ವಿಧಾನ ಸಭಾ ಅಧ್ಯಕ್ಷರಾಗಿ ಹನೀಫ್ ಕೊಂಡಂಗೇರಿ▪ಕಾರ್ಯದರ್ಶಿ ಯಾಗಿ ರೋಶನ್ ಗೋಣಿಕೊಪ್ಪ
ವಿರಾಜಪೇಟೆ (web@timesofcoorg) ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ 2021-2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಕೊಂಡಂಗೇರಿಯಲ್ಲಿ ನಡೆಯಿತು.
ವಿಧಾನಸಭಾ ಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಹನೀಫ್ ಕೊಂಡಂಗೇರಿ, ಉಪಾಧ್ಯಕ್ಷರಾಗಿ ಉಸ್ಮಾನ್ ಅಯ್ಯಂಗೇರಿ, ಕಾರ್ಯದರ್ಶಿಯಾಗಿ ರೋಶನ್ ಗೋಣಿಕೊಪ್ಪ, ಜೊತೆ ಕಾರ್ಯದರ್ಶಿಯಾಗಿ ಮುಸ್ತಫಾ ಸಿದ್ದಾಪುರ, ಕೋಶಾಧಿಕಾರಿಯಾಗಿ ಶರೀಫ್ ವಿರಾಜಪೇಟೆ, ಸಮಿತಿ ಸದಸ್ಯರಾಗಿ ಅಶ್ರಫ್ ಕೊಳಕ್ಕೇರಿ ಹಾಗೂ ಲತೀಫ್ ಕೊಂಡಂಗೇರಿ, ಆಯ್ಕೆಯಾದರು.
SDPI ಕೊಡಗು ಜಿಲ್ಲಾಧ್ಯಕ್ಷರಾದ ಮನ್ಸೂರ್ ಅಲಿ, ಕಾರ್ಯದರ್ಶಿ ಗಳಾದ ಅಬ್ದುಲ್ ಅಡ್ಕಾರ್, ಮೊಹಮ್ಮದ್ ಶಫೀ ಕುಶಾಲನಗರ ಆಂತರಿಕ ಚುನಾವಣಾ ಪ್ರಕ್ರಿಯಯನ್ನು ನಡೆಸಿಕೊಟ್ಟು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ನೂತನ ಸಮಿತಿಯ ಅಧ್ಯಕ್ಷರಾದ ಹನೀಫ್ ಕೊಂಡಂಗೇರಿ ಮಾತನಾಡಿ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಅಲ್ಪಸಂಖ್ಯಾತರ ಹಿಂದುಳಿದ ವರ್ಗಗಳ ನ್ಯಾಯದ ದ್ವನಿಯಾಗಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಸಮಿತಿ ವ್ಯಾಪ್ತಿಯ ಗ್ರಾಮ ಸಮಿತಿ ಮತ್ತು ಬೂತ್ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
No comments
Post a Comment