ವಾಟ್ಸಾಪ್ ಗ್ರೂಪ್ ನಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುವ ಸಂದೇಶ: ಗ್ರೂಪ್ ಅಡ್ಮಿನ್ ಗೆ ಪೋಲೀಸ್ ನೋಟೀಸ್, ಗ್ರೂಪ್ ಡಿಲೀಟ್ ಮಾಡಲು ಸೂಚನೆ

         ಕುಶಾಲನಗರ (TIMES OF COORG) : ವಾಟ್ಸಾಪ್ ಗ್ರೂಪ್ ಗಳಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಸಂದೇಶಗಳು ಹರಿದಾಡುತ್ತಿರುವ ಹಿನ್ನಲೆ ಕುಶಾಲನಗರ ಪೋಲೀಸರು ಗ್ರೂಪ್ ಅಡ್ಮಿನ್ ಗಳಿಗೆ ಪೋಲೀಸ್ ನೋಟೀಸ್ ನೀಡಿ ಗ್ರೂಪನ್ನು ಡಿಲೀಟ್ ಮಾಡುವಂತೆ ಸೂಚನೆ ನೀಡಿದ್ದಾರೆ. 
ಕುಶಾಲನಗರ ಹಿತರಕ್ಷಣಾ ಸಮಿತಿ ಗ್ರೂಪ್ ಅಡ್ಮಿನ್ ನಂಜುಂಡಸ್ವಾಮಿಯವರಿಗೆ ನೋಟೀಸ್ ನೀಡಿ ಗ್ರೂಪ್ ಡಿಲೀಟ್ ಮಾಡುವಂತೆ ಸೂಚನೆ ನೀಡಿದ್ದಾರೆ. 
ದಿ.ಏ೬ ರಂದು ಗ್ರೂಪಿನಲ್ಲಿ ಹಾಕಿದ್ದ ಪ್ರಚೋದನಕಾರಿ ವೀಡಿಯೋಗೆ ಸಂಬಂಧಸಿದಂತೆ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆಯಾಗುವಂತಹ ಸಂದೇಶಗಳು ಚರ್ಚೆಯಾಗಿದ್ದು, ಈ ಹಿನ್ನಲೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನಲೆ ಗ್ರೂಪ್ ಅಡ್ಮಿನ್ ಗೆ ನೋಟೀಸ್ ನೀಡಿ ಗ್ರೂಪ್ ಡಿಲೀಟ್ ಮಾಡುವಂತೆ ಸೂಚನೆ ನೀಡಲಾಗಿದೆ. ಗ್ರೂಪ್ ಅಡ್ಮಿನ್ ಗಳು ಇಂತಹ ಕೋಮು ಸಂದೇಶಗಳನ್ನು ಗ್ರೂಪಿನಲ್ಲಿ ಹಾಕಲು ಅವಕಾಶ ಮಾಡಿಕೊಡಕೊಡಬಾರದು. ಇಲ್ಲದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕುಶಾಲನಗರ ಪೋಲೀಸರು ಎಚ್ಚರಿಕೆ ನೀಡಿದ್ದಾರೆ.