ಮಡಿಕೇರಿ (Times Of Coorg):- ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ 2 ಲಕ್ಷ ರೂ.ಗಳ ಚೆಕ್‍ನ್ನು ಶಾಸಕರಾದ ಕೆ.ಜಿ ಬೋಪಯ್ಯ ಅವರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಅಂಬಿ ಕಾರ್ಯಪ್ಪ ಅವರು ಸೋಮವಾರ ಹಸ್ತಾಂತರಿಸಿದರು.
ನಗರದ ಶಾಸಕರ ಕಚೇರಿಯಲ್ಲಿ ಚೆಕ್‍ನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷರಾದ ಕಾಂಗೀರ ಸತೀಶ್, ನಿರ್ದೇಶಕರಾದ ಬೆಪ್ಪುರನ ಮೇದಪ್ಪ, ಜಯ ನಂಜಪ್ಪ, ಮುಂಡಂಡ ಕುಟ್ಟಪ್ಪ, ಡಿ.ಎನ್.ಅನಿಲ್ ಕುಮಾರ್, ಕಾರ್ಯದರ್ಶಿ ಸಂದೇಶ್, ಲೆಕ್ಕ ಅಧೀಕ್ಷಕರಾದ ಚೆಲುವರಾಜ್, ಗಾಳಿಬೀಡು ಗ್ರಾಮ ಅಧ್ಯಕ್ಷರಾದ ಸುಭಾಷ್ ಸೋಮಯ್ಯ ಇತರರು ಇದ್ದರು.
No comments
Post a Comment