ಸೆ 21 ರಂದು ಪಾಲಿಬೆಟ್ಟದಲ್ಲಿ ಬೆಳೆಗಾರರ ಒಕ್ಕೂಟದ ಸಭೆ

No comments
ಪಾಲಿಬೆಟ್ಟ: ಪಾಲಿಬೆಟ್ಟ ಸುತ್ತಮುತ್ತಲ ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ಹಾಗೂ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಜನರು ಹಲವು  ಸಂಕಷ್ಟಗಳನ್ನು ಎದುರಿಸುತ್ತಿದ್ದು. ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೊಡಗು ಬೆಳೆಗಾರರ ಪಾಲಿಬೆಟ್ಟ ವಲಯ  ಒಕ್ಕೂಟದ ವತಿಯಿಂದ ಸೆ 21 ರಂದು ಸೋಮವಾರ ಬೆಳಿಗ್ಗೆ ಪಾಲಿಬೆಟ್ಟದ ಅನುಗ್ರಹದಲ್ಲಿ  ಸಭೆ ನಡೆಯಲಿದ್ದು ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಲಿದ್ದಾರೆ .ಗ್ರಾಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪಾಲಿಬೆಟ್ಟ ವಲಯದ ಬೆಳೆಗಾರರು ಸಭೆಗೆ ಭಾಗವಹಿಸಲಿದ್ದಾರೆ.ಎಂದು ಪಾಲಿಬೆಟ್ಟ ಬೆಳೆಗಾರರು ಒಕ್ಕೂಟದ ಅಧ್ಯಕ್ಷ  ಡಾ. ಎ.ಸಿ ಗಣಪತಿ ತಿಳಿಸಿದ್ದಾರೆ

No comments

Post a Comment