ಕೊಡ್ಲಿಪೇಟೆ ವಿದ್ಯಾಸಂಸ್ಥೆ ವತಿಯಿಂದ ಉಚಿತ ಅನ್ನ ದಾಸೋಹ ಕಾರ್ಯಕ್ರಮ

No comments
ವರದಿ : ಹನೀಫ್ ಕೊಡ್ಲಿಪೇಟೆ
ಕೊಡ್ಲಿಪೇಟೆ (Times Of Coorg) :  ಕೊಡ್ಲಿಪೇಟೆ ವಿದ್ಯಾ ಸಂಸ್ಥೆ ಯಿಂದ ಮಧ್ಯಾಹ್ನದ ಉಚಿತ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಸಂಸ್ಥೆಯ ಅದ್ಯಕ್ಷರು ಹಿರಿಯ ವಕೀಲರಾದ ಹೆಚ್.ಎಸ್.ಚಂದ್ರಮೌಳಿ ರವರು ಚಾಲನೆ ನೀಡಿ, ಲಾಕ್‌ಡೌನ್ ನಿಂದ ವಿನಾಯಿತಿರುವ ಸೋಮವಾರ. ಬುಧವಾರ .ಶುಕ್ರವಾರ. ದಿನಗಳಲ್ಲೂ ಉಚಿತವಾಗಿ ದಾಸೋಹ ನೀಡಲಾಗುವುದು ,
ಈ ಸಂದ್ವಿಗ್ನ ಪರಿಸ್ಥಿತಿಯಲ್ಲಿ ಜನ ಸಾಮನ್ಯರು ಸಂಕಷ್ಟದಲ್ಲಿರುವಾಗ ಇರುವವನು ಇಲ್ಲದಿರುವವನ ನೆರವಿಗೆ ದಾವಿಸಬೇಕಾಗಿದ್ದು ಆದ್ಯ ಕರ್ತವ್ಯ .
ಈ ನಿಟ್ಟಿನಲ್ಲಿ ನಾವು ವಿವಿಧ ಸಮಾಜದ ಮುಖಂಡರುಗಳ ನೇತ್ರತ್ವದಲ್ಲಿ ಲಾಕ್‌ಡೌನ್ ಮುಗಿಯುವವರೆಗೂ ಮದ್ಯಾಹ್ನ ದಾಸೋಹ ಮುಂದುವರಿಯಲಿದೆ ಎಂದರು.
 
ಕಾರ್ಯಕ್ರಮದ ಆರಂಭದಲ್ಲಿ ಕರೋನಾ ವಿರುದ್ಧದ  ಹೋರಾಟದಲ್ಲಿ ತಮ್ಮ ಜೀವಗಳನ್ನು ಪಣಕ್ಕಿಟ್ಟು ದುಡಿಯುತ್ತಿರುವಂಥಹ ವ್ಯೆದ್ಯರುಗಳು, ಪೋಲಿಸರು, 
ಆರೋಗ್ಯ ಕಾರ್ಯಕರ್ತರಿಗೆ ಸೆಲ್ಯೂಟ್ ಮಾಡುವ ಮೂಲಕ ಧನ್ಯವಾದ ಸಲ್ಲಿಸಲಾಯಿತು.

ಕೊಡ್ಲಿಪೇಟೆ ಯ ಬಸವೇಶ್ವರ ಕಲ್ಯಾಣ ಮಂಟಪ,  ಜಾಮೀಯಾ ಮಸೀದಿ ಬೀದಿ, ದೊಡ್ಡಕೊಡ್ಲಿ ಗ್ರಾಮ, 
ಹೊಸ ಮುನ್ಸಿಪಾಲ್ಟಿ, ಗಣಪತಿ ದೇವಸ್ಥಾನದ ಸಮೀಪ, ವಿದ್ಯಾ ಸಂಸ್ಥೆಯ ಸಮೀಪ ಒಟ್ಟು ಐದು ಸ್ಥಳಗಳಲ್ಲಿ ಕೌಂಟರ್ ನಿರ್ಮಿಸಿ ವಿತರಣೆ ಮಾಡಲಾಯಿತು.
ಎಲ್ಲಾ ದಿನಗಳಲ್ಲೂ ಇದೇ ಸ್ಥಳಗಳಲ್ಲೆ ವಿತರಣೆ ನಡೆಯಲಿದೆ ಎಂದು ಸಂಸ್ಥೆಯ ಖಜಾಂಜಿ ಡಾ.ಉದಯ್ ಕುಮಾರ್ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಕುಶಾಲನಗರ ಪೊಲೀಸ್ ಉಪಾದಿಕ್ಷಕರಾದ (DYSP) ಶ್ಯೆಲೆಂದ್ರಕುಮಾರ್ , ಕುಶಾಲನಗರ ವೃತ್ತ ನಿರಿಕ್ಷಕರಾದ ಮಹೇಶ್, ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ನಂಜುಡೆಗೌಡ, ಶನಿವಾರಸಂತೆ ಠಾಣೆಯ ಉಪ ನಿರೀಕ್ಷಕರಾದ ಕ್ರಷ್ಣನಾಯಕ್, ವಿದ್ಯಾಸಂಸ್ಥೆಯ 
ಎಸ್.ಎಸ್.ನಾಗರಾಜ್, ಶಂಬುಲಿಂಗಪ್ಪ, ಹರೀಶ್, ಬಿ.ಕೆ‌.ಯತೀಶ್, ರಂಜನ್, ಜಗದೀಶ್ ಬಾಬು, ಅಬ್ದುಲ್ ರಬ್ಬ್, ಕೊಡ್ಲಿಪೇಟೆ ಗ್ರಾಮ ಪಂಚಾಯತಿ ಸದಸ್ಯರಾದ ಕೆ.ಆರ್.ಚಂದ್ರಶೇಖರ್, ಊರಿನ ಪ್ರಮುಖರಾದ 
ಔರಂಗ್ ಜೇಬ್‌, ಸುಬ್ರಮಣ್ಯ, ವಹಾಬ್, ಹನೀಪ್ ಬ್ಯಾಡಗೊಟ್ಟ, ಎಸ್.ಎಸ್.ಮಹೇಶ್, ಕೆ.ಪಿ.ಮಂಜುನಾಥ್, ಸಿದ್ದೇಶ್, ನಿವೀನ್, ಈಶ್ವರ್, ಮಮತ ಸತೀಶ್, ಕವಿತಾ ಟೀಚರ್, 
ಸೇರಿದಂತೆ ವಿದ್ಯಾಸಂಸ್ಥೆಯ ಶಿಕ್ಷಕರುಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

No comments

Post a Comment