ಕುಶಾಲನಗರ (Times Of Coorg) : ಕೊಡಗು ಜಿಲ್ಲೆಯಕುಶಾಲನಗರದ ರಥಬೀದಿಯ ಮೆಡಿಕಲ್ ಶಾಪ್ ಮಾಲೀಕನ ಮಗನಿಗೆ ಸೋಂಕು ಧೃಡಪಟ್ಟು ,ಕೊವೀಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸದ್ಯ ರಥಬೀದಿಯನ್ನು 28 ದಿನಗಳ ಕಾಲ ಕಂಟೊನ್ಮೆಂಟ್ ಝೋನ್ ಎಂದು ಜಿಲ್ಲಾಡಳಿತ ಘೋಷಿಸಿದೆ. ಸೋಂಕಿತ ವ್ಯಕ್ತಿ ಬಿ.ಎಂ ರಸ್ತೆಯಲ್ಲಿರುವ ಬೇಕರಿಯೊಂದಕ್ಕೂ ಭೇಟಿ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.
ಕುಶಾಲನಗರದ ರಥಬೀದಿಯಲ್ಲಿ ಪ್ರತಿಯೊಂದು ಮನೆಯಿಂದ ಹೊರಬಾರದಂತೆ ಅಧಿಕಾರಿಗಳ ಎಚ್ಚರಿಕೆ ನೀಡಿದ್ದಾರೆ. ಮನೆಯಿಂದ ಹೊರಬಂದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.
" ಜನರು ಸದ್ಯವಾದಷ್ಟು ಜಾಗೃತರಾಗಿರಿ, ಅಗತ್ಯ ಕಾರ್ಯಗಳಿಗಲ್ಲದೆ ಮನೆಯಿಂದ ಹೊರಬರಬೇಡಿ, ಹೊರಬರುವಾಗ ಮಾಸ್ಕ್ ಧರಿಸಿರಿ ಇದು ಟೈಮ್ಸ್ ಆಫ್ ಕೂರ್ಗ್ ಕಾಳಜಿ ನಮ್ಮ ಸುಂದರ ಕೊಡಗಿಗಾಗಿ.. "
ವರದಿ ಮಾಹಿತಿ : ಶಂಸುದ್ದೀನ್ ಕುಶಾಲನಗರ


No comments
Post a Comment