ಮಡಿಕೇರಿ (TIMES OF COORG):-ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್-19 ತಪಾಸಣೆಯು ನಗರದ ಕೋವಿಡ್ ಆಸ್ಪತ್ರೆ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಆಸ್ಪತ್ರೆ ಹಾಗೂ ಗೋಣಿಕೊಪ್ಪ ಮತ್ತು ಕುಶಾಲನಗರ ಸಮುದಾಯ ಆಸ್ಪತ್ರೆಗಳಲ್ಲಿ ಶನಿವಾರ ಜರುಗಿತು.
ನಗರದ ಕೋವಿಡ್ ಆಸ್ಪತ್ರೆಯಲ್ಲಿ 49 ಮಂದಿ, ವೀರಾಜಪೇಟೆಯಲ್ಲಿ 10, ಗೋಣಿಕೊಪ್ಪದಲ್ಲಿ 14, ಸೋಮವಾರಪೇಟೆಯಲ್ಲಿ 13 ಮತ್ತು ಕುಶಾಲನಗರದಲ್ಲಿ 17 ಮಂದಿ ಒಟ್ಟು 103 ಮಂದಿ ಪತ್ರಕರ್ತರ ಮೂಗು ಮತ್ತು ಗಂಟಲು ದ್ರವವನ್ನು ಸಂಗ್ರಹಿಸಲಾಯಿತು.
ತಾಲೂಕು ವೈದ್ಯಾಧಿಕಾರಿಗಳಾದ ಡಾ.ಗೋಪಿನಾಥ್(ಮಡಿಕೇರಿ), ಡಾ.ಯತಿರಾಜ್(ವಿರಾಜಪೇಟೆ) ಮತ್ತು ಡಾ.ಶ್ರೀನಿವಾಸ್ ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಇತರರು ಇದ್ದರು.
No comments
Post a Comment