ಸೋಮವಾರಪೇಟೆ(TIMES OF COORG):-ಕೋರೋನಾ ವೈರಸ್ ಹಿನ್ನೆಲೆ ಲಾಕ್ ಡೌನ್ ಆಗಿರುವ ಪ್ರಸ್ತುತ ಸಂದರ್ಭದಲ್ಲಿ ತುರ್ತು ಆರೋಗ್ಯ ಸಂಬಂಧಿತ ಸೇವೆಗಳನ್ನು ಪಡೆಯುವ ಮಂದಿಯ ನೆರವಿಗೆ ಕರ್ನಾಟಕ ರಕ್ಷಣಾ ವೇದಿಕೆ ಧಾವಿಸಿದ್ದು ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯ 10 ಕಿ.ಮೀ ಅಂತರದೊಳಗೆ ಉಚಿತ ವಾಹನ ಸೌಲಭ್ಯ ಒದಗಿಸಿದೆ.
ಪಟ್ಟಣದಲ್ಲಿರುವ ಆಸ್ಪತ್ರೆಗೆ ಆಗಮಿಸಲು ಮತ್ತು ಆಸ್ಪತ್ರೆಯಿಂದ ವಾಪಸ್ ಮನೆಗೆ ಹೋಗಲು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಎಂ.ದೀಪಕ್ ಅವರ ವಾಹನದ ಸೌಲಭ್ಯ ಒದಗಿಸಿದ್ದು, ಅಗತ್ಯವಿರುವ ಮಂದಿ ಈ ಸೌಲಭ್ಯವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಕೆ.ಎನ್.ದೀಪಕ್ ರವರು ತಮ್ಮಲ್ಲಿರುವ ಎರಡು ಬಾಡಿಗೆ ವಾಹನಗಳನ್ನು ಈ ಸೇವೆಗೆ ಉಚಿತವಾಗಿ ನೀಡಿದ್ದಾರೆ, ಕೆ.ಎ.19 ಡಿ 4759 ಸಂಖ್ಯೆಯ ಟವೇರಾ ಹಾಗೂ ಕೆ.ಎ 01 ಸಿ 2287 ಸಂಖ್ಯೆಯ ಇನ್ನೊಂದು ಕಾರನ್ನು ಉಚಿತ ಸೇವೆಗೆ ಒದಗಿಸಿದ್ದಾರೆ. ಸೋಮವಾರಪೇಟೆ ಪಟ್ಟಣದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಬಡವರು, ಗರ್ಭಿಣಿಯರು, ಮಕ್ಕಳು, ವಯೋವೃದ್ಧರಿಗೆ ತುರ್ತು ಅವಶ್ಯಕತೆ ಇದ್ದಲ್ಲಿ ಈ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.
ಉಚಿತ ವಾಹನ ಸೇವೆ ಬಳಸಿಕೊಳ್ಳುವವರು ಮೊಬೈಲ್ ನಂಬರ್,9972707718, 7259275219, 8762818143 ಸಂಖ್ಯೆಗಳಿಗೆ ಕರೆಮಾಡಿ ಮಾಹಿತಿ ನೀಡಿದಲ್ಲಿ ವಾಹನಗಳು ತಮ್ಮ ಬಳಿ ಆಗಮಿಸಲಿವೆ, 10 ಕಿ.ಮಿ ವ್ಯಾಪ್ತಿಯಲ್ಲಿ ಈ ಸೇವೆಯನ್ನು ನೀಡಲಾಗುತ್ತಿದ್ದು, ಅಗತ್ಯವಿರುವವರು ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ಕರವೇ ತಾಲೂಕು ಅಧ್ಯಕ್ಷ ದೀಪಕ್ ತಿಳಿಸಿದ್ದಾರೆ.
No comments
Post a Comment