ಮಡಿಕೇರಿ (TIMES OF COORG):-ತಾಲೂಕಿನ 2 ನೇ ಮೊಣ್ಣಂಗೇರಿ ಮತ್ತು ಸಂಪಾಜೆ ಚಡಾವುನಲ್ಲಿಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ 10 ನೇ ಮೈಲ್‍ನಲ್ಲಿಯ ದಿನಗೂಲಿ ಕಾರ್ಮಿಕರಿಗೆ, ಗ್ಲೇನ್ ಕೂರ್ಗ್ ಎಸ್ಟೇಟ್ ದೇವರಕೊಲ್ಲಿ ಮತ್ತು ಥಾಮ್ಸನ್ ಎಸ್ಟೇಟ್ ಕೊಯನಾಡು ತೋಟದ ಕಾರ್ಮಿಕರಿಗೆ ಮಾಸ್ಕ್, ಹ್ಯಾಂಡ್‍ವಾμï, ಸೋಪ್ ಮತ್ತು ಸ್ಯಾನಿಟೈಜರಗಳನ್ನು ಕಾರ್ಮಿಕ ಇಲಾಖೆ ವತಿಯಿಂದ ಇಂಡಿಯನ್ ರೆಡ್‍ಕ್ರಾಸ್ ಸಂಸ್ಥೆಯವರ ಸಹಯೋಗದಲ್ಲಿ ವಿತರಿಸಲಾಯಿತು.
ಈ ಸಂಧರ್ಭ ಕಾರ್ಮಿಕರಿಗೆ ಕೋವಿಡ್-19ರ ಕುರಿತು ತಿಳುವಳಿಕೆಯನ್ನು ನೀಡುವ ಮೂಲಕ ಎಲ್ಲಾ ಕಾರ್ಮಿಕರ ಕುಂದು ಕೊರತೆಗಳನ್ನು ವಿಚಾರಿಸಿ ಕಾರ್ಮಿಕರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಎಸ್ಟೇಟ್‍ನ ಮಾಲೀಕರುಗೆ ನಿರ್ದೇಶನ ನೀಡಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಅವರು ತಿಳಿಸಿದ್ದಾರೆ.
ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಚ್.ಆರ್.ಮುರಳೀಧರ್, ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಇತರರು ಇದ್ದರು.
No comments
Post a Comment