ಕೊಡ್ಲಿಪೇಟೆ (TIMES OF COORG):- ಇಲ್ಲಿಯ ದೊಡ್ಡಕೊಡ್ಲಿ ಗ್ರಾಮದ ಯುವ ಸಮಾಜ ಸೇವಕ ವಸಂತ್ .ಡಿ.ಎನ್ ರವರು ಸ್ವತಃ ಹಣದಿಂದ ಬಡ ಕುಡುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಿದರು.
ಧರ್ಮಸ್ಥಳ ಸಂಘದಲ್ಲಿ ಹಣಕಾಸು ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಂತ್ ವಸಂತ್ ರವರಿಗೆ 20.000
ಸಾವಿರ ರೂಪಾಯಿ ಸಂಬಳವಿದೆ.
ಹೊರ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು..
ಈಗ ಎರಡು ತಿಂಗಳುಗಳಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸ ವಿಲ್ಲ
ಅನಾರೋಗ್ಯ ವಿರುವ ತಾಯಿ ಮತ್ತು ಪತ್ನಿ ಒಂದು ಮಗುವಿರುವ ಸಂಸಾರ ಮಾಡುತ್ತಿರುವ ವಸಂತ್
ಕುಟುಂಬಕ್ಕೆ ಇವರೊಬ್ಬರೆ ಆದಾರ ..
ಈಗಿದ್ದರು ಸಹ
ತೀರಾ ಬಡವರಾದ ತುಂಬಾ ಸಂಕಷ್ಟದಲ್ಲಿರುವ ಐದು ಕುಟುಂಬ ಗಳು ತನ್ನ ಕಣ್ಣ ಮುಂದೇಯೇ ಕಷ್ಟ ಅನುಭವಿಸುತ್ತಿರುವಾಗ
ಇವರ ನೆರೆವಿಗೆ ಯಾರು ಬರದಿದ್ದಾಗ
ತನ್ನ ವ್ಯಯುಕ್ತಿಕ ಸಮಸ್ಯೆಗಳ ನ್ನು ಬದಿಗೊತ್ತಿ ಐದು ಕುಟುಂಬಗಳಿಗೆ ಸುಮಾರು 15 ದಿನಕ್ಕಾಗುವಷ್ಟು ದಿನಸಿ ಸಾಮಾಗ್ರಿಗಳ ಕಿಟ್ಟನ್ನು ನೀಡಿ ಮಾನವೀಯತೆ ಮೆರದ
ಯುವ ಸಮಾಜ ಸೇವಕ ..
ವಾಸಕ್ಕೆ ಮನೆಯಿಲ್ಲದೇ ಸಂತೆ ಮಾರುಕಟ್ಟೆಯಲ್ಲಿ ಎರಡು ಕುಟುಂಬ ವಾಸ ಮಾಡುತ್ತಿದ್ದಾರೆ ರೇಷನ್ ಕಾರ್ಡ್ ಸಹ ಇವರ ಬಳಿ ಇಲ್ಲದೇ ಇವರಿಗೆ ಏನು ದೊರಕಿರಲಿಲ್ಲ
ಈ ಕಿಟ್ ನೀಡಿದಾಗ ಕಣ್ಣಿರಾಕಿದ್ದು ತುಂಬಾ ದುಃಖ ಮೂಡಿಸುವಂತಿತ್ತು .
ಇದೇ ರೀತಿ ಪರಿಸ್ಥಿತಿ ಮುಂದುವರೆದರೇ ಈಗ ಕಿಟ್ ನೀಡಿದವರಿಗೂ ಹಾಗೂ ಇನ್ನೂ ಹಲವಾರು ಬಡ ಕುಟುಂಬ ಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ಸರ್ಕಾರ ಮತ್ತು ಜನಪ್ರತಿನಿದಿಗಳು ಇವರನ್ನು ಗುರುತಿಸುವ ಕೆಲಸ ಮಾಡಲೇ ಇಲ್ಲ..
No comments
Post a Comment