ಟ ಸುನ್ನಿ ಸೆಂಟರ್ ನಲ್ಲಿ ಧ್ವಜ ದಿನದ ಅಂಗವಾಗಿ ದ್ವಜಾರೋಹಣ ಮಾಡಲಾಯಿತು.
ಎಸ್ ಎಸ್ ಎಫ್ ಕೊಡ್ಲಿಪೇಟೆ ಶಾಖೆಯ ಅಧ್ಯಕ್ಷ ಇಂಜಿನಿಯರ್ ಹಾರೂನ್ ರಶೀದ್ ಸ್ವಾಗತಿಸಿ,
ಸುಲ್ತಾನ್ ರಾಝಿಂ ನಿರೂಪಿಸಿ , ಮಹಮ್ಮದ್ ಫಾಳಿಲಿ ವಂದಿಸಿದರು. ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ಸಂಘಟನೆಯ ಜಿಲ್ಲಾ ನೇತಾರರು, ಶಾಖೆಯ ಎಲ್ಲಾ ಕಾರ್ಯಕರ್ತರು, ಜಿಲ್ಲೆಯ ವಿವಿಧ ಕಡೆಯ ಕಾರ್ಯಕರ್ತರು ಹಾಜರಿದ್ದರು.
- ವರದಿ : ಹನೀಫ್ ಕೊಡ್ಲಿಪೇಟೆ
< Click To View HD Images >
























No comments
Post a Comment