ಕೊಡಗಿನಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 26ಕ್ಕೆ ಏರಿಕೆ : ಜಿಲ್ಲೆಯಲ್ಲಿ 12 ಕಂಟೊನ್ಮೆಂಟ್ ಝೋನ್ ಗಳು
ಮಡಿಕೇರಿ (Times Of Coorg) : ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ಏರಿಕೆ ಕಂಡಿದ್ದು, ಇದುವರೆಗೆ 26 ಸೋಂಕು ಪ್ರಕರಣಗಳು ವರದಿಯಾಗಿದೆ. ಮಡಿಕೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದು, ಈವರೆಗೆ ವರದಿಯಾದ 23 ಪ್ರಕರಣಗಳಲ್ಲಿ ಕೋರೋನಾ ಸೋಂಕಿನ ಲಕ್ಷಣಗಳೇ ಇರಲ್ಲಿಲ್ಲ ಕೊಡಗು ಜಿಲ್ಲೆಯಲ್ಲಿ 3 ಗುಣಮುಖ ಪ್ರಕರಣಗಳೂ ಸೇರಿ 26 ಪ್ರಕರಣಗಳು ಪತ್ತೆಯಾಗಿದೆ. ಕೋವೀಡ್ ಆಸ್ಪತ್ರೆಯಲ್ಲಿ 23 ಮಂದಿ ದಾಖಲಾಗಿದ್ದಾರೆ.
ಆಶ್ವಿನಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ತಜ್ಞ, ಮೂವರು ವೈದ್ಯರು, ಎಲೆಕ್ಟ್ರಿಶಿಯನ್ ಸೇರಿದಂತೆ ಒಟ್ಟು 7 ಮಂದಿಗೆ ಸೋಂಕು ತಗುಲಿದೆ,ಸದ್ಯ ಅಶ್ವಿನಿ ಆಸ್ಪತ್ರೆಯನ್ನು ಸಾನಿಟೈಸ್ ಮಾಡಲಾಗಿದ್ದು, ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ ನೀಡಲಾಗಿದೆ ಅಶ್ವಿನಿ ಆಸ್ಪತ್ರೆಯಲ್ಲಿ ಸದ್ಯ 8 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಹೊಸ ಪ್ರಕರಣಗಳು : ಅಸ್ಸಾನಿಂದ ಮುಳ್ಳೂರು ಗ್ರಾಮಕ್ಕೆ ಬಂದಿದ್ದ ನಿವೃತ್ತ ಸೈನಿಕ, ಶಿರಂಗಾಲದ ಹಣ್ಣಿನ ವ್ಯಾಪಾರಿಯ ಸಂಪರ್ಕಕ್ಕೆ ಬಂದಿದ್ದ ಕಾರು ಮೆಕ್ಯಾನಿಕ್ ಮತ್ತು ಮತ್ತೊಬ್ಬ ವ್ಯಕ್ತಿ, ದೊಡ್ಡಳ್ಳಿ ಗ್ರಾಮದ ಮಹಿಳೆಯ ಪತಿ , ಪತಿಯ ಸಹೋದರ ಸೇರಿದಂತೆ ಬಿಟ್ಟಗಾಲದ ಹೊಂಸ್ಟೇಯ 70 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
ಕುಶಾಲನಗರದ ರಥಬೀದಿಯ ಮೆಡಿಕಲ್ ಶಾಪ್ ಒಂದರ ಮಾಲೀಕನ ಮಗನಿಗೆ ಸೋಂಕು ತಗುಲಿದ್ದು , ರಥಬೀಥಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಕೊಡಗಿನ ಸೀಲ್ ಡೌನ್ ಪ್ರದೇಶಗಳು :
ಶನಿವಾರಸಂತೆ ಸಮೀಪ ಶಿರಂಗಾಲ, ಮುಳ್ಳುರು, ತಾಳತ್ತಮನೆ, ಕಗ್ಗೋಡ್ಲು, ಕುಶಾಲನಗರ ರಥಬೀದಿ, ಬಳಗುಂದ, ಮಡಿಕೇರಿಯ ಮಾರಿಯಮ್ಮ ದೇವಸ್ಥಾನ ರಸ್ತೆ, ಒಂಕಾರೇಶ್ವರ ದೇವಸ್ಥಾನ ರಸ್ತೆ, ಮಂಗೇರಿರ ಮುತ್ತಣ್ಣ ಸರ್ಕಲ್, ಡೈರಿ ಫಾರಂ, ಪುಟಾಣಿ ನಗರ ಸೇರಿದಂತೆ 12 ಪ್ರದೇಶಗಳನ್ನು 28 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಇನ್ನೂ ಹಲವರ ಗಂಟಲು ದ್ರವ ಪರೀಕ್ಷೆಯ ವರದಿ ಬರಬೇಕಾಗಿದೆ ಲಾಕ್ ಡೌನ್ ಮಾಡುವುದು ಸರ್ಕಾರದ ನಿರ್ಧಾರವಾಗಿದೆ. ಸಾರ್ವಜನಿಕರು ಆದಷ್ಟು ಜಾಗೃತೆಯಿಂದ ಇರಬೆಕಾಗಿದೆ, ಅಗತ್ಯ ಕಾರ್ಯಗಳಿಗಲ್ಲದೆ ಹೊರ ಬರಬೇಡಿ, ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ ಜಿಲ್ಲಾಡಳಿದ ನಿರ್ದೇಶನಗಳನ್ನು ಪಾಲಿಸಿ ಎಂದು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ,.ಸುಮನ್ ಪನ್ನೇಕರ್, ಆರೋಗ್ಯಾಧಿಕಾರಿ ಡಾ.ಮೋಹನ್, ಡಾ.ಮಹೇಶ್ ಹಾಜರಿದ್ದರು.

No comments
Post a Comment