ಮಡಿಕೇರಿ (Times Of Coorg) : ಇತ್ತಿಚಿಗೆ ಕೊರೋನಾ ಸೋಂಕು ಧೃಡಪಟ್ಟಿದ್ದ ಮಡಿಕೇರಿ ತಾಲೂಕಿನ ಬಿಟ್ಟಂಗಾಲದ 70 ಕೊರೋನಾ ಸೋಂಕಿತೆ ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿಸಿದ್ದು, ಕೊರೋನಾ ಸೋಂಕಿಗೆ ಪ್ರಥಮ ಸಾವಾಗಿದ್ದು, ಇವರಿಗೆ ಕಿಡ್ನಿ ಮುಂತಾದ ರೋಗಗಳಿತ್ತು ಎಂದು ಕಿಡಿಗೇಡಿಗಳು ಟೈಪ್ ಮಾಡಿದ್ದಾರೆ. ಕೊಡಗು ಜಿಲ್ಲಾಡಳಿತವು ಇದು ಸುಳ್ಳು ಸುದ್ದಿಯೆಂದು ಜಿಲ್ಲಾಧಿಕಾರಿಯವರ ಫೇಸ್ಬುಕ್ ಮುಖಪುಟದಲ್ಲಿ ತಿಳಿಸಿದೆ. ಇಂತಹ ಕಿಡಿಗೇಡಿಗಳ ವಿರುದ್ದ ಕ್ರಮಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.

No comments
Post a Comment