ಎಸ್ ವೈ ಎಸ್ ಕೊಡಗು ಜಿಲ್ಲಾ ಸಾಂತ್ವನ ವಿಭಾಗ ನಿರ್ಮಿಸಿದ ಮನೆ ಹಸ್ತಾಂತರ
ಸೋಮವಾರಪೇಟೆ (Times Of Coorg) : ಸುನ್ನಿ ಯುವಜನ ಸಂಘ (ರಿ) ಕೊಡಗು ಜಿಲ್ಲಾ ಸಮಿತಿಯ ಸಾಂತ್ವನ ವಿಭಾಗ SYS ಬೆಂಗಳೂರು ಸಹಯೋಗದಲ್ಲಿ ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ನಿರ್ಮಿಸಿದ ದಾರುಲ್ ಖೈರ್ ಮನೆಯನ್ನು ಹಸ್ತಾಂತರಿಸಲಾಯಿತು.
SYS ಕೊಡಗು ಜಿಲ್ಲಾ ಸಾಂತ್ವನ ವಿಭಾಗ ಚೇರ್ ಮ್ಯಾನ್ ಸಯ್ಯಿದ್ ಇಲ್ಯಾಸ್ ಸಖಾಫಿ ಅಲ್ ಹೈದ್ರೂಸಿ ತಂಙಳರವರ ಪ್ರಾರ್ಥನೆ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. SYS ಕೊಡಗು ಜಿಲ್ಲಾ ಕಾರ್ಯದರ್ಶಿ ವಿ.ಪಿ ಮೊಯ್ದೀನ್ ಪೊನ್ನತ್ ಮೊಟ್ಟೆ ಸ್ವಾಗತ ಭಾಷಣ ಮಾಡಿದರು. ಸಯ್ಯಿದ್ ಇಲ್ಯಾಸ್ ತಂಙಳ್ ಎಮ್ಮೆಮ್ಮಾಡು ಭಾಷಣ ಮಾಡಿದರು. SYS ಕರ್ನಾಟಕ ರಾಜ್ಯ ಮೀಡಿಯಾ ವಿಂಗ್ ಕಾರ್ಯದರ್ಶಿ ಎಂ.ವೈ ಅಬ್ದುಲ್ ಹಫೀಳ್ ಸಅದಿ ಪ್ರಾಸ್ತಾವಿಕ ಭಾಷಣ ಮಾಡಿದರು. SYS ಬೆಂಗಳೂರು ಸಾಂತ್ವನ ವಿಭಾಗ ಕಾರ್ಯದರ್ಶಿ ಹಂಝ ಸಖಾಫಿ ಬೆಂಗಳೂರು, SJM ಕೊಡಗು ಜಿಲ್ಲಾಧ್ಯಕ್ಷರಾದ ಮುಸ್ತಫಾ ಸಖಾಫಿ, SJM ಸೋಮವಾರಪೇಟೆ ರೇಂಜ್ ಅಧ್ಯಕ್ಷರಾದ ಅಬೂಬಕರ್ ಮದನಿ ಅಭಿನಂದನಾ ಭಾಷಣ ಮಾಡಿದರು. SYS ಕೊಡಗು ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ಲಾ ಸಖಾಫಿ ಕೊಳಕೇರಿ ಅಧ್ಯಕ್ಷತೆ ವಹಿಸಿದ್ದರು.
ಎಸ್ ವೈ ಎಸ್ ಸ್ಥಳೀಯ ನಾಯಕರಾದ ಸೈದು ಹಾಜಿ, ಕರ್ನಾಟಕ ಮುಸ್ಲಿಂ ಜಮಾಅತ್ ಮಡಿಕೇರಿ ತಾಲೂಕು ಅಧ್ಯಕ್ಷರಾದ ಅಬೂಬಕರ್ ಸಖಾಫಿ , ಎಸ್ ಎಸ್ ಎಫ್ ರಾಜ್ಯ ನಾಯಕರಾದ ಶರೀಫ್ ಹೊಸತೋಟ, ಎಸ್ ವೈ ಎಸ್ ಸೋಮವಾರಪೇಟೆ ಸೆಂಟರ್ ಅಧ್ಯಕ್ಷರಾದ ಸಮದ್ ನಿಝಾಮಿ ಕಲ್ಕಂದೂರು, ಸ್ಥಳೀಯ ಖತೀಬರಾದ ಆಬೀದ್ ಝುಹರಿ ಮುಂತಾದವರು ಹಾಜರಿದ್ದರು. SYS SSF SJM KMJ KSWA (Kodagu Sunni Welfare Association) SAUDI ARABIA ನೇತಾರರು ಕಾರ್ಯಕರ್ತರು ಹಾಜರಿದ್ದರು.
- ವರದಿ : ಶಿಬಿಲಿ ಕಲ್ಕಂದೂರು





No comments
Post a Comment