ಜಿಂಕೆ ಬೇಟೆಯಾಡಿ ಮಾಂಸ ಮಾರುತ್ತಿದ್ದ ಇಬ್ಬರ ಬಂಧನ

No comments
ವಿರಾಜಪೇಟೆ (Times Of Coorg) : ವಿರಾಜಪೇಟೆ ತಾಲೂಕು ಕರಡಿಗೋಡು ಗ್ರಾಮದಲ್ಲಿ ಜಿಂಕೆಯನ್ನು ಬೇಟೆಯಾಡಿ ಮಾಂಸ ಮಾಡಿ,ವ್ಯಾಪಾರ   ಮಾಡುತ್ತಿದ್ದ  ಆರೋಪಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ಅರಣ್ಯ ವಿಭಾಗದ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.  ಕರಡಿಗೋಡು ಗ್ರಾಮದ ಹೊಸಗದ್ದೆ ನಿವಾಸಿ ರಾಜೇಶ್  ಬೇಟೆಯಾಡಿದ ಜಿಂಕೆ ಮಾಂಸವನ್ನು  ಹರೀಶ್ ರವರ ಮನೆಯಲ್ಲಿ  ದಾಸ್ತಾನು ಮಾಡಿರುವುದಾಗಿ  ಬಂದ ಖಚಿತ ಮಾಹಿತಿ ಮೇರೆಗೆ ವಿರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ರವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ರೋಶಿಣಿ ರವರ ತಂಡ ಕಾರ್ಯಚರಣೆ  ನಡೆಸಿ  ಹಸಿ ಮಾಂಸ,ಬೇಯಿಸಿದ ಮಾಂಸ ಹಾಗೂ ಜಿಂಕೆಯ ಕಾಲುಗಳನ್ನು ಹಾಗೂ ಬೈಕು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಗೂ ಇಬ್ಬರೂ  ಅರೋಪಿಗಳಾದ  ಕರಡಿ ಗೋಡು ಗ್ರಾಮದ   ಹರೀಶ್  ಪಿ.ಕೆ (48)ಮತ್ತು ಮಣಿ (56)ನನ್ನು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿರುತ್ತಾರೆ. ಕಾರ್ಯಾಚರಣೆಯಲ್ಲಿ ವಿರಾಜಪೇಟೆ ಅರಣ್ಯ ವಲಯದ  ವಲಯ ಅರಣ್ಯಾಧಿಕಾರಿ ದೀಲಿಪ್ ಕುಮಾರ್ ಅಮ್ಮತ್ತಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಶಿವಕುಮಾರ್, ಸಚಿನ್, ಅಕ್ಕಮ್ಮ ರಕ್ಷಕ ಅರುಣ್ ಹಾಗೂ ಚಾಲಕ   ಅಚ್ಚಯ್ಯ, ಆರ್,ಆರ್, ಟಿ ತಂಡದ   ದಿಲೀಪ, ವಿನೋದ,ರಾಚ,ಮುರುಗ,ಮಂಜು,,ಆದರ್ಶ, ವಿನೋತ್. ಪಾಲ್ಗೊಂಡಿದ್ದರು.

No comments

Post a Comment