ಅಮ್ಮತ್ತಿ (TIMES OF COORG) :- INTUC ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಪಾಂಡ ಮುದ್ದಪ್ಪ ಹಾಗು ಕಾಂಗ್ರೆಸ್ ಮುಕಂಡರಾದ ನಾಪಾಂಡ ಮುತ್ತಪ್ಪ ಇವರ ಸಹಕಾರದೊಂದಿಗೆ NSUI ಜಿಲ್ಲಾ ಅಧ್ಯಕ್ಷರು ತ್ರಿಣೇಶ್ ಇವರ ಅಧ್ಯ್ಷತೆಯಲ್ಲಿ ಕರ್ನಾಟಕ ರಾಜ್ಯ ಕೌನ್ಸಿಲರ್ ಆದ ರಾಜಿಕ್ ಸುಂಟಿಕೊಪ್ಪ ಅವರ ನೇತೃತ್ವದಲ್ಲಿ ಮಾಸ್ಕ್ ವಿತರಣಾ ಕಾರ್ಯ ನಡೆಯಿತು. ಚೆಟ್ಟಲ್ಲಿ ಪೊಲೀಸ್ ಠಾಣೆ,ಸಿದ್ದಾಪುರ ಪೊಲೀಸ್ ಠಾಣೆ, ಪಾಲಿಬೆಟ್ಟ ಪೊಲೀಸ್ ಠಾಣೆ, ಗೋಣಿಕೊಪ್ಪ ಪೊಲೀಸ್ ಠಾಣೆ, ಪೊನ್ನಂಪೇಟೆ ಪೊಲೀಸ್ ಠಾಣೆ, ಶ್ರೀಮಂಗಲ ಪೊಲೀಸ್ ಠಾಣೆ, ಹುದಿಕೇರಿ ಪೊಲೀಸ್ ಠಾಣೆ, ಕುಟ್ಟ ಪೊಲೀಸ್ ಠಾಣೆ,ವಿರಾಜಪೇಟೆ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೆಲಸ ನಿರ್ವಹಿಸುವ ಅರಕ್ಷಕ ಉಪನಿರ್ದೇಶಕರು , ವೃತ ನಿರ್ದೇಶಕರು ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬರುವಂತಹ ಎಲ್ಲಾ ಪೊಲೀಸ್ ಠಾಣೆಗಳಿಗೂ ಮಾಸ್ಕ್ಗಳನ್ನು ವಿತರಿಸಲಾಯಿತು.