ಸಿದ್ದಾಪುರ (Times Of Coorg) : ಬಿ.ಬಿ.ಟಿ.ಸಿ ಮೈಲಾಪುರ ತೋಟಕಾರ್ಮಿಕರಲ್ಲಿ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಲಾಯಿತು. ಹಿರಿಯ ಪುರುಷ ಆರೋಗ್ಯ ಸಹಾಯಕ ಸುದರ್ಶನ್ ರವರು ಇಲ್ಲಿನ ಸಿಬ್ಬಂದಿಗಳಿಗೆ ಕೊರೊನಾ ರೋಗ ಹರಡದಂತೆ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಿದ ಅವರು ಇಲ್ಲಿನ ಸಿಬ್ಬಂದಿ ಗಳು ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ಸಂಚರಿಸವಾಗ ಅಂತರ ಕಾಯ್ದುಕೊಂಡು ನಿಲ್ಲುವುದು,ಕೈಗಳನ್ನು ಚೆನ್ನಾಗಿ ತೊಳೆಯುವಂತೆ ಸೂಚಿಸಲಾಯಿತು.
ಸಾರ್ವಜನಿಕವಾಗಿ ಸಂಚರಿಸುವಾಗ ಮಾಸ್ಕ್ ಧರಿಸುವಂತೆ,ಕೆಮ್ಮುವಾಗ, ಸೀನುವಾಗ,ಕರವಸ್ತ್ರದಿಂದ ಬಾಯಿ, ಮುಗನ್ನು ಮುಚ್ಚಿಕೊಳ್ಳುವಂತೆ ಕರೆನೀಡಿದರು
ಈ ಸಂದರ್ಭದಲ್ಲಿ ಇಲ್ಲಿನ ಸಿಬ್ಬಂದಿಗಳನ್ನು ಥರ್ಮಲ್ ಸ್ಕೆನರ್ ಮುಖಾಂತರ ಪರಿಶೀಲಿಸಿಸಲಾಯಿತು
ಕಾರ್ಯಕ್ರಮದಲ್ಲಿ ಅರೋಗ್ಯ ಸಹಾಯಕ ಸುದರ್ಶನ್, ಕಿರಿಯ ಆರೋಗ್ಯ ಸಹಾಯಕಿ ವಾರಿಜ, ಆಶಕಾರ್ಯಕರ್ತೆಯರು, ಹಾಗು ಮ್ಯಾನೇಜರ್ ವಿಕ್ಕಿ ಕಾರ್ಮಿಕರು ತಮ್ಮ ಕುಟುಂಬದ ಸದಸ್ಯರುಗಳನ್ನೊಳಗೊಂಡು ಹಾಜರಿದ್ದರು.
No comments
Post a Comment