ದುಬಾರೆಯಲ್ಲಿ ಕೋವಿಡ್-19 ಜನಜಾಗೃತಿ

No comments
ಸಿದ್ದಾಪುರ (Times Of Coorg) : ದುಬಾರಿ ಆನೆ ಶಿಬಿರದ ಸಿಬ್ಬಂದಿಗಳಿಗೆ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಲಾಯಿತು. ಹಿರಿಯ ಪುರುಷ ಆರೋಗ್ಯ ಸಹಾಯಕ ಸುದರ್ಶನ್ ರವರು  ಇಲ್ಲಿನ ಸಿಬ್ಬಂದಿಗಳಿಗೆ ಕೊರೊನಾ ರೋಗ ಹರಡದಂತೆ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಿದ ಅವರು ಇಲ್ಲಿನ ಸಿಬ್ಬಂದಿ ಗಳು ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ  ಸಂಚರಿಸವಾಗ ಅಂತರ ಕಾಯ್ದುಕೊಂಡು ನಿಲ್ಲುವುದು,ಕೈಗಳನ್ನು ಚೆನ್ನಾಗಿ ತೊಳೆಯುವಂತೆ ಸೂಚಿಸಲಾಯಿತು.

ಸಾರ್ವಜನಿಕವಾಗಿ ಸಂಚರಿಸುವಾಗ ಮಾಸ್ಕ್  ಧರಿಸುವಂತೆ,ಕೆಮ್ಮುವಾಗ, ಸೀನುವಾಗ,ಕರವಸ್ತ್ರದಿಂದ
ಬಾಯಿ, ಮುಗನ್ನು ಮುಚ್ಚಿಕೊಳ್ಳುವಂತೆ ಕರೆನೀಡಿದರು
ಈ ಸಂದರ್ಭದಲ್ಲಿ ಇಲ್ಲಿನ ಸಿಬ್ಬಂದಿಗಳನ್ನು ಥರ್ಮಲ್ ಸ್ಕೆನರ್ ಮುಖಾಂತರ ಪರಿಶೀಲಿಸಿಸಲಾಯಿತು
ಕಾರ್ಯಕ್ರಮದಲ್ಲಿ  ಅರೋಗ್ಯ ಸಹಾಯಕ ಸುದರ್ಶನ್, ಕಿರಿಯ ಆರೋಗ್ಯ ಸಹಾಯಕಿ ಅನಿತಾ ಕುಮಾರಿ ,ಶೋಭ, ಆಶಕಾರ್ಯಕರ್ತೆಯರಾದ ಪದ್ಮಿನಿ, ರೂಪ ,ಅಂಗನವಾಡಿ ಕಾರ್ಯಕರ್ತೆ ಯರಾದ ಶಹನ,ತಂಗಮಣಿ ದುಬಾರೆ ಹಾಡಿಯ ನಿವಾಸಿಗಳು ಹಾಜರಿದ್ದರು.

No comments

Post a Comment