ಕಾವೇರಿ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಕೋವಿಡ್-19 ಗೆ ಸಂಬಂದಿಸಿದಂತೆ ಬುಧವಾರ ಬೆಳಗ್ಗೆ 11:30. ರಿಂದ ಮದ್ಯಾಹ್ನ1:30 ವರೆಗೆ zoom ಅಪ್ ಮೂಲಕ ಆನ್ ಲೈನ್ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಾಗಾರವನ್ನು ಕರ್ನಾಟಕ ರಾಜ್ಯ ಎನ್.ಎಸ್.ಎಸ್. ಅಧಿಕಾರಿ ಹಾಗೂ ಕರ್ನಾಟಕ ಸರ್ಕಾರದ ಯುವಜನ ಸೇವಾ ಮತ್ತು ಕೀಡಾ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕೊಡಗಿನಲ್ಲಿ ಕೋವಿಡ್-19 ಮಹಾಮಾರಿ ಕಾಯಿಲೆ ಕಡಿಮೆಯಾಗಿದೆ ಆದರೆ ಜನರಲ್ಲಿ ಜಾಗೃತಿ ಮೂಡಿಸಿ ಎಚ್ಚರಿಕೆಯಿಂದ ಇರುವಂತೆ ಜನರಿಗೆ ತಿಳಸಬೇಕಾಗಿದೆ. ತಮ್ಮ ತಮ್ಮ ಬಳಗದಲ್ಲಿ ಜಾಗೃತಿ ಮೂಡಿಸುದರೊಂದಿಗೆ ಅನ್ ಲೈನ್ ಮೂಲಕ ಎನ್.ಎಸ್.ಎಸ್ ಸ್ವಯಂ ಸೇವಕ/ಸೇವಕಿಯರು ಜಾಗೃತಿ ಮಾಡಬೇಕು ಎಂದು ತಿಳಸಿದರು.
ರಾಜ್ಯ ಎನ್.ಎಸ್.ಎಸ್ ನ ಅನುಷ್ಠಾನಾಧಿಕಾರಿಗಳಾದ ಡಾ. ಪೂರ್ಣಿಮಾ ಜೋಗಿ ಕೊರೋನಾ ಕಾಯಿಲೆಗೆ ತೆಗೆದುಕೊಳ್ಳಬೇಕಾದ ಮುನೆಚ್ಚರಿಕೆ ಬಗ್ಗೆ ಪಿ.ಪಿ.ಟಿ ಮೂಲಕ ವಿವರಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್ ಸಂಯೋನಾಧಿಕಾರಿಗಳು ದಿಕ್ಸೂಚಿ ಭಾಷಣ ಮಾಡಿ ಮಾತನಾಡಿ ಕೊರೋನಾ ಎಲ್ಲಾ ಕಡೆಗೆ ಹರಡದಂತೆ ಸ್ವಯಂ ಜಾಗೃತಿ ಅಗತ್ಯ ನಾವು ನಮ್ಮವರು ಎನ್ನುವುದಕ್ಕಿಂದ ಎಲ್ಲರ ಅರೋಗ್ಯ ರಕ್ಷಣೆ ಅವಶ್ಯಕ. ಇದಕ್ಕೆ ಎಲ್ಲಾರು ಜಾಗೃತರಾಗಬೇಕು ಎಂದರು.ಅಲ್ಲದೆ ಮಂಗಳೂರು ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಯೋಜನೆ ಉತ್ತಮ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಏಕಲವ್ಯ ಪ್ರಶಸ್ತಿ ವಿಜೇತರಾದ ಅರ್ಜುನ್ ದೇವಯ್ಯರವರು ಮಾತನಾಡಿ ಜಾಗತಿಕ ಮಟ್ಟದಲ್ಲಿ ಕೋರೋನಾ ವೈರಾಣು ಹೇಗೆ ಹರಡುತ್ತದೆ, ಜನ ಸಾಮಾನ್ಯರು ಯಾವ ರೀತಿಯಾಗಿ ಅರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು, ಕೊರೋನಾ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು, 21 ದಿನದ ಲಾಕ್ ಡೌನ್ ನಮಗೆ ಸಮಸ್ಯೆ ಎಂದು ಭಾವಿಸಭಾರದು ನಮ್ಮ ಮುಂದೆ ಅನೇಕ ಸವಾಲುಗಳಿವೆ, ಕೋರೋನಾ ಹೋಗಲಾಡಿಸುವಲ್ಲಿ ಯುವಜನರು, ವಿದ್ಯಾರ್ಥಿಗಳು ಏನು ಮಾಡಬೇಕು ಏನನ್ನೂ ಮಾಡಬಾರದು ಎಂಬ ವಿಷಯಗಳನ್ನು ತಿಳಿಸದಲ್ಲದೆ ಮುಕ್ತ ಸಂವಾದವನ್ನು ನಡೆಸಿದರು.
ಯೆನೆಪೋಯ ವಿಶ್ವವಿದ್ಯಾಲಯದ ವೈದ್ಯಾಧಿಕಾರಿ ಡಾ.ಅಶ್ವಿನಿ ಶೆಟ್ಟಿ ವಿದ್ಯಾರ್ಥಿಗಳಲ್ಲಿ ಕೋರೋನಾಕ್ಕೆ ಸಂಬಂಧಿಸಿದ ಅನೇಕ ಅನುಮಾನಗಳನ್ನು ದೂರಮಾಡಿ ಕೊರೋನಾ ತಡೆಗಟ್ಟಲು ಎಲ್ಲರೂ ಸಹಕರಿಸಬೇಕೆಂದು ತಿಳಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾವೇರಿ ವಿದ್ಯಾ ಸಂಸ್ಥೆ ಗೌರವ ಕಾರ್ಯದರ್ಶಿಗಳಾದ ಕೆ.ಜಿ ಉತ್ತಪ್ಪರವರು ಮಾತನಾಡಿ ಕಾವೇರಿ ಕಾಲೇಜು ಎನ್.ಎಸ್.ಎಸ್ ವಿದ್ಯಾರ್ಥಿಗಳು ಒಂದಲಾ ಒಂದು ಸೇವೆಯಲ್ಲಿ ನಿರತರಾಗಿದ್ದು ಉತ್ತಮ ಸೇವೆ ಮಾಡುತ್ತಿದ್ದಾರೆ. ಕೊರೋನಾ ಕಾಯಿಲೆಗೆ ಸಂಬಂಧಿಸಿದಂತೆ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಮತ್ತಷ್ಟು ತಾವು ಜಾಗೃತರಾಗಿದ್ದು ಇತರರಿಗೂ ಜಾಗೃತಿ ಮೂಡಿಸುವ ಅಗತ್ಯವಿದೆ. ನಿಮ್ಮ ಕೈಲಾದಷ್ಟು ಜನರಿಗೆ ಅರಿವು ಮೂಡಿಸಿ ಯಾರು ಮನೆಯಿಂದ ಹೋರಬರದಂತೆ ನೊಡಿಕೊಳ್ಳಿ ಎಂದು ತಿಳಸಿದರು. ಯೋಜನಾಧಿಕಾರಿಗಳಾದ ವನಿತ್ ಕುಮಾರ್ ಎಂ.ಎನ್ ಮತ್ತು ರೀತಾ ಎನ್.ಪಿ ರವರು ಅಯೋಜಿಸಿದ್ದ ಈ ತರಬೇತಿಯಲ್ಲಿ ಡಾ.ಪೂವಮ್ಮ,ಪವಿತ್ರ ಸೇರಿದಂತೆ ಅನೇಕ ಅಧ್ಯಪಕರು,ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.ಇದೊಂದು ವಿನೂತನ ಪ್ರಯತ್ನವಾಗಿದ್ದು ಸುಮಾರು 100 ಜನ ಅನ್ ಲೈನ್ ನಲ್ಲಿ ತರಬೇತಿ ಪಡೆದರು.
Zoom ಅ್ಯಪ್ ಮೂಲಕ online ಲ್ಲಿ ತರಬೇತಿ ನೀಡಿದಕ್ಕೆ ಉತ್ತಮ ಸ್ಪಂದನೆ ದೊರಕಿದ್ದು ಅನೇಕ ಪ್ರಶ್ನೆಗಳಿಗೆ ಗಣ್ಯರಿಂದ ಉತ್ತರ ಸಿಕಿದಂತ್ತಾಗಿದೆ ಇದರಿಂದ ಜಾಗೃತಿ ಮನೆಯಿಂದಲೇ ಮೂಡಿಸಲು ಸಾಧ್ಯ . - NSS officer
No comments
Post a Comment