ಮಡಿಕೇರಿ (Times Of Coorg) : ಕೊರೋನ ಸಂಬಂಧಿತ ಪ್ರತಿರೋಧಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಕ್ಯಾಲಿಕಟ್ ಮೆಡಿಕಲ್ ಕಾಲೇಜಿಗೆ 1000 PPE ನೀಡಲಾಗುತ್ತದೆ ಎಂದು ಮರ್ಕಝು ಸ್ಸಖಾಫತಿ ಸ್ಸುನ್ನಿಯ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಮುಸ್ಲಿ ಜಮಾಅತ್,SYS,SSF ಇತರ ಸುನ್ನೀ ಸಂಘಟನೆಗಳ ಅತ್ಮೀಯ ನಾಯಕರಾದ A.P ಅಬೂಬಕರ್ ಮುಸ್ಲಿಯಾರ್ ಕಾಂತಪುರಂರವರು ತಿಳಿಸಿದ್ದಾರೆ.ಕೊರೋನ ವಿರುದ್ಧದ ಹೋರಾಟದ ಭಾಗವಾಗಿ ಸರಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೂ ತನ್ನ ಹಾಗೂ ಸುನ್ನೀ ಮರ್ಕಝ್ ಸಂಸ್ಥೆಗಳ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಕೇರಳ ಮುಖ್ಯಮಂತ್ರಿಗೆ ಕಳುಹಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ.
ಕ್ಯಾಲಿಕಟ್ ಮೆಡಿಕಲ್ ಕಾಲೇಜಿಗೆ ಈಗಾಗಲೇ 100 PPE ಕಿಟ್ ನೀಡಲಾಗಿದೆ.ಅಲ್ಲಿನ ಅರೋಗ್ಯ ವಿಭಾಗದ ಸೇವಕರಿಗೆ ಸಂಚರಿಸಲು ಮರ್ಕಝ್ ಸಂಸ್ಥೆಯ ಬಸ್‌ಗಳನ್ನು ಇಂಧನ ಸಹಿತ ನೀಡಲಾಗಿದೆ.SYS ನ ಸಾಂತ್ವನ ವಿಭಾಗದ 40 ಆಂಬ್ಯುಲೆನ್ಸ್‌ಗಳು ವಿವಿಧೆಡೆಗಳಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿದೆ.ಅವಶ್ಯಕತೆ ಬಂದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಾಯವನ್ನು ಒದಗಿಸುವುದಾಗಿಯೂ ಕಾಂತಪುರಂ ತಿಳಿಸಿದರು.
No comments
Post a Comment