ಕೊಡಗು ಜಿಲ್ಲೆಯಲ್ಲಿ 6 ಹೊಸ ಕೋವಿಡ್ ಪ್ರಕರಣಗಳು : ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆ
ಮಡಿಕೇರಿ (Times Of Coorg) : ಕೊಡಗು ಜಿಲ್ಲೆಯಲ್ಲಿ ಇಂದು 6 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ವಿರಾಜಪೇಟೆ ತಾಲೂಕು ಹುಂಡಿ ಗ್ರಾಮ ಹಾಗೂ ಸೋಮವಾರಪೇಟೆ ತಾಲೂಕು ನೆಲ್ಯಹುದಿಕೇರಿಯಲ್ಲಿ ವಾಸ್ತವ್ಯ ಹೂಡಿದ್ದ ದಂಪತಿ ಹಾಗೂ ಎರಡು ವರ್ಷದ ಮಗು, ಪುಣೆಯಿಂದ ಮರಳಿದ್ದ 24 ವರ್ಷದ ಸೋಮವಾರಪೇಟೆ ತಾಲೂಕು ಶನಿವಾರಸಂತೆಯ ವ್ಯಕ್ತಿ, ಶಾರ್ಜಾದಿಂದ ಪ್ರಯಾಣ ಬೆಳೆಸಿದ್ದ ವಿರಾಜಪೇಟೆ ತಾಲೂಕು ಕೊಂಡಗೇರಿಯ 23ವರ್ಷದ ವ್ಯಕ್ತಿ, ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದ ಕುಶಾಲನಗರ ಸಮೀಪದ ಹುಲಸೆಯ 46 ವರ್ಷದ ವ್ಯಕ್ತಿ ಯಲ್ಲಿ ಸೋಂಕು ಧೃಡಪಟ್ಟಿದೆ. ಇವರೆಲ್ಲರೂ ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೊಸ 3 ಕಂಟೈನ್ಮೆಂಟ್ ಝೋನ್ (ನಿಯಂತ್ರಿತ ವಲಯ) ಸೇರ್ಪಡೆಗೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 18 ಕಂಟೈನ್ಮೆಂಟ್ ಝೋನ್ ಗಳಿವೆ. ಸದ್ಯ ಸಕ್ರಿಯ 33 ಕೋವಿಡ್ ಪ್ರಕರಣಗಳಿವೆ.
°°°°°°°°°°°°°°°°°°°°°°°°°°°°°°°°°°°°°°°°°°°°
✓ ಹೊರಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ
✓ ಸಾಮಾಜಿಕ ಅಂತರ ಕಾಪಾಡಿ
✓ ಜಿಲ್ಲಾಡಳಿತದ ನಿಯಮ ನಿರ್ದೇಶನಗಳನ್ನು ಪಾಲಿಸಿ

No comments
Post a Comment